ಉತ್ತರಪ್ರದೇಶದ ಮಾತಿ ಗ್ರಾಮದಲ್ಲಿ ಇಂದಿನ ತನಕ ಕೊರೊನಾ ಸೋಂಕು ಕಂಡುಬಂದಿಲ್ಲ !

ಆಯುರ್ವೇದದ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕೊರೊನಾ ಸೋಂಕು ಇಲ್ಲ ! – ಗ್ರಾಮಸ್ಥರ ಹೇಳಿಕೆ

ಆಯುರ್ವೇದದಿಂದಾಗುವ ಲಾಭವನ್ನು ನೋಡುತ್ತಾ, ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ದೇಶಾದ್ಯಂತದ ನಾಗರಿಕರಿಗೆ ಆಯುರ್ವೇದದ ಔಷಧಿಗಳನ್ನು ಒದಗಿಸುವ ಪ್ರಯತ್ನಿಸಬೇಕು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಲಕ್ಷ್ಮಣಪುರಿ ನಗರದಿಂದ ೨೦ ಕಿ.ಮೀ ದೂರದಲ್ಲಿರುವ ‘ಮಾತಿ’ಯಲ್ಲಿ ಇಂದಿನ ತನಕ ಕೊರೊನಾದ ಒಬ್ಬ ರೋಗಿಯೂ ಪತ್ತೆಯಾಗಿಲ್ಲ. ಈ ಗ್ರಾಮದಲ್ಲಿ ೧೨೦ ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು ೧೨೦೦ ಜನರು ವಾಸಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ನಾವು ಅಲೋಪತಿಯ ಔಷಧಿಗಳನ್ನು ತೆಗೆದುಕೊಳ್ಳುವುದಿಲ್ಲ ಇಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಆಯುರ್ವೇದ ವೈದ್ಯರಿಂದ ಔಷಧಿಯನ್ನು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಕೊರೊನಾ ನಮ್ಮ ಹಳ್ಳಿಗೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

೧. ಈ ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ. ಇಲ್ಲಿಂದ ೧೦ ಕಿ.ಮೀ ದೂರದಲ್ಲಿ ಆರೋಗ್ಯ ಕೇಂದ್ರವಿದ್ದರೂ ವೈದ್ಯರು ಅಲ್ಲಿ ಲಭ್ಯರಿರುವುದಿಲ್ಲ. ವೈದ್ಯಕೀಯ ತಂಡವೂ ಯಾವತ್ತೂ ಹಳ್ಳಿಗೆ ಬರುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು. (ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಭಾರತ ಮಾಡಿದ ಪ್ರಗತಿ ! – ಸಂಪಾದಕ)

. ‘ಆರೋಗ್ಯ ಭಾರತೀ’ಯ ಕಾರ್ಯದರ್ಶಿ (‘ಆರೋಗ್ಯ ಭಾರತೀ’ ಈ ಉಪಕ್ರಮವನ್ನು ಆರ್.ಎಸ್.ಎಸ್ ನಡೆಸುತ್ತಿದೆ) ಮತ್ತು ವೈದ್ಯ ಅಭಯ ನಾರಾಯಣ ತಿವಾರಿ ಇವರು, ‘ನಾವು ಕಳೆದ ೪ ವರ್ಷಗಳಿಂದ ಈ ಗ್ರಾಮವನ್ನು ದತ್ತು ಪಡೆದಿದ್ದೇವೆ. ನಮ್ಮ ಸಂಸ್ಥೆಯಿಂದ ಆಯುರ್ವೇದ ಔಷಧಿಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು.

೩. ತಿವಾರಿಯವರು ತಮ್ಮ ಮಾತನ್ನು ಮುಂದುವರಡಸುತ್ತಾ, ಕೊರೊನಾದ ೩ ನೇ ಅಲೆ ಬರುವ ಸಾಧ್ಯತೆಯಿಂದ, ಆರೋಗ್ಯ ಭಾರತೀಯದಿಂದ ಇಲ್ಲಿನ ಮಕ್ಕಳಿಗೆ ಪ್ರತಿ ತಿಂಗಳಿನ ಪುಷ್ಯ ನಕ್ಷತ್ರದ ಸಮಯದಲ್ಲಿ ‘ಸ್ವರ್ಣ ಪ್ರಾಶನ’ದ ಹನಿಗಳನ್ನು ನೀಡಲಾಗುತ್ತದೆ ಇದು ಅವರಲ್ಲಿ ರೋಗನಿರೋಧಕ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೊರೊನಾದಿಂದಲೂ ರಕ್ಷಿಸುತ್ತದೆ ಎಂದು ಹೇಳಿದರು.