ರಾಷ್ಟ್ರಗೀತೆಗಾಗಿ ಎದ್ದು ನಿಲ್ಲದಿರುವುದು, ರಾಷ್ಟ್ರಗೀತೆಗೆ ಮಾಡಿದ ಅವಮಾನ; ಆದರೆ ಅಪರಾಧವಲ್ಲ ! – ಜಮ್ಮು- ಕಾಶ್ಮೀರ ಉಚ್ಚನ್ಯಾಯಾಲಯದ ವ್ಯಾಖ್ಯಾನ

* ಇದರಿಂದ, ‘ಕಾಶ್ಮೀರದ ಪ್ರತ್ಯೇಕತಾವಾದಿ ಮನಸ್ಸಿನ ಜನರಿಗೆ ರಾಷ್ಟ್ರಗೀತೆಯನ್ನು, ಪರ್ಯಾಯವಾಗಿ ರಾಷ್ಟ್ರವನ್ನು ಅವಮಾನಿಸಲು ಅಧಿಕೃತವಾಗಿ ಅನುಮತಿ ಸಿಕ್ಕಿದಂತೆ ಅಗುತ್ತದೆ, ಎಂದು ಸಾರ್ವಜನಿಕರಿಗೆ ಅನಿಸುತ್ತದೆ !

* ಯಾರ ಮನಸ್ಸಿನಲ್ಲಿ ದೇಶಭಕ್ತಿ ಇದೆ, ಅವರಿಂದ ರಾಷ್ಟ್ರಗೀತೆಯ ಅವಮಾನ ಆಗಲು ಸಾಧ್ಯವಿಲ್ಲ, ಇದು ಅಷ್ಟೇ ನಿಜವಾಗಿದೆ !

* ರಾಷ್ಟ್ರಗೀತೆಯ ಅವಮಾನವನ್ನು ‘ಗಂಭೀರ ಅಪರಾಧ’ ಎಂದು ನಿರ್ಧರಿಸಿ ಅಂತಹವರನ್ನು ನೇರವಾಗಿ ಜೈಲಿಗೆ ಕಳುಹಿಸುವ ಕಾನೂನನ್ನು ಕೇಂದ್ರ ಸರಕಾರವು ಮಾಡಬೇಕು, ಆಗಲೇ ಈ ದೇಶವನ್ನು ಅವಮಾನಿಸುವ ಧೈರ್ಯವನ್ನು ಯಾರೂ ಮಾಡಲಾರರು !

* ರಾಷ್ಟ್ರಗೀತೆಯನ್ನು ಅವಮಾನಿಸಿದ ಸಂದರ್ಭದಲ್ಲಿ ವ್ಯಾಖ್ಯಾನಕಾರ ಡಾ. ತೌಸಿಫ್ ಅಹ್ಮದ್ ಭಟ್ ಅಪರಾಧದಿಂದ ಖುಲಾಸೆ !

ಶ್ರೀನಗರ – ರಾಷ್ಟ್ರಗೀತೆಗಾಗಿ ನಿಲ್ಲದಿರುವುದು, ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನವಾಗಬಹುದು; ಆದರೆ ಅದು ರಾಷ್ಟ್ರೀಯ ಚಿಹ್ನೆಗಳ ಅವಮಾನವನ್ನು ತಡೆಯುವ ಅಧಿನಿಯಮದ ಅಡಿಯಲ್ಲಿ ಅದು ಅಪರಾಧವೆಂದು ಪರಿಗಣಿಸಲ್ಪಡುವುದಿಲ್ಲ, ಎಂದು ಜಮ್ಮು – ಕಾಶ್ಮೀರ ಉಚ್ಚ ನ್ಯಾಯಾಲಯವು ತಿಳಿಸಿದೆ. ಈ ಸಮಯದಲ್ಲಿ ನ್ಯಾಯಮೂರ್ತಿ ಸಂಜೀವ್ ಕುಮಾರ ಇವರ ನ್ಯಾಯಪೀಠವು ರಾಷ್ಟ್ರಗೀತೆಯನ್ನು ಅವಮಾನಿಸಿದ ಪ್ರಕರಣದಲ್ಲಿ ಡಾ. ತೌಸಿಫ್ ಅಹ್ಮದ್ ಭಟ್ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಿದೆ.

ನ್ಯಾಯಾಲಯವು, ಒಬ್ಬ ವ್ಯಕ್ತಿಯು ರಾಷ್ಟ್ರಗೀತೆಯನ್ನು ನಿಲ್ಲಿಸಲು ಅಥವಾ ವಿಧಾನಸಭೆಯಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದರೆ ಅದು ಅಪರಾಧವಾಗಬಹುದು; ಈ ಕೃತಿಯು ಕಾಯಿದೆಯ ಸೆಕ್ಷನ್ ೩ ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ಇದರಲ್ಲಿ ೩ ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಏನಿದು ಪ್ರಕರಣ ?

ಪಾಕಿಸ್ತಾನದ ಮೇಲೆ ಭಾರತೀಯ ಸೇನೆಯು ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ಆನಂದೋತ್ಸವ ಆಚರಿಸಲು ೨೯ ಸೆಪ್ಟೆಂಬರ್ ೨೦೧೮ ರಂದು ಬನಿ (ಜಿಲ್ಲಾ ಕಠುವಾ) ಸರಕಾರಿ ಪದವಿ ಕಾಲೇಜಿನಲ್ಲಿ ಒಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ರಾಷ್ಟ್ರಗೀತೆಯ ಸಮಯದಲ್ಲಿ ಡಾ. ತೌಸಿಫ್ ಅಹ್ಮದ್ ಭಟ್ ಎದ್ದು ನಿಂತಿರಲಿಲ್ಲ. ಆದ್ದರಿಂದ ಅವರ ಮೇಲೆ ರಾಷ್ಟ್ರಗೀತೆಯನ್ನು ಅವಮಾನಿಸಿದ್ದಕ್ಕಾಗಿ ಅಪರಾಧವು ದಾಖಲಾಗಿತ್ತು.