* ೬೨ ಎಕರೆ ಭೂಮಿಯನ್ನು ತಿರುಮಲ ತಿರುಪತಿ ದೇವಸ್ಥಾನಕ್ಕಾಗಿ ನೀಡಲಾಗಿದೆ !
* ೧೭ ಎಕರೆ ಭೂಮಿಯಲ್ಲಿ ದೇವಾಲಯ, ವೈದಿಕ ಪಾಠಶಾಲೆ, ಯಾತ್ರಾರ್ಥಿಗಳಿಗೆ ಸೌಲಭ್ಯ, ಸಿಬ್ಬಂದಿ ಸಂಕೀರ್ಣ ಇರಲಿದೆ ! * ಸೆಕ್ಷನ್ ೩೭೦ ರದ್ದಾದ ನಂತರ ನಿರ್ಮಿಸಲ್ಪಡುತ್ತಿರುವ ಮೊದಲ ದೇವಾಲಯ ! |
ಜಮ್ಮು – ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಿಂದೂಗಳು ಮತ್ತು ಹಿಂದೂ ಶ್ರದ್ಧಾಸ್ಥಾನಗಳಿಗೆ ಇರುವ ಅಪಾಯ ಇನ್ನೂ ದೂರವಾಗಿಲ್ಲ ಎಂಬುದು ಇಲ್ಲಿ ಪದೇ ಪದೇ ಘಟಿಸುವ ಘಟನೆಗಳಿಂದ ಇನ್ನೂ ಸ್ಪಷ್ಟವಾಗಿದೆ. ಆದ್ದರಿಂದ ಈ ದೇವಾಲಯವನ್ನು ರಕ್ಷಿಸಲು ಖರ್ಚು ಮಾಡುವ ಬದಲು, ಕೇಂದ್ರ ಸರಕಾರವು ಜಮ್ಮು – ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು ಮತ್ತು ಹಿಂದೂಗಳಿಗೆ ಮತ್ತು ಅವರ ಪೂಜಾ ಸ್ಥಳಗಳಿಗೆ ಶಾಶ್ವತ ನಿರ್ಭೀತ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ! |
ಶ್ರೀನಗರ – ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಜಮ್ಮು – ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಭಗವಾನ ವೆಂಕಟೇಶ್ವರ ದೇವಾಲಯದ ಭೂಮಿಪೂಜೆಯ ಸಮಾರಂಭವು ಜೂನ್ ೧೩, ೨೦೨೧ ರಂದು ರಾಜ್ಯಪಾಲ ಮನೋಜ್ ಸಿನ್ಹಾ ಅವರ ಹಸ್ತದಿಂದ ನಡೆಯಲಿದೆ. ಈ ಸಮಯದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ವೈ.ವಿ. ಸುಬ್ಬರೆಡ್ಡಿ ಜೊತೆಗೆ ಇತರ ಪದಾಧಿಕಾರಿಗಳು ಸಹ ಉಪಸ್ಥಿತರಿರುವರು. ‘ನ್ಯೂಸ್ ಆನ್ ಎಐಆರ್’ ಈ ವಾರ್ತಾಸಂಸ್ಥೆಯು ಜಾಲತಾಣದಲ್ಲಿ ಈ ಕುರಿತಾದ ಸುದ್ದಿಯನ್ನು ಪ್ರಸಾರ ಮಾಡಿದೆ, ಮತ್ತು ಅನೇಕ ಜನರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
J&K LG Manoj Sinha to perform Bhoomi Pujan ceremony for Sri Venkateswara Swamy Temple in Jammu tomorrow https://t.co/pZEGhRZjeV
— All India Radio News (@airnewsalerts) June 12, 2021
ವರದಿಯ ಪ್ರಕಾರ, ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ವಿಧಿಯನ್ನು ಕೇಂದ್ರ ಸರಕಾರ ತೆಗೆದ ನಂತರ, ತಿರುಮಲ ತಿರುಪತಿ ದೇವಸ್ಥಾನವು ಅಲ್ಲಿ ಭಗವಾನ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಿತು. ಇದಕ್ಕಾಗಿ ರಾಜ್ಯಪಾಲ ಸಿನ್ಹಾ ಅವರು ೨೦೨೧ ರ ಏಪ್ರಿಲ್‍ನಲ್ಲಿ ದೇವಾಲಯಕ್ಕೆ ೬೨ ಎಕರೆ ಭೂಮಿಯನ್ನು ಒದಗಿಸಿ ಕೊಟ್ಟಿದ್ದಾರೆ. ಈ ೬೨ ಎಕರೆ ಪ್ರದೇಶದಲ್ಲಿ ಮೊದಲ ಹಂತದಲ್ಲಿ ೧೭ ಎಕರೆ ಜಮೀನಿನಲ್ಲಿ ನಿರ್ಮಾಣಕಾರ್ಯ ನಡೆಯಲಿದೆ. ಅದರಲ್ಲಿ ದೇವಾಲಯ, ವೈದಿಕ ಪಾಠಶಾಲೆ, ಸಿಬ್ಬಂದಿ ಸಂಕೀರ್ಣ, ಯಾತ್ರಿಕರಿಗೆ ಸೌಲಭ್ಯಗಳು ಇತ್ಯಾದಿಗಳು ಸೇರಿವೆ. ಇದಕ್ಕಾಗಿ ೩೩ ಕೋಟಿ ರೂಪಾಯಿ ತಗಲಬಹುದು ಎಂದು ಅಂದಾಜಿಸಲಾಗಿದೆ.