ಗುಜರಾತನ ಸಾಬರಮತಿ ನದಿಯಲ್ಲಿ ಕೊರೋನಾ ವಿಷಾಣು ಪತ್ತೆ !

ಸಾಬರಮತಿ ನದಿ

ಕರ್ಣಾವತಿ (ಗುಜರಾತ್) – ಇಲ್ಲಿ ಸಾಬರಮತಿ ನದಿ ಸಹಿತ ಕಾಂಬರಿಯಾ ಮತ್ತು ಚಾಂದೋಲಾ ಸರೋವರಗಳ ನೀರಿನ ಮಾದರಿಗಳಲ್ಲಿ ಕೊರೊನಾ ವಿಷಾಣು ಪತ್ತೆಯಾಗಿದೆ. ಇದಲ್ಲದೆ, ಅಸ್ಸಾಂನ ಗೋಹಾಟಿಯ ನದಿಗಳಿಂದ ನೀರಿನ ಮಾದರಿಗಳನ್ನು ಪರಿಶೀಲಿಸಲಾಯಿತು. ಭಾರೂ ನದಿಯಿಂದ ತೆಗೆದ ಮಾದರಿಯಲ್ಲಿ ಕೊರೋನಾ ವಿಷಾಣು ಪತ್ತೆಯಾಗಿದೆ. ನದಿಗಳಿಂದ ತೆಗೆದ ಮಾದರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಾಣು ಪತ್ತೆಯಾಗಿದೆ.

ನದಿಗಳ ನೀರಿನಲ್ಲಿ ಕೊರೊನಾ ವಿಷಾಣುವಿನ ಸೋಂಕಿನ ಬಗ್ಗೆ ದೇಶದ ಎಂಟು ಸಂಸ್ಥೆಗಳು ಸಂಶೋಧನೆ ನಡೆಸಿವೆ. ಗುಜರಾತನ ಗಾಂಧಿನಗರದ ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಭೂ ವಿಜ್ಞಾನ ವಿಭಾಗದ ಮನೀಶ ಕುಮಾರ ಮಾತನಾಡಿ, ಈವರೆಗೆ ಕೊರೊನಾ ವಿಷಾಣುಗಳು ಒಳಚರಂಡಿ ಕಾಲುವೆಗಳಲ್ಲಿ ಮಾತ್ರ ಜೀವಂತವಾಗಿರುವುದು ಕಂಡು ಬಂದಿತ್ತು; ಆದರೆ ನದಿಯ ನೀರಿನ ಮಾದರಿಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಕೊರೊನಾ ವಿಷಾಣು ಕಂಡುಬಂದಿದೆ. ಕರ್ಣಾವತಿಯಲ್ಲಿ ಅತಿ ಹೆಚ್ಚು ಕೊಳಚೆನೀರಿನ ಸಂಸ್ಕರಣಾ ಘಟಕಗಳಿದ್ದು, ಗೋಹಾಟಿಯಲ್ಲಿ ಒಂದೂ ಇಲ್ಲ. ಕೊರೊನಾ ವಿಷಾಣು ಎರಡೂ ಕಡೆಯ ನೀರಿನಲ್ಲಿ ಕಂಡುಬಂದಿದೆ. ಆದ್ದರಿಂದ ‘ಕೊರೊನಾ ವಿಷಾಣು ನದಿಯ ಶುದ್ಧ ನೀರಿನಲ್ಲಿ ಬದುಕಬಲ್ಲದು’, ಎಂಬ ಮಾಹಿತಿ ಗಮನಕ್ಕೆ ಬಂದಿದೆ.