ಕಳೆದ ಅನೇಕ ದಶಕಗಳಿಂದ ಭಾರತದಲ್ಲಿ ವರದಕ್ಷಿಣೆ ವಿರುದ್ಧ ಜನಜಾಗೃತಿ ಆಗುತ್ತಿದ್ದರೂ ಈ ಸ್ಥಿತಿ ಇರುವುದು ಭಾರತೀಯರಿಗೆ ನಾಚಿಕೆಯ ಸಂಗತಿ !
ನವ ದೆಹಲಿ – ಜಾಗತಿಕ ಬ್ಯಾಂಕಿನ ಅಭ್ಯಾಸದ ವರದಿಯಲ್ಲಿ ಭಾರತದಲ್ಲಿ ಈಗಲೂ ಸಹ ವರದಕ್ಷಿಣೆ ಪದ್ಧತಿ ಚಾಲ್ತಿಯಲ್ಲಿದೆ ಎಂದು ಹೇಳಲಾಗಿದೆ. 1960 ರಿಂದ 2008 ಈ ಕಾಲಾವಧಿಯಲ್ಲಿ ಗ್ರಾಮೀಣ ಭಾರತದ 17 ರಾಜ್ಯದ 40 ಸಾವಿರ ವಿವಾಹಗಳ ಅಭ್ಯಾಸವನ್ನು ಮಾಡಲಾಗಿತ್ತು. ಅದರಲ್ಲಿ ಶೇ. 95ರಷ್ಟು ಮದುವೆಗಳಲ್ಲಿ ವರದಕ್ಷಿಣೆ ನೀಡಲಾಗಿದೆ ಮತ್ತು ತೆಗೆದುಕೊಳ್ಳಲಾಗಿದೆ. 1975 ರ ಮೊದಲು ಮತ್ತು 2000ದ ನಂತರ ವರ ಪಕ್ಷದವರ ಕಡೆಯಿಂದ ವಧು ಪಕ್ಷದವರಿಗೆ ಉಡುಗೊರೆಯಾಗಿ ಕೊಡಲು ಸರಾಸರಿ 5 ಸಾವಿರದಷ್ಟು ಖರ್ಚು ಮಾಡಲಾಗಿದೆ, ಹಾಗೂ ವಧು ಪಕ್ಷದವರ ಕಡೆಯಿಂದ ವರ ಪಕ್ಷದವರಿಗಾಗಿ ಸರಾಸರಿ 3 ಲಕ್ಷ 50 ಸಾವಿರ ಖರ್ಚು ಮಾಡಲಾಗಿದೆ.
Indian dowry payments ‘remarkably stable’, study says https://t.co/B8Z2POqCrn
— BBC News (World) (@BBCWorld) July 5, 2021