ನವ ದೆಹಲಿ – ಕೊರೊನಾದ ಎರಡನೇ ಅಲೆಯು ಕಡಿಮೆಯಾಗುತ್ತಿದ್ದಂತೆ, ಅನೇಕ ರಾಜ್ಯಗಳು ಕೇಂದ್ರ ಗೃಹ ಸಚಿವಾಲಯ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲು ಪ್ರಾರಂಭಿಸಿವೆ. ಇದರಿಂದ ಮತ್ತೆ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಇದರಿಂದ ಕೇಂದ್ರ ಗೃಹ ಸಚಿವಾಲಯವು ಆತಂಕವನ್ನು ವ್ಯಕ್ತಪಡಿಸಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ‘ಕರೋನಾಗೆ ಸಂಬಂಧಿಸಿದ ನಿಯಮಗಳನ್ನು ಜನರು ಪಾಲಿಸದಿದ್ದರೆ, ಕೊರೊನಾದ ಮೂರನೇ ಅಲೆಯು ತುಂಬಾ ಭಯಾನಕವಾಗಬಲ್ಲದು’ ಎಂಬ ಆತಂಕವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಕೊರೊನಾದ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿತು. ನಾಗರಿಕರು ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾರ್ಯದರ್ಶಿಗಳಿಗೆ ಆದೇಶಿಸಲಾಗಿದೆ. (ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ಇತರ ನಾಗರಿಕರಿಗೂ ಅದರ ಭಯವಿಲ್ಲ ಮತ್ತು ಅವರು ಸಹ ಅದನ್ನು ಉಲ್ಲಂಘಿಸುತ್ತಾರೆ, ಆದ್ದರಿಂದ ಪೊಲೀಸರು ಮತ್ತು ಆಡಳಿತವೇ ಇದಕ್ಕೆ ಹೆಚ್ಚಿನ ಜವಾಬ್ದಾರವಾಗಿದೆ ! – ಸಂಪಾದಕ)