ಅಸ್ಸಾಂನಲ್ಲಿಯೂ ಬರಲಿದೆ ‘ಲವ್ ಜಿಹಾದ್’ ವಿರುದ್ಧ ಕಾನೂನು !

ಹಿಂದೂ ಮತ್ತು ಮುಸಲ್ಮಾನ ಇಬ್ಬರಿಗೂ ಕಾನೂನು ಅನ್ವಯವಾಗಲಿದೆ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೌಹಟಿ (ಅಸ್ಸಾಂ) – ಅಸ್ಸಾಂನ ಬಿಜೆಪಿ ಸರಕಾರವು ‘ಲವ್ ಜಿಹಾದ್’ ವಿರುದ್ಧ ಕಾನೂನು ತರಲಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ನಾವು ಇದಕ್ಕಾಗಿ ‘ಲವ್ ಜಿಹಾದ್’ ಪದವನ್ನು ಬಳಸುವುದಿಲ್ಲ ಏಕೆಂದರೆ ಮುಸಲ್ಮಾನ ಯುವಕನೊಬ್ಬನು ಮಾತ್ರ ಹಿಂದೂ ಮಹಿಳೆಗೆ ಮೋಸ ಮಾಡಿ ಅವಳನ್ನು ಮದುವೆಯಾಗುತ್ತಾನೆ, ಅದು ‘ಲವ್ ಜಿಹಾದ್’ ಎಂದಾಗುವುದಿಲ್ಲ. ಒಂದು ವೇಳೆ ಹಿಂದೂ ಯುವಕರು ಅದೇ ರೀತಿ ಮಾಡುತ್ತಿದ್ದರೆ, ಅದು ಸಹ ‘ಲವ್ ಜಿಹಾದ್’ ಕೂಡ ಆಗಿರುತ್ತದೆ. (ಮೂಲತಃ, ‘ಲವ್ ಜಿಹಾದ್’ ಇದು ಮತಾಂಧ ಮನೋವೃತ್ತಿಯಿಂದಲೇ ಉತ್ಪತ್ತಿಯಾಗಿದೆ. ಇದರಲ್ಲಿ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುವುದು ಮತಾಂಧರ ಪಿತೂರಿಯಾಗಿದೆ. ಇಸ್ಲಾಂ ಧರ್ಮವನ್ನು ಗುರಿಯಾಗಿಸಲು ಮುಸಲ್ಮಾನ ಹುಡುಗಿಯರನ್ನು ಎಷ್ಟು ಹಿಂದೂ ಯುವಕರು ಗುರಿಯಾಗಿಸುತ್ತಾರೆ ಎಂಬುದು ಸಂಶೋಧನೆಯ ವಿಷಯವಾಗಿದೆ. ಆದ್ದರಿಂದ ‘ಸರ್ವಧರ್ಮಸಮಭಾವ’ ಎಂದು ಹಿಂದೂ ಮತ್ತು ಮುಸಲ್ಮಾನರಿಗೆ ಒಂದೇ ನಿಯಮವನ್ನು ಜಾರಿಗೊಳಿಸುವ ಈ ಪ್ರಕಾರವನ್ನು ನಿಲ್ಲಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ ! – ಸಂಪಾದಕರು) ಈ ಕಾಯ್ದೆಯಿಂದ ಇಂತಹ ಘಟನೆಗಳು ನಿಲ್ಲಬಹುದು ಎಂದು ಹೇಳಿದರು.

ದೇಶದಲ್ಲಿನ ೧೦ ರಾಜ್ಯಗಳಲ್ಲಿ ಲವ್ ಜಿಹಾದ ಕಾಯ್ದೆ

ದೇಶದ ತಮಿಳನಾಡು ರಾಜ್ಯವು ಪ್ರಪ್ರಥಮವಾಗಿ ಲವ್ ಜಿಹಾದ ವಿರೋಧಿ ಕಾನೂನನ್ನು ರೂಪಿಸಿತ್ತು; ಆದರೆ ೨೦೦೩ ರಲ್ಲಿ ಅದನ್ನು ರದ್ದು ಪಡಿಸಲಾಯಿತು. ಸಧ್ಯ ದೇಶದಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಅರುಣಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸಗಡ, ಮಧ್ಯಪ್ರದೇಶ, ಗುಜರಾತ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಲವ್ ಜಿಹಾದ್ ಕಾನೂನು ನಿರ್ಮಿಸಲಾಗಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾನೂನಿಗನುಗುಣವಾಗಿ ಆರೋಪಿ ವ್ಯಕ್ತಿಗೆ ೫ ವರ್ಷಗಳ ತನಕ, ಪರಿಶಿಷ್ಟ ಜಾತಿಯ ಅಥವಾ ಪಂಗಡದ ಸಂದರ್ಭದಲ್ಲಿ ೭ ವರ್ಷಗಳ ಕಾಲ ಸೆರೆಮನೆಯ ಶಿಕ್ಷೆಯನ್ನು ನೀಡಲಾಗಿದೆ. ಉತ್ತರಪ್ರದೇಶದಲ್ಲಿ ಈ ಕಾನೂನಿನ ಅಡಿಯಲ್ಲಿ ೧೦ ವರ್ಷಗಳವರೆಗೆ ಸೆರೆಮನೆವಾಸದ ಏರ್ಪಾಡು ಮಾಡಲಾಗಿದೆ.