‘ಕೊರೊನಾ’ದ ರೋಗಾಣು ಗಂಗಾನದಿಯ ನೀರಿನಲ್ಲಿ ಬದುಕಲಾರದು ! – ಸಂಶೋಧಕರ ಸಂಶೋಧನೆ

ಗಂಗಾನದಿಯ ನೀರಿನಲ್ಲಿ ಅಪಾಯಕಾರಿ ರೋಗಾಣುಗಳು ಉತ್ಪತ್ತಿಯಾಗುವುದಿಲ್ಲ !

ಗಂಗಾಜಲದಿಂದ ‘ಕೊರೊನಾ ನಿರೋಧಕ ಔಷಧ’ ತಯಾರಿಸುವ ಸಂಶೋಧನೆ ಆರಂಭ !

ಗಂಗಾನದಿಯ ಪಾವಿತ್ರ್ಯದ ಬಗ್ಗೆ ಅನುಮಾನ ಪಡುವ, ಅದೇ ರೀತಿ ಅದರ ಮೇಲೆ ಶ್ರದ್ಧೆ ಹೊಂದಿರುವ ಹಿಂದೂಗಳನ್ನು ಹುಚ್ಚರು ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ ಕಪಾಳಮೋಕ್ಷ !- ಸಂಪಾದಕರು 

ಗೋರಖಪುರ (ಉತ್ತರಪ್ರದೇಶ) – ಇಲ್ಲಿಯ ಬಿ.ಆರ್.ಡಿ. ವೈದ್ಯಕೀಯ ಕಾಲೇಜಿನಿಂದ ನಡೆಸಿದ ಸಂಶೋಧನೆಯ ಪ್ರಕಾರ, ಕೊರೊನಾದ ಎರಡನೇ ಅಲೆಯಲ್ಲಿ ಉತ್ತರಾಖಂಡದ ಹೃಷಿಕೇಶದಿಂದ ಉತ್ತರಪ್ರದೇಶದ ವಾರಣಾಸಿಯವರೆಗೆ ಗಂಗಾನದಿಯಲ್ಲಿ ಕೊರೊನಾದ ರೋಗಾಣುಗಳು ಕಂಡುಬಂದಿಲ್ಲ. ಇದೇ ಸಮಯದಲ್ಲಿ, ಲಕ್ಷ್ಮಣಪುರಿಯ ಚರಂಡಿಗಳಲ್ಲಿ ಕೊರೊನಾದ ರೋಗಾಣುಗಳು ಪತ್ತೆಯಾಗಿದ್ದವು.

ಬಿ.ಆರ್.ಡಿ. ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ(ಸೂಕ್ಷ್ಮಜೀವಶಾಸ್ತ್ರ) ವಿಭಾಗದ ಮುಖ್ಯಸ್ಥ ಡಾ. ಅಮರೇಶ ಸಿಂಗ್ ಇವರು, ಗಂಗಾನದಿಯ ನೀರಿನಲ್ಲಿ `ಬ್ಯಾಕ್ಟೀರಿಯೊಫೇಜ’ ಎಂದು ಕರೆಯಲ್ಪಡುವ `ವೈರಸ್’ (ರೋಗಾಣು)ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಈ ರೋಗಾಣು ನೀರಿನಲ್ಲಿ ಬೇರೆ ಯಾವುದೇ ರೋಗಾಣುಗಳಿಗೆ ಬದುಕಲು ಬಿಡುವುದಿಲ್ಲ. ಇದು ಹಾನಿಕರ ರೋಗಾಣುಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಗಂಗಾನದಿಯ ನೀರಿನಲ್ಲಿ ಕೊರೊನಾದ ರೋಗಾಣುಗಳು ಬದುಕಲು ಸಾಧ್ಯವಿಲ್ಲ. ಅದರ ಜೊತೆಯಲ್ಲಿ, ಅಪಾಯಕಾರಿ ರೋಗಾಣುವನ್ನೂ ನಾಶ ಮಾಡಲು `ಬ್ಯಾಕ್ಟೀರಿಯೊಫೇಜ್’ಗೆ ಕ್ಷಮತೆ ಇರುವುದರಿಂದ ಗಂಗೆಯಲ್ಲಿ ಬ್ಯಾಕ್ಟೀರಿಯಾಗಳು ಸಹ ನಿರ್ಮಾಣವಾಗುವುದಿಲ್ಲ. `ಐ.ಐ.ಎಂ.ಬೆಂಗಳೂರು’ ಇಲ್ಲಿಯ ನಿವೃತ್ತ ಪ್ರಾಧ್ಯಾಪಕರು ಮತ್ತು ಖಾಸಗಿ ಸಂಸ್ಥೆಗಳ ನೆರವಿನಿಂದ ಗಂಗಾನದಿಯ ನೀರಿನಿಂದ ಕೊರೊನಾ ನಿರೋಧಕ ಔಷಧವನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಯುತ್ತಿದೆ.

ಕೊರೊನಾದ ಚಿಕಿತ್ಸೆ ಎಂದು ‘ಬ್ಯಾಕ್ಟೀರಿಯೊಫೇಜ್’ಗಳ ಕುರಿತು ನಡೆಸಲಾದ ವಿಶೇಷ ಸಂಶೋಧನೆ !

ಲಂಡನ್‍ನಲ್ಲಿರುವ `ಹಿಂಡಾವಿ’ ಇದು ಸೂಕ್ಷ್ಮಜೀವಶಾಸ್ತ್ರ (`ಮೈಕ್ರೋಬಯಾಲಜಿ’ಯ) ಕ್ಷೇತ್ರದಲ್ಲಿ ಕೆಲಸ ಮಾಡುವ ವಿಶ್ವಪ್ರಸಿದ್ಧ ಸಂಸ್ಥೆಯಾಗಿದೆ. ಅದರ ಜಾಲತಾಣದಲ್ಲಿ ಪ್ರಕಾಶಿಸಲಾದ ಒಂದು ಶೋಧ ಪ್ರಬಂಧದಲ್ಲಿ ‘ಬ್ಯಾಕ್ಟೀರಿಯೊಫೇಜ್’ಗಳಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ. ಜಾಲತಾಣದಲ್ಲಿ ಸೆಪ್ಟೆಂಬರ್ 2020 ರಲ್ಲಿ ಪ್ರಕಟವಾದ ಒಂದು ಸಂಶೋಧನಾ ಪ್ರಬಂಧದ ಪ್ರಕಾರ, ‘ಬ್ಯಾಕ್ಟೀರಿಯೊಫೇಜ್’ ಕೊರೊನಾ ರೋಗಾಣುವಿನ ಮೇಲೆ ಹಿಡಿತ ಸಾಧಿಸಲು ಪ್ರಮುಖ ಪಾತ್ರವಹಿಸಬಹುದು. ಅದರಿಂದ ಎರಡು ಲಾಭಗಳಿವೆ. ‘ಬ್ಯಾಕ್ಟೀರಿಯೊಫೇಜ್’ ಇದು ಹಾನಿಕರ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸಲು ಸಕ್ಷಮವಿರುವುದರಿಂದ ಓರ್ವ ವ್ಯಕ್ತಿಯು ಕೊರೊನಾದಿಂದ ಸೋಂಕಿತನಾಗಿದ್ದರೆ ಆತನ ಶ್ವಾಸಕೋಶದಲ್ಲಿ `ಬ್ಯಾಕ್ಟೀರಿಯಲ್ ಇನ್ಫೆಕ್ಷನ್'(ರೋಗಾಣುವಿನ ಸೋಂಕು) ಆಗುವ ಸಾಧ್ಯತೆಯಿರಬಹುದು. ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ, ಆ ವ್ಯಕ್ತಿಯು ಸಾವಿಗೀಡಾಗಬಹುದು. ‘ಬ್ಯಾಕ್ಟೀರಿಯೊಫೇಜ್’ನ ಇನ್ನೊಂದು ಲಾಭವೆಂದರೆ ಅದು ಪ್ರತಿಕಾಯಗಳ(ಆಂಟಿಬಾಡಿಸ್) ಉತ್ಪಾದನೆಯನ್ನು ಸುಗಮಗೊಳಿಸುತ್ತದೆ. ನ್ಯೂಯಾರ್ಕ್‍ನಲ್ಲಿನ ಸಂಸ್ಥೆ ‘ಲಿಬರ್ಟ್‍ಪಬ್’ ಪ್ರಕಾರ, `ಫೇಜ ಡಿಸ್ ಪ್ಲೆ’ ಈ ನೊಬೆಲ್ ಪ್ರಶಸ್ತಿ ಸಿಕ್ಕಿದ ಪದ್ದತಿಯ ಪ್ರಕಾರ ‘ಬ್ಯಾಕ್ಟೀರಿಯೊಫೇಜ್’ಗಳನ್ನು ಬಳಸಿಕೊಂಡು ಕೊರೊನಾ ರೋಗಾಣುಗಳ ವಿರುದ್ಧ ಪ್ರತಿಕಾಯ (ಅಂಟಿಬಾಡಿಸ್)ಗಳನ್ನು ಉತ್ಪಾದಿಸಲು ಬಳಸಬಹುದು. ಇವೆಲ್ಲವುಗಳ ಹಿನ್ನೆಲೆಯಲ್ಲಿ, `ಗಂಗಾಜಲ’ವನ್ನು ಕೊರೊನಾ ಮೇಲಿನ ಚಿಕಿತ್ಸೆಯೆಂದು ನಡೆಯುತ್ತಿರುವ ಸಂಶೋಧನೆಗೆ ವಿಶಿಷ್ಟ ಪ್ರಾಮುಖ್ಯತೆಯು ದೊರೆಯಬಹುದು.

‘ಬ್ಯಾಕ್ಟೀರಿಯೊಫೇಜ್’ನ ತಾಂತ್ರಿಕ ಮಾಹಿತಿ !

‘ಬ್ಯಾಕ್ಟೀರಿಯೊಫೇಜ್’ ಇದೊಂದು ವೈರಸ್(ರೋಗಾಣು)ಆಗಿದ್ದು ಅದು ಎಲ್ಲಾ ರೀತಿಯ ಹಾನಿಕರ ಬ್ಯಾಕ್ಟೀರಿಯಾಗಳನ್ನು(ರೋಗಾಣು) ನಾಶ ಮಾಡುತ್ತದೆ. ಅದೇ ರೀತಿ ಅದು ‘ಆಂಟಿವೈರಲ್’ (ರೋಗಾಣುವಿರೋಧಿ) ಮತ್ತು ‘ಆಂಟಿಫಂಗಲ್(ಶಿಲೀಂದ್ರ ವಿರೋಧಿ) ಗುಣಲಕ್ಷಣಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಇದರಲ್ಲಿ ಹಾನಿಕರ ಕೊರೋನಾ ರೋಗಾಣುಗಳನ್ನು ನಾಶಪಡಿಸುವ ಕ್ಷಮತೆಯಿದೆ.