ಆಗಸ್ಟ್ 14 ಈ ದಿನವನ್ನು ‘ವಿಭಜನಾ ವೇದನಾ ಸ್ಮೃತಿದಿನ’ವೆಂದು ಗುರುತಿಸಲಾಗುವುದು ! – ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆ

ವಿಭಜನೆಯ ಸಮಯದಲ್ಲಿ ಮಹಮದ್ ಅಲೀ ಜಿನಾರವರ ‘ಡಾಯರೆಕ್ಟ್ ಆಕ್ಶನ್’ನಲ್ಲಿ (ನೇರ ಕಾರ್ಯಾಚರಣೆಯಲ್ಲಿ) ಹತ್ಯೆಯಾದ ಹಿಂದೂಗಳಿಗೆ ಪ್ರತೀವರ್ಷ ಭಾರತ ಸರಕಾರವು ಶ್ರದ್ಧಾಂಜಲಿ ನೀಡಿ ಅವರನ್ನು ನೆನಪಿಸಿಕೊಳ್ಳಬೇಕು !

ನವ ದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 14 ಅನ್ನು ‘ವಿಭಜನಾ ವೇದನಾ ಸ್ಮೃತಿದಿನ’ (ವಿಭಜನೆಯ ಭಯಾನಕ ಸ್ಮೃತಿ ದಿನ) ಎಂದು ಗುರುತಿಸಲಾಗುವುದು, ಎಂದು ಘೋಷಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದ್ವೇಷ ಹಾಗೂ ಹಿಂಸಾಚಾರದಿಂದ ನಮ್ಮ ಲಕ್ಷಗಟ್ಟಲೆ ಸಹೋದರ-ಸಹೋದರಿಯರು ಸ್ಥಳಾಂತರವಾಗಬೇಕಾಯಿತು ಮತ್ತು ಅನೇಕರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಗಿ ಬಂತು. ಆ ಜನರ ಸಂಘರ್ಷ ಹಾಗೂ ಬಲಿದಾನದ ಸ್ಮರಣೆಗಾಗಿ ಆಗಸ್ಟ್ 14 ರಂದು ‘ವಿಭಜನಾ ವೇದನಾ ಸ್ಮೃತಿದಿನ’ ಎಂದು ಪಾಲಿಸುವಂತೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ದಿನ ನಮಗೆ ಭೇದಭಾವ, ಶತ್ರುತ್ವ ಹಾಗೂ ದ್ವೇಷವನ್ನು ಮುಗಿಸಲು ಪ್ರೇರಣೆಯನ್ನಷ್ಟೇ ನೀಡುವುದಲ್ಲ; ಅದರ ಜೊತೆಗೆ ಐಕ್ಯತೆ ಹಾಗೂ ಸಾಮಾಜಿಕ ಸದ್ಭಾವನೆಗಳು ದೃಢವಾಗುವುದು ಎಂದರು.