ಪ್ರಿಯತಮ ಸನಿ ಖಾನ್ ನ ‘ಬ್ಲಾಕ್‍ಮೇಲ್’ ನಿಂದ ಬೇಸತ್ತ ೧೪ ವರ್ಷದ ಹಿಂದೂ ಹುಡುಗಿಯ ಆತ್ಮಹತ್ಯೆ

ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಅವರು ಮತಾಂಧ ಯುವಕರ ಪ್ರೇಮದ ಬಲೆಯಲ್ಲಿ ಸಿಲುಕುತ್ತಾರೆ ಮತ್ತು ಅದರ ಅಂತ್ಯ ಈ ರೀತಿಯಲ್ಲಿರುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಪಾಮೆಲಾ ಅಧಿಕಾರಿ

ಹಾವಡಾ (ಬಂಗಾಲ) – ಇಲ್ಲಿಯ ೮ ನೇ ತರಗತಿಯಲ್ಲಿ ಕಲಿಯುತ್ತಿದ್ದ ಪಾಮೆಲಾ ಅಧಿಕಾರಿ ಈ ವಿದ್ಯಾರ್ಥಿನಿಯು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ೧೪ ವರ್ಷದ ಪಾಮೆಲಾ ರಾಷ್ಟ್ರೀಯ ಮಟ್ಟದ ಕರಾಟೆ ಪಟು ಆಗಿದ್ದಳು. ಸನಿ ಖಾನ್ ಹೆಸರಿನ ಪ್ರಿಯತಮನಿಂದಾಗುತ್ತಿದ್ದ ಬ್ಲಾಕ್‍ಮೇಲ್(ಬೆದರಿಕೆ ಹಾಕುವುದು) ನಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

೧. ಪಾಮೆಲಾಳ ಸಹೋದರಿ ಪ್ರಿಯಾಂಕಾ ಹೇಳಿಕೆಯನುಸಾರ, ಪಾಮೆಲಾಗೆ ಕಳೆದ ೨ ವರ್ಷಗಳಿಂದ ಸನಿ ಖಾನ್‍ನೊಂದಿಗೆ ಪ್ರೇಮ ಸಂಬಂಧವಿತ್ತು. ಸನಿಯು ಪಾಮೆಲಾನೊಂದಿಗೆ ತೆಗೆಸಿಕೊಂಡ ಕೆಲವು ಛಾಯಾಚಿತ್ರಗಳ ಮೂಲಕ ಆತ ಆಕೆಯನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದ. ಸನಿ ಪಾಮೆಲಾನೊಂದಿಗೆ ಪ್ರೇಮಸಂಬಂಧ ಇರುವಾಗಲೇ ಆತ ಇನ್ನೋರ್ವ ಹುಡುಗಿಯೊಂದಿಗೆ ಮದುವೆಯಾದನು. ಆದ್ದರಿಂದ ಪಾಮೆಲಾಳು ಆತ್ಮಹತ್ಯೆ ಮಾಡಿಕೊಂಡಳು.

೨. ಪೊಲೀಸರು ಸನಿ ಖಾನ್ ಮೇಲೆ ಆತ್ಮಹತ್ಯೆಗಾಗಿ ಪ್ರಚೋಧಿಸಿದ ಅಪರಾಧವನ್ನು ದಾಖಲಿಸಿದ್ದಾರೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಯನ್ನು ಮಾಡಲಾಗುತ್ತಿದೆ. ಸನಿಯನ್ನು ಇಲ್ಲಿಯವರೆಗೆ ಬಂಧಿಸಿಲ್ಲ.