ಬಿಹಾರದಲ್ಲಿಯೂ ಸಂಚಾರ ನಿಷೇಧ ಘೋಷಣೆ

ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾದ ಉಪದ್ರವವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ರಾಷ್ಟ್ರೀಯ ಸಂಚಾರ ನಿಷೇಧಕ್ಕೆ ಸರ್ವೋಚ್ಚ ನ್ಯಾಯಾಲಯ ಮತ್ತು ಕೋವಿಡ್ ಟಾಸ್ಕ್ ಫೋರ್ಸ್ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ, ಈಗ ಬಿಹಾರದಲ್ಲಿ ಸಂಚಾರ ನಿಷೇಧವನ್ನು ಘೋಷಿಸಲಾಗಿದೆ.

ಬೆಂಗಳೂರಿನ ಸ್ಮಶಾನದ ಹೊರಗೆ ‘ಹೌಸ್ ಫುಲ್’ ಫಲಕ !

ಭಾರತದಲ್ಲಿ ಇಂತಹ ಪರಿಸ್ಥಿತಿ ಬರಬಹುದು ಎಂಬುದು ಯಾರೂ ನಿರೀಕ್ಷಿಸಿರಲಿಲ್ಲ; ಆದರೆ ಆಪತ್ಕಾಲ ಬರುತ್ತದೆ, ಎಂದು ದ್ರಷ್ಟಾರರು, ಸಂತರು ಇತ್ಯಾದಿಗಳು ಹೇಳುತ್ತಿದ್ದರು, ಅದು ಅಂತಹ ಘಟನೆಗಳಲ್ಲಿ ಕಂಡುಬರುತ್ತದೆ !

ಕೊರೋನಾ ವಿಪತ್ತಿನೊಂದಿಗೆ ಹೋರಾಡಲು ಟಾಟಾ ಸಮೂಹವು ೨೦೦೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ

ಟಾಟಾ ಟ್ರಸ್ಟ್​ ನ ಅಧ್ಯಕ್ಷ ರತನ ಟಾಟಾ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ನೇತೃತ್ವದಲ್ಲಿ, ಟಾಟಾ ಗ್ರೂಪ್ ‘ನೋ ಲಿಮೀಟ'(ಮಿತಿಯಿಲ್ಲದ) ಸಹಾಯಕ್ಕಾಗಿ ಯೋಜನೆಯನ್ನು ತಂದಿದೆ. ಟಾಟಾ ಸಮೂಹವು ಈ ಯೋಜನೆಗಾಗಿ ೨೦೦೦ ಕೋಟಿ ರೂಪಾಯಿ ಖರ್ಚು ಮಾಡಲಿದೆ.

ಮಾಧ್ಯಮಗಳ ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ !

ವಿಚಾರಣೆಯ ವೇಳೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಾಧ್ಯಮಗಳು ವಾರ್ತೆಗಳನ್ನು ಮಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ಕಪಾಳಮೋಕ್ಷ ಮಾಡಿದೆ.

ಚಾಮರಾಜನಗರದಲ್ಲಿ ಆಮ್ಲಜನಕದ ವಿತರಣೆಯ ವಿಳಂಬದಿಂದಾಗಿ ಆಸ್ಪತ್ರೆಯಲ್ಲಿ ೨೪ ಕೊರೋನಾ ಪೀಡಿತ ರೋಗಿಗಳ ಸಾವು !

ರಾಜ್ಯದ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ೨೪ ಕೊರೋನಾ ಪೀಡಿತ ರೋಗಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರ ೨೫೦ ಆಕ್ಸಿಜನ್ ಸಿಲಿಂಡರ್‌ಗಳನ್ನು ಮೈಸೂರಿನಿಂದ ಚಾಮರಾಜನಗರಕ್ಕೆ ಕಳುಹಿಸಲಾಗಿದೆ.

ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ೨ ಆಟಗಾರರು ಕರೋನಾ ಸೋಂಕು ತಗಲಿದ್ದರಿಂದ ಸ್ಪರ್ದೆ ರದ್ದು !

ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ‘ಕೋಲ್ಕತಾ ನೈಟ್ ರೈಡರ್ಸ್’ ಸಂಘದ ಸ್ಪಿನ್ನರ್‌ಗಳಾದ ವರುಣ ಚಕ್ರವರ್ತಿ ಮತ್ತು ಸಂದೀಪ ವಾರಿಯರ್ ಅವರು ಕರೋನಾ ರೋಗಕ್ಕೆ ತುತ್ತಾಗಿದ್ದಾರೆ. ಜೊತೆಗೆ ಕೆಲವು ಆಟಗಾರರ ಆರೋಗ್ಯವು ಹದಗೆಟ್ಟಿದೆ ಎಂದು ಸಹ ಹೇಳಲಾಗುತ್ತಿದೆ.

ಕರೀಮ್‌ಗಂಜ್(ಅಸ್ಸಾಂ) ನಲ್ಲಿ ದೇವಾಲಯವನ್ನು ದೋಚುವ ೧೨ ಮತಾಂಧರ ತಂಡಗಳ ಬಂಧನ !

ಬಾಂಗ್ಲಾದೇಶ ಗಡಿಯ ಬಳಿಯ ಕರೀಮ್‌ಗಂಜ್ ಜಿಲ್ಲೆಯ ಬಾಲಿಯಾದಲ್ಲಿರುವ ೩೦೦ ವರ್ಷಗಳ ಹಳೆಯ ಪ್ರಸಿದ್ಧ ಶ್ರೀ ನುರಸಿಂಹ ದೇವಸ್ಥಾನದಲ್ಲಿ ಸಶಸ್ತ್ರ ಮತಾಂಧರು ದಾಳಿ ಮಾಡಿ ಚಿನ್ನದ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದರಿಂದ ೧೬ ಕೊರೋನಾ ರೋಗಿಗಳ ಸಾವು

ರಾಜ್ಯದ ಅನಂತಪುರ ಮತ್ತು ಕುರ್ನೂಲ್‍ನಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದರಿಂದ ಒಟ್ಟು ೧೬ ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಹನ್ನೊಂದು ಮಂದಿ ಅನಂತಪುರದ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಐದು ಮಂದಿ ಕುರ್ನೂಲ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ದೇಶದಲ್ಲಿ ಕೂಡಲೇ ಸಂಚಾರ ನಿಷೇಧ ಜಾರಿಗೆ ತನ್ನಿ !

ಕೊರೋನಾ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುತ್ತದೆ. ಇಂತಹ ಸಮಯದಲ್ಲಿ ನಿಷೇಧವನ್ನು ಹೇರುವ ಮೂಲಕ ಸೋಂಕಿನ ಸರಪಳಿಯನ್ನು ಮುರಿಯುವುದು ಅತ್ಯಂತ ಯೋಗ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.

ಪ್ರತಿದಿನ ಗೋಮೂತ್ರವನ್ನು ಸೇವಿಸಿದರೆ ಕೊರೋನಾ ಬರುವುದಿಲ್ಲ ! – ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ

ಪ್ರತಿದಿನ ೨೫ ಮಿಲಿ. ಗೋಮೂತ್ರವನ್ನು ಸೇವಿಸುವುದರಿಂದ ಕೊರೋನಾ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದಿಲ್ಲ ಎಂದು ಇಲ್ಲಿಯ ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ ಹೇಳಿದ್ದಾರೆ. ಗೋಮೂತ್ರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ, ಜೊತೆಗೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ರಕ್ಷಿಸುತ್ತದೆ ಎಂದು ಸಹ ಹೇಳಿದರು.