ಹಿಂದೂಗಳು ೫ ರಿಂದ ೬ ಮಕ್ಕಳನ್ನು ಹಡೆಯಿರಿ ! – ಮಹಂತ ನರಸಿಂಹಾನಂದ

ಗಾಜಿಯಾಬಾದ (ಉತ್ತರಪ್ರದೇಶ)  – ಹೆಚ್ಚುತ್ತಿರುವ ಮುಸಲ್ಮಾನರ ಜನಸಂಖ್ಯೆಯು ಕಳವಳಕಾರಿ ಸಂಗತಿಯಾಗಿದೆ. ಮುಸಲ್ಮಾನ ಜನಸಂಖ್ಯೆ ಎಲ್ಲೆಲ್ಲಿ ಹೆಚ್ಚಾಗಿದೆಯೋ ಅಲ್ಲಿ ಇತರರನ್ನು ಜೀವಂತವಾಗಿರಲು ಬಿಡುವುದಿಲ್ಲ. ಮುಸಲ್ಮಾನ ಜನಸಂಖ್ಯೆಯು ಬೆಳೆಯುತ್ತಿರುವ ಪದ್ಧತಿಯನ್ನು ಗಮನಿಸಿದರೆ, ಇದರಿಂದ ದೊಡ್ಡ ಬಿಕ್ಕಟ್ಟು ಬರಲಿದೆ. ಇದಕ್ಕಾಗಿ ಪ್ರತಿಯೊಬ್ಬ ಹಿಂದೂವು ಕನಿಷ್ಠ ೫ ರಿಂದ ೬ ಮಕ್ಕಳಿಗೆ ಜನ್ಮ ನೀಡಬೇಕು ಮತ್ತು ಪ್ರತಿಯೊಬ್ಬ ಹಿಂದೂಗಳು ಶಸ್ತ್ರಸಜ್ಜಿತರಾಗಿರಬೇಕು ಎಂದು ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಇವರು ಹೇಳಿದರು. ಗೋವರ್ಧನ ಪ್ರದಕ್ಷಿಣಾ ಮಾರ್ಗದಲ್ಲಿರುವ ರಮಣರೆತಿ ಆಶ್ರಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಮಹಂತ ನರಸಿಂಹಾನಂದ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ಕೊರೊನಾ ಇದು ಸರಕಾರದ ಪಿತೂರಿಯಾಗಿದೆ. ಮಾಸ್ಕನ್ನು ಹಾಕಲು ಹೇಳುವ ಮೂಲಕ ಜನರನ್ನು ರೋಗಿಗಳನ್ನಾಗಿಸುತ್ತಿದ್ದಾರೆ ನಾನು ಸ್ವತಃ ಮಾಸ್ಕ ಹಾಕಿಕೊಳ್ಳುತ್ತಿಲ್ಲ ಮತ್ತು ಕೊರೊನಾ ಇದೆ ಎಂದು ಸಹ ನಾನು ನಂಬುವುದಿಲ್ಲ. ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆ, ಆ ಜನರು ಮಾಸ್ಕ ಹಾಕಿಕೊಳ್ಳುತ್ತಾರೆ” ಎಂದು ಹೇಳಿದರು.