ತಬಲಿಗಿ ಜಮಾತ ಪ್ರಕರಣದಲ್ಲಿ ೩ ವಾರ್ತಾ ವಾಹಿನಿಗಳಿಗೆ ದಂಡ ಮತ್ತು ವೀಕ್ಷಕರಲ್ಲಿ ಕ್ಷಮೆಯಾಚಿಸಲು ‘ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡಡ್ರ್ಸ್ ಆಥಾರಿಟಿ’ಯ ಆದೇಶ

ಬೆಂಗಳೂರು (ಕರ್ನಾಟಕ) – ಕಳೆದ ವರ್ಷ ದೆಹಲಿಯ ನಿಜಾಮುದ್ದೀನ ಮಾರ್ಕಜನ ತಬಲಿಗಿ ಜಮಾತನ ಸದಸ್ಯರು ದೆಹಲಿಯಿಂದ ತಮ್ಮ ಊರಿಗೆ ಮರಳಿದ ನಂತರ ದೇಶದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡಿತ್ತು. ಇದರಿಂದ, ಪ್ರಸಾರ ಮಾಧ್ಯಮಗಳು ಅದೇರೀತಿ ರಾಜಕೀಯ ಮುಖಂಡರು ತಬಲಿಗಿ ಜಮಾತನ ಜನರನ್ನು ಹೊಣೆಗಾರರನ್ನಾಗಿ ಮಾಡಲು ಪ್ರಾರಂಭಿಸಿದರು. ಅನಂತರ ಈ ರೀತಿಯ ವರದಿಯು ಆಕ್ಷೇಪಾರ್ಹವಾಗಿದೆ ಎಂದು ವಿವಿಧ ನ್ಯಾಯಾಲಯಗಳು ಹೇಳಿದ್ದವು. ಆ ಸಮಯದಲ್ಲಿ ಘಟನೆಯ ಬಗ್ಗೆ ವರದಿ ಮಾಡಿದ್ದಕ್ಕಾಗಿ ಕರ್ನಾಟಕದ ಮೂರು ವಾರ್ತಾ ವಾಹಿನಿಗಳಿಗೆ ದಂಡವನ್ನು ವಿಧಿಸಲಾಗಿದೆ. ಅದೇರೀತಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಲು ಸಹ ಕೇಳಲಾಗಿದೆ. ‘ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡಡ್ರ್ಸ್ ಆಥಾರಿಟಿ’ (ಎನ್.ಬಿಎಸ್.ಎ.) ಅಂದರೆ ‘ಸುದ್ದಿ ಪ್ರಸಾರ ಮಾನದಂಡ ಪ್ರಾಧಿಕಾರ’ವು ಈ ಕ್ರಮವನ್ನು ಕೈಗೊಂಡಿದೆ.

. ಎನ್.ಬಿ.ಎಸ್.ಎ.ಯು, ತಬಲಿಗಿ ಜಮಾತನ ಬಗ್ಗೆ ಮಾಡಲಾಗಿದ್ದ ವರದಿಯು ಅತ್ಯಂತ ಆಕ್ಷೆಪಾರ್ಹ ಮತ್ತು ಊಹೆಯ ಆಧಾರದ ಮೇಲೆ ಮಾತ್ರ ಇತ್ತು. ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಭಾಷೆ ಅಸಭ್ಯವಾಗಿತ್ತು. ಅದರಲ್ಲಿ ಪೂರ್ವಾಗ್ರಹವಿತ್ತು. ಕಾರ್ಯಕ್ರಮದ ಭಾಷೆ ಪ್ರಚೋದನಕಾರಿ ಮತ್ತು ಧಾರ್ಮಿಕ ಭಾವನೆಗಳನ್ನು ಪರಿಗಣಿಸದೆ ಸಾಮಾಜಿಕ ಸಾಮರಸ್ಯದ ಚೌಕಟ್ಟನ್ನು ದಾಟಿ ಮಾಡಲಾಗಿತ್ತು. ಸಾಮಾಜಿಕ ದ್ವೇಷಗಳನ್ನು ಸೃಷ್ಟಿಸುವ ಮೂಲಕ ಅದನ್ನು ಕೆರಳಿಸಿ ಮತ್ತು ಪ್ರೋತ್ಸಾಹ ನೀಡುವಂತಹ ಭಾಷೆಯಲ್ಲಿತ್ತು.

. ಈ ಸಂದರ್ಭದಲ್ಲಿ ಎನ್.ಬಿ.ಎಸ್.ಎ.ಯು ಒಂದು ವಾರ್ತಾ ವಾಹಿನಿಗೆ ೧ ಲಕ್ಷ ರೂಪಾಯಿ ಮತ್ತು ಇನ್ನೊಂದು ಪ್ರಾದೇಶಿಕ ವಾರ್ತಾ ವಾಹಿನಿಗೆ ೫೦ ಸಾವಿರ ರೂಪಾಯಿ ದಂಡದ ಜೊತೆಗೆ, ಜೂನ್ ೨೩ ರಂದು ರಾತ್ರಿ ೯ ಗಂಟೆಗೆ ಪ್ರಸಾರವಾಗಲಿರುವ ಸುದ್ದಿಪತ್ರದ ಮೊದಲು ಪ್ರೇಕ್ಷಕರಲ್ಲಿ ಕ್ಷಮೆಯಾಚಿಸುವಂತೆ ವಾರ್ತಾವಾಹಿನಿಗೆ ಸೂಚನೆ ನೀಡಿದೆ.

. ಆಂಗ್ಲ ಭಾಷೆಯ ವಾರ್ತಾ ವಾಹಿನಿಗೂ ಈ ಪ್ರಕರಣದಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಆಂಗ್ಲ ಸುದ್ದಿ ವಾಹಿನಿಯು ತಬಲಿಗಿ ಜಮಾತನ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡಿದ ದೃಶ್ಯಗಳು ಮತ್ತು ನಂತರದ ಪ್ರಸಾರಗಳು ಹೊಂದಿಕೆಯಾಗುವುದಿಲ್ಲ ಎಂದು ಎನ್.ಬಿ.ಎಸ್.ಎ.ಯು ಹೇಳಿದೆ.