ತಿರುಪತಿ (ಆಂಧ್ರಪ್ರದೇಶ) – ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಇವರು ಇಲ್ಲಿನ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಾನ್ ವೆಂಕಟೇಶ್ವರನ ದರ್ಶನವನ್ನು ಪಡೆದರು. ಜೊತೆಗೆ ಅವರು ಭಗವಾನ ವೆಂಕಟೇಶ್ವರನ ಪೂಜೆ ಮಾಡಿದರು ಮತ್ತು ಏಕಾಂತ ಸೇವೆಯಲ್ಲಿಯೂ ಸಹ ಭಾಗವಹಿಸಿದರು. ಈ ಸಮಯದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Earlier, on his arrival at Mahadwaram, the CJI was received by TTD Chairman Y.V. Subba Reddy and EO K.S. Jawahar Reddy.#NVRamana #CJIatTirupatihttps://t.co/393GRZPWl4
— Deccan Chronicle (@DeccanChronicle) June 12, 2021
ಮುಖ್ಯ ನ್ಯಾಯಮೂರ್ತಿ ರಮಣ ಅವರು ಕುಟುಂಬದೊಂದಿಗೆ ದೇವಸ್ಥಾನಕ್ಕೆ ಬಂದಾಗ, ಆಗ ದೇವಸ್ಥಾನದ ಪ್ರವೇಶದ್ವಾರದಲ್ಲಿ ಪುರೋಹಿತರು ಮಂತ್ರಗಳನ್ನು ಪಠಿಸುತ್ತಾ ಸ್ವಾಗತವನ್ನು ಮಾಡಿದರು. ಮುಖ್ಯ ನ್ಯಾಯಮೂರ್ತಿ ರಮಣ ಇವರು ಆಂಧ್ರಪ್ರದೇಶದವರಾಗಿದ್ದು, ರಾಜ್ಯದಿಂದ ಆಯ್ಕೆಯಾದ ಮೊದಲ ಮುಖ್ಯ ನ್ಯಾಯಮೂರ್ತಿ ಆಗಿದ್ದಾರೆ.