ತಬಲಿಗಿ ಜಮಾತ ಪ್ರಕರಣದಲ್ಲಿ ೩ ವಾರ್ತಾ ವಾಹಿನಿಗಳಿಗೆ ದಂಡ ಮತ್ತು ವೀಕ್ಷಕರಲ್ಲಿ ಕ್ಷಮೆಯಾಚಿಸಲು ‘ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡಡ್ರ್ಸ್ ಆಥಾರಿಟಿ’ಯ ಆದೇಶ

ಈ ಸಂದರ್ಭದಲ್ಲಿ ಎನ್.ಬಿ.ಎಸ್.ಎ.ಯು ಒಂದು ವಾರ್ತಾ ವಾಹಿನಿಗೆ ೧ ಲಕ್ಷ ರೂಪಾಯಿ ಮತ್ತು ಇನ್ನೊಂದು ಪ್ರಾದೇಶಿಕ ವಾರ್ತಾ ವಾಹಿನಿಗೆ ೫೦ ಸಾವಿರ ರೂಪಾಯಿ ದಂಡದ ಜೊತೆಗೆ, ಜೂನ್ ೨೩ ರಂದು ರಾತ್ರಿ ೯ ಗಂಟೆಗೆ ಪ್ರಸಾರವಾಗಲಿರುವ ಸುದ್ದಿಪತ್ರದ ಮೊದಲು ಪ್ರೇಕ್ಷಕರಲ್ಲಿ ಕ್ಷಮೆಯಾಚಿಸುವಂತೆ ವಾರ್ತಾವಾಹಿನಿಗೆ ಸೂಚನೆ ನೀಡಿದೆ.

ಉತ್ತರಪ್ರದೇಶದ ಮಾತಿ ಗ್ರಾಮದಲ್ಲಿ ಇಂದಿನ ತನಕ ಕೊರೊನಾ ಸೋಂಕು ಕಂಡುಬಂದಿಲ್ಲ !

ಲಕ್ಷ್ಮಣಪುರಿ ನಗರದಿಂದ ೨೦ ಕಿ.ಮೀ ದೂರದಲ್ಲಿರುವ ‘ಮಾತಿ’ಯಲ್ಲಿ ಇಂದಿನ ತನಕ ಕೊರೊನಾದ ಒಬ್ಬ ರೋಗಿಯೂ ಪತ್ತೆಯಾಗಿಲ್ಲ. ಈ ಗ್ರಾಮದಲ್ಲಿ ೧೨೦ ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು ೧೨೦೦ ಜನರು ವಾಸಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ನಾವು ಅಲೋಪತಿಯ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಇಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಆಯುರ್ವೇದ ವೈದ್ಯರಿಂದ ಔಷಧಿಯನ್ನು ತೆಗೆದುಕೊಳ್ಳಲಾಗುತ್ತದೆ.

ನಿರ್ಬಂಧಗಳನ್ನು ಸಡಿಲಿಸಿದಾಗ ನಿಯಮಗಳನ್ನು ಉಲ್ಲಂಘನೆಯಾಗುತ್ತದೆ, ಇದರಿಂದ ಮೂರನೇ ಅಲೆಯು ಭಯಾನಕವಾಗಬಹುದು ! – ಕೇಂದ್ರ ಗೃಹಮಂತ್ರಾಲಯಕ್ಕೆ ಆತಂಕ

ಕೊರೊನಾದ ಎರಡನೇ ಅಲೆಯು ಕಡಿಮೆಯಾಗುತ್ತಿದ್ದಂತೆ, ಅನೇಕ ರಾಜ್ಯಗಳು ಕೇಂದ್ರ ಗೃಹ ಸಚಿವಾಲಯ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಪ್ರಾರಂಭಿಸಿವೆ. ಇದರಿಂದ ಮತ್ತೆ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಇದರಿಂದ ಕೇಂದ್ರ ಗೃಹ ಸಚಿವಾಲಯವು ಆತಂಕವನ್ನು ವ್ಯಕ್ತಪಡಿಸಿದೆ.

ಗುಜರಾತನ ಸಾಬರಮತಿ ನದಿಯಲ್ಲಿ ಕೊರೋನಾ ವಿಷಾಣು ಪತ್ತೆ !

ಸಾಬರಮತಿ ನದಿ ಸಹಿತ ಕಾಂಬರಿಯಾ ಮತ್ತು ಚಾಂದೋಲಾ ಸರೋವರಗಳ ನೀರಿನ ಮಾದರಿಗಳಲ್ಲಿ ಕೊರೊನಾ ವಿಷಾಣು ಪತ್ತೆಯಾಗಿದೆ. ಇದಲ್ಲದೆ, ಅಸ್ಸಾಂನ ಗೋಹಾಟಿಯ ನದಿಗಳಿಂದ ನೀರಿನ ಮಾದರಿಗಳನ್ನು ಪರಿಶೀಲಿಸಲಾಯಿತು. ಭಾರೂ ನದಿಯಿಂದ ತೆಗೆದ ಮಾದರಿಯಲ್ಲಿ ಕೊರೋನಾ ವಿಷಾಣು ಪತ್ತೆಯಾಗಿದೆ.

ಹಿಂದೂ ದೇವಾಲಯಗಳ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡಲು ತಮಿಳುನಾಡಿನ ಸ್ಟಾಲಿನ್ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ! – ನ್ಯಾಯವಾದಿ ಸೀತಾರಾಮ ಕಲಿಂಗಾ

ಭಾರತದ ಇತಿಹಾಸದಲ್ಲಿ, ರಾಜರು ಮತ್ತು ಮಹಾರಾಜರು ದೇವಾಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಡೆಸುತ್ತಿರಲಿಲ್ಲ, ಆದರೆ ದೇವಾಲಯಗಳಿಗೆ ಭೂಮಿ ಮತ್ತು ಹಣವನ್ನು ದಾನ ಮಾಡುತ್ತಿದ್ದರು. ಆ ಸಮಯದಲ್ಲಿ ದೇವಾಲಯಗಳ ನಿರ್ವಹಣೆಯನ್ನು ಭಕ್ತರು ನೋಡಿಕೊಳ್ಳುತ್ತಿದ್ದರು

ಯುವ ಸಾಧಕರು ಪ್ರತಿಯೊಂದು ಕೃತಿಯನ್ನು ಸಾಧನೆ ಮತ್ತು ಧರ್ಮಾಚರಣೆ ಎಂದು ಮಾಡಲು ಪ್ರಯತ್ನಿಸಬೇಕು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ನಮ್ಮ ಸಾಧನೆಯ ವೇಗವನ್ನು ಹೆಚ್ಚಿಸಿ ಗುರುಕೃಪೆಯನ್ನು ಸಂಪಾದಿಸಬೇಕು. ಇಂದು ಎಷ್ಟೋ ಮಕ್ಕಳು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ನಮ್ಮಲ್ಲಿರುವ ಕೌಶಲ್ಯದ ಉಪಯೋಗವನ್ನು ಸಾಧನೆಗಾಗಿ ನೀಡಬೇಕು.

೨೦೩೮ ರ ವೇಳೆಗೆ ಅಸ್ಸಾಂನಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವರು !

ಅಸ್ಸಾಂನಲ್ಲಿ ಪ್ರಸ್ತುತ ಮುಸಲ್ಮಾನರ ಜನಸಂಖ್ಯೆಯ ಬೆಳವಣಿಗೆಯ ದರವು ಹೀಗೆಯೇ ಮಂದುವರಿದರೆ, ೨೦೩೮ ರ ಹೊತ್ತಿಗೆ ಅಸ್ಸಾಂನಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವರು, ಮುಸಲ್ಮಾನರು ಬಹುಸಂಖ್ಯಾತರಾಗುವರು ಎಂದು ಅಸ್ಸಾಂನಲ್ಲಿ ಬಿಜೆಪಿ ಶಾಸಕ ಮತ್ತು ಪ್ರದೇಶಾಧ್ಯಕ್ಷ ಜಯಂತ ಮಲ್ಲಾ ಬರುವಾ ಇವರು ಆತಂಕ ವ್ಯಕ್ತಪಡಿಸಿದ್ದಾರೆ.

ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ನೇಮಕಗೊಂಡ ಭಾರತೀಯ ಮೂಲದ ಸತ್ಯಾ ನಾಡೆಲ್ಲಾ !

ವಿಶ್ವದ ಸಾಫ್ಟ್‌ವೇರ್ ತಯಾರಿಕಾ ದೈತ್ಯ ‘ಮೈಕ್ರೋಸಾಫ್ಟ್ ಕಾರ್ಪೊರೇಶನ್’ನ ಅಧ್ಯಕ್ಷರಾಗಿ ಭಾರತೀಯ ಮೂಲದ ಸತ್ಯಾ ನಾಡೆಲಾ ಅವರನ್ನು ನೇಮಿಸಲಾಗಿದೆ. ೫೩ ವರ್ಷದ ನಾಡೆಲಾ ಅವರನ್ನು ೨೦೧೪ ರಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಎಂದು ನೇಮಿಸಲಾಗಿತ್ತು.

ಬಿಜೆಪಿಯನ್ನು ವಿರೋಧಿಸಿದರೆ ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಇವುಗಳಿಂದ ೧೦೦ ಕೋಟಿ ರೂಪಾಯಿ ನೀಡುವ ಪ್ರಸ್ತಾವನೆ !

ಶ್ರೀ ರಾಮಮಂದಿರಕ್ಕೆ ೨೦ ಕೋಟಿ ರೂಪಾಯಿಯ ಭೂಮಿ ಖರೀದಿಯ ಪ್ರಕರಣದಿಂದ ಬಿಜೆಪಿ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ್ನು ವಿರೋಧಿಸಲು ಆಮ್ ಆದಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನಿಂದ ೧೦೦ ಕೋಟಿ ರೂಪಾಯಿಗಳ ಪ್ರಸ್ತಾವನೆ ಬಂದಿತ್ತು

ಕೊರೊನಾ ಕಾಲದಲ್ಲಿ ಭಾರತಕ್ಕೆ ಸಹಾಯ ಮಾಡುವ ಹೆಸರಿನಲ್ಲಿ ಪಾಕಿಸ್ತಾನಿ ಸಂಸ್ಥೆಯಿಂದ ಕೋಟಿಗಟ್ಟಲೆ ರೂಪಾಯಿ ಸಂಗ್ರಹ !

ಈ ಸೇವಾ ಸಂಸ್ಥೆಗಳು ಪಾಕಿಸ್ತಾನದ ಸೈನ್ಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಸೈನ್ಯದ ಹೇಳಿಕೆಗನುಸಾರ, ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಶಂಕಿಸಲಾಗಿದೆ. ಆದ್ದರಿಂದ ಇದೇ ಕೋಟಿಗಟ್ಟಲೆ ರೂಪಾಯಿಗಳನ್ನು ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸುವ ಸಾಧ್ಯತೆಯಿದೆ.