ಪಾಕಿಸ್ತಾನಿ ಸೈನ್ಯವು ‘ಹಮಾಸ್’ನ ಭಯೋತ್ಪಾದಕರಿಗೆ ತರಬೇತಿಯನ್ನು ನೀಡುತ್ತದೆ ! – ಪಾಕಿಸ್ತಾನದ ಹಿರಿಯ ನಾಯಕನಿಂದ ರಹಸ್ಯಸ್ಪೋಟ

* ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಜಿಹಾದಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸು ಸಂಘಟನೆಗಳ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವ ಪಾಕಿಸ್ತಾನ ಸೈನ್ಯವೇ ಹಮಾಸ್ ಉಗ್ರರಿಗೂ ತರಬೇತಿ ನೀಡುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನವನ್ನು ‘ಭಯೋತ್ಪಾದಕ ದೇಶ’ ಎಂದು ಘೋಷಿಸುವುದು ಅವಶ್ಯಕ !

* ಇಸ್ರೈಲ್‍ನ ಸಹಾಯದಿಂದ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಭಾರತವು ಈಗ ವಿಚಾರ ಮಾಡಬೇಕು !

ಇಸ್ಲಾಮಾಬಾದ್ (ಪಾಕಿಸ್ತಾನ) – ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ `ಹಮಾಸ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರಿಗೆ ಪಾಕಿಸ್ತಾನಿ ಸೈನ್ಯವೇ ತರಬೇತಿಯನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಮುಖಂಡ ರಾಜಾ ಜಫರ್ ಉಲ್ ಹಕ್ ಹೇಳಿದ್ದಾರೆ. ಪಾಕಿಸ್ತಾನಿ ಸೈನ್ಯವು ದೀರ್ಘಕಾಲದಿಂದ ಹಮಾಸ್ ಉಗ್ರರಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಅದಕ್ಕಾಗಿ `ಸ್ಪೆಶಲ್ ಕಮಾಂಡೋ ಯುನಿಟ್’ನ ಒಂದು ಪಡೆಯು ಕೆಲವು ವರ್ಷಗಳಿಂದ ಅಲ್ಲಿ ನಿಯುಕ್ತಿಗೊಂಡಿದೆ ಎಂದು ಅವರು ಹೇಳಿದರು.

(ಸೌಜನ್ಯ : Republic World )

ರಾಜಾ ಜಫರ ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಟ್ಯುನಿಶಿಯಾಗೆ ಹೋದಾಗ, ಗಾಜಾದ ‘ಫತಾಹ್’ ಪಕ್ಷದ ಸಹ ಸಂಸ್ಥಾಪಕ ಅಬು ಜಿಹಾದ್ (ಖಾಲಿದ್ ಅಲ್ ವಜೀರ್) ಜೀವಂತವಾಗಿದ್ದರು’ ನನಗೆ ಅವರೊಂದಿಗೆ ಭೇಟಿಯನ್ನು ಏರ್ಪಡಿಸಲಾಗಿತ್ತು. ಆಗ ಅವರು ಯಾವಾಗ ನಾವು ಇಸ್ರೇಲ್‍ನೊಂದಿಗೆ ಯುದ್ಧ ಮಾಡುತ್ತೇವೆಯೋ, ಆಗ ಪಾಕಿಸ್ತಾನದಿಂದ ತರಬೇತಿ ಪಡೆದ ನಮ್ಮ ಯುವಕರು ಮುಂದಿರುತ್ತಾರೆ ಎಂಬ ಮಾಹಿತಿ ನೀಡಿದ್ದರೆಂದು ಹೇಳಿದರು.