ಪಾಕಿಸ್ತಾನಿ ಸೈನ್ಯವು ‘ಹಮಾಸ್’ನ ಭಯೋತ್ಪಾದಕರಿಗೆ ತರಬೇತಿಯನ್ನು ನೀಡುತ್ತದೆ ! – ಪಾಕಿಸ್ತಾನದ ಹಿರಿಯ ನಾಯಕನಿಂದ ರಹಸ್ಯಸ್ಪೋಟ
ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ `ಹಮಾಸ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರಿಗೆ ಪಾಕಿಸ್ತಾನಿ ಸೈನ್ಯವೇ ತರಬೇತಿಯನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಮುಖಂಡ ರಾಜಾ ಜಫರ್ ಉಲ್ ಹಕ್ ಹೇಳಿದ್ದಾರೆ. ಪಾಕಿಸ್ತಾನಿ ಸೈನ್ಯವು ದೀರ್ಘಕಾಲದಿಂದ ಹಮಾಸ್ ಉಗ್ರರಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಅದಕ್ಕಾಗಿ `ಸ್ಪೆಶಲ್ ಕಮಾಂಡೋ ಯುನಿಟ್’ನ ಒಂದು ಪಡೆಯು ಕೆಲವು ವರ್ಷಗಳಿಂದ ಅಲ್ಲಿ ನಿಯುಕ್ತಿಗೊಂಡಿದೆ ಎಂದು ಅವರು ಹೇಳಿದರು.