ಅಂತರರಾಷ್ಟ್ರೀಯ ನ್ಯಾಯಾಲಯದ ಮುಂದೆ ಮಣಿದ ಪಾಕಿಸ್ತಾನ; ಕುಲಭೂಷಣ ಜಾಧವ ಅವರಿಗೆ ದೊಡ್ಡ ಸಾಂತ್ವನ
ಇಸ್ಲಾಮಾಬಾದ್ – ಅಂತರರಾಷ್ಟ್ರೀಯ ನ್ಯಾಯಾಲಯದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ‘ನ್ಯಾಶನಲ್ ಅಸೆಂಬ್ಲಿ’ಯು ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಅನುಮೋದನೆ ನೀಡಿದೆ. ಇದರಿಂದ ಕುಲಭೂಷಣ್ ಜಾಧವ ಅವರಿಗೆ ದೊಡ್ಡ ಸಾಂತ್ವನ (ಸಮಾಧಾನ) ಸಿಕ್ಕಿದೆ.
ಪಾಕಿಸ್ತಾನದ ಸೈನ್ಯವು ನ್ಯಾಯಾಲಯದಲ್ಲಿ ಕುಲಭೂಷಣ ಜಾಧವ ಅವರಿಗೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಹೇಳಿ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಕುಲಭೂಷಣ್ ಜಾಧವಗೆ ಇರಲಿಲ್ಲ. ಈ ಅಂಶದ ಬಗ್ಗೆ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ನ್ಯಾಯಾಲಯವು ಚಾಟಿ ಬೀಸಿತ್ತು. ಈಗ ‘ನ್ಯಾಶನಲ್ ಅಸೆಂಬ್ಲಿ’ಯು ಅಂಗೀಕರಿಸಿದ ಮಸೂದೆಯನುಸಾರ, ಜಾಧವ ಅವರಿಗೆ ಅನ್ಯಾಯದ ಶಿಕ್ಷೆಯ ವಿರುದ್ಧ ಪಾಕಿಸ್ತಾನದ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
ಮರಣ ದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ, ಕುಲಭೂಷಣ್ ಜಾಧವ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನದ ಸಂಸತ್ ಅನುಮೋದನೆ ನೀಡಿದೆ.#Pakistan #KulbhushanJadhav #KulbhushanJadhavCasehttps://t.co/qmR08xQcOe
— ಪ್ರಜಾವಾಣಿ | Prajavani (@prajavani) June 11, 2021
ಪಾಕಿಸ್ತಾನವು ೨೦೧೬ ರಲ್ಲಿ ಕುಲಭೂಷಣ ಜಾಧವ ಅವರನ್ನು ಅನ್ಯಾಯವಾಗಿ ಬಂಧಿಸಿತ್ತು !
ಕುಲಭೂಷಣ ಜಾಧವ ಅವರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಮಾರ್ಚ್ ೩, ೨೦೧೬ ರಂದು ಬಲೂಚಿಸ್ತಾನದಿಂದ ಬಂಧಿಸಿತ್ತು. ಆ ಸಮಯದಲ್ಲಿ, ಕುಲಭೂಷಣ ಜಾಧವರು ನೌಕಾಪಡೆಯ ‘ಕಮಾಂಡಿಂಗ್ ಆಫೀಸರ್’ ಹುದ್ದೆಯಲ್ಲಿದ್ದರು ಮತ್ತು ಭಾರತದ ಗುಪ್ತಚರ ಸಂಸ್ಥೆ `ರಾ’ ನಲ್ಲಿ ಕೆಲಸ ಮಾಡುತ್ತಿದ್ದರು, ಜೊತೆಗೆ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದರು’, ಎಂದು ಪಾಕಿಸ್ತಾನವು ಆರೋಪಿಸಿತ್ತು. ಜಾಧವರು ಇರಾನ್ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ, ಗೂಢಚಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಸೈನ್ಯ ನ್ಯಾಯಾಲಯವು ಕುಲಭೂಷಣ ಜಾಧವ ಅವರಿಗೆ ೨೦೧೭ ರ ಏಪ್ರಿಲ್‍ನಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಭಾರತ ಇದನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಆ ಸಮಯದಲ್ಲಿ, ಪಾಕಿಸ್ತಾನಕ್ಕೆ ಚಾಟಿ ಬೀಸುತ್ತಾ ಜಾಧವರನ್ನು ಗಲ್ಲಿಗೇರಿಸುವುದನ್ನು ಅಂತರಾಷ್ಟ್ರೀಯ ನ್ಯಾಯಾಲಯವು ತಡೆಹಿಡಿದಿತ್ತು. ಈ ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಗಲ್ಲು ಶಿಕ್ಷೆ ಆಗಬಾರದು ಎಂದು ಅಂತರರಾಷ್ಟ್ರೀಯ ನ್ಯಾಯಾಲಯವು ಎಚ್ಚರಿಕೆಯನ್ನು ನೀಡಿದೆ.