ಭಯೋತ್ಪಾದಕರಿಗೆ ಹಣಕಾಸು ಒದಗಿಸಿದ್ದಕ್ಕಾಗಿ ಕಾಶ್ಮೀರದಲ್ಲಿ ಈವರೆಗೆ ೫ ಮಂದಿಯ ಬಂಧನ !

ಓರ್ವ ಮಹಿಳೆಯ ಸಮಾವೇಶ !

ಇಂತಹ ದೇಶದ್ರೋಹಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದರೆ ಮಾತ್ರ ಇಂತಹ ಕೃತ್ಯಗಳು ನಿಲ್ಲುತ್ತವೆ ಎಂಬುದನ್ನು ಸರಕಾರವು ಅರಿತುಕೊಳ್ಳಬೇಕು !

ಶ್ರೀನಗರ : ಭಯೋತ್ಪಾದಕರಿಗೆ ಹಣಕಾಸು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಈವರೆಗೆ ಕಾಶ್ಮೀರದಲ್ಲಿ ಐದು ಜನರನ್ನು ಬಂಧಿಸಿದೆ. ಇದರಲ್ಲಿ ೩೬ ವರ್ಷದ ಮಹಿಳೆ ಕೂಡ ಭಾಗಿಯಾಗಿದ್ದು, ಆಕೆಯಿಂದ ಚೀನಾದ ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರಿಗೆ ಹಣಕಾಸು ಪೂರೈಕೆಯಾಗುತ್ತಿರುವ ಪ್ರಕರಣದ ನಿಮಿತ್ತ ದಳವು ಜಮ್ಮು ಮತ್ತು ಕಾಶ್ಮೀರದ ಹಲವಾರು ಭಾಗಗಳಲ್ಲಿ ದಾಳಿ ನಡೆಸಿತು. ಈ ಹಣಕಾಸನ್ನು ಕಾಶ್ಮೀರ ಕಣಿವೆಯಲ್ಲಿರುವ ಭಯೋತ್ಪಾದಕರಿಗೆ ‘ಇಸ್ಲಾಮಿಕ್ ಸ್ಟೇಟ್’ನ ಜಿಹಾದಿ ಭಯೋತ್ಪಾದಕ ಸಂಘಟನೆಯಿಂದ ನೀಡಲಾಗುತ್ತಿದೆಯೇ ಎಂದು ದಳವು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಜನರನ್ನು ಬಂಧಿಸುವ ನಿರೀಕ್ಷೆಯಿದೆ. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ದಳ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿವೆ.