ಸ್ವದೇಶಿ ಆಪ್ ‘ಕೂ’ ನಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜದ ವಿರುದ್ಧ ನಡೆಸಲಾದ ಅಭಿಯಾನಕ್ಕೆ ಅಪಾರ ಬೆಂಬಲ!

ಅನೇಕ ರಾಜ್ಯಗಳ ಮುಖ್ಯಮಂತ್ರಿ, ಮಂತ್ರಿ, ನೇತಾರರು ಹಾಗೂ ಕ್ರೀಡಾಪಟುಗಳ ಸಹಭಾಗ!

ಪ್ಲಾಸ್ಟಿಕ್ ಧ್ವಜವನ್ನು ಬಳಸದಿರುವ ಬಗ್ಗೆ ಕರೆ !

* ಹಿಂದೂ ಜನಜಾಗೃತಿ ಸಮಿತಿಯು 16 ಕ್ಕಿಂತಲೂ ಹೆಚ್ಚು ವರ್ಷಗಳಿಂದ ನಡೆಸಿದ ಪ್ಲಾಸ್ಟಿಕ್ ಧ್ವಜವನ್ನು ಬಳಸಬಾರದು ಎಂಬ ಚಳುವಳಿಗೆ ಇಂದು ರಾಷ್ಟ್ರೀಯ ಸ್ವರೂಪವು ಪ್ರಾಪ್ತವಾಗಿದೆ. ಈ ವಿಷಯದಲ್ಲಿ ಸಮಿತಿಯನ್ನು ಎಷ್ಟು ಹೊಗಳಿದರೂ ಕಡಿಮೆಯೇ ಇದೆ!

ನವ ದೆಹಲಿ – ಪ್ಲಾಸ್ಟಿಕ್ ರಾಷ್ಟ್ರಧ್ವಜದ ವಿರುದ್ಧ ಸ್ವದೇಶಿ ‘ಕೂ’ ಆಪ್ ನಿಂದ ಅಭಿಯಾನವನ್ನು ನಡೆಸಲಾಗುತ್ತಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಈ ಆಪ್ ನಲ್ಲಿ ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ನೇತಾರರು, ಕ್ರೀಡಾಪಟುಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಹಾಗೆಯೇ ಜನತೆಗೆ ಕಾಗದ ಮತ್ತು ಬಟ್ಟೆಯ ರಾಷ್ಟ್ರಧ್ವಜವನ್ನು ಬಳಸಲು ಕರೆ ನೀಡಲಾಯಿತು. #SayNoToPlasticTiranga ಮತ್ತು #PledgeOnKoo ಎಂಬ ಹೆಸರಿನ ಹ್ಯಾಶ್ ಟ್ಯಾಗ್ ಗಳ (ಒಂದೇ ವಿಷಯದ ಮೇಲೆ ಚರ್ಚೆ ಮಾಡಿಸುವುದು) ಟ್ರೆಂಡನ್ನು (ಚರ್ಚೆಯಲ್ಲಿರುವ ವಿಷಯ) ಈ ಆಪ್ ನಲ್ಲಿ ಮಾಡಲಾಗಿತ್ತು.

1. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತಮ್ಮ ಅಕೌಂಟ್ ನಿಂದ, ಪರಿಸರದ ರಕ್ಷಣೆಗಾಗಿ ಮತ್ತು ರಾಷ್ಟ್ರ ಹಿತಕ್ಕಾಗಿ ಪ್ಲಾಸ್ಟಿಕ್ ನ  ರಾಷ್ಟ್ರಧ್ವಜವನ್ನು ಬಳಸದಿರುವ ಬಗ್ಗೆ ಪ್ರತಿಜ್ಞೆ ಮಾಡಿ. ಪ್ಲಾಸ್ಟಿಕ್ ಮುಕ್ತ ಭಾರತವನ್ನು ನಿರ್ಮಿಸಲು ಪ್ರಯತ್ನಿಸಿ, ಎಂಬ ಕರೆ ನೀಡಿದರು.

2. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಇವರು ಈ ಆಪ್ ನಲ್ಲಿ ಕಾಗದ ಮತ್ತು ಬಟ್ಟೆಯ ರಾಷ್ಟ್ರಧ್ವಜವನ್ನು ಬಳಸಲು ಕರೆ ನೀಡಿದರು.

3. ಪಂಜಾಬಿನ ಮುಖ್ಯಮಂತ್ರಿ ಅಮರಿಂದರ್ ಸಿಂಹ ಇವರ ಕಾರ್ಯಾಲಯದ ಅಕೌಂಟ್ ನಿಂದ ‘ದೇಶವನ್ನು ಸ್ವಚ್ಛವಾಗಿಡಲು ಪ್ಲಾಸ್ಟಿಕ್ ರಾಷ್ಟ್ರಧ್ವಜದ ಬಳಕೆಯನ್ನು ತಡೆಗಟ್ಟಿ’ ಎಂಬ ಕರೆಯನ್ನು ನೀಡಲಾಯಿತು.

4. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ್ ಠಾಕೂರ್, ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ, ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಹ, ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ ಕುಮಾರ ದೇಬ್, ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಡಾ. ರಮನ ಸಿಂಹ, ರಾಜಸ್ಥಾನದ ಪರಿಸರ ಸಚಿವರಾದ ಸುಖರಾಮ್ ಬಿಷ್ಣೊಯ್, ಲೋಕ ಜನಶಕ್ತಿ ಪಕ್ಷದ ನೇತಾರರಾದ ಚಿರಾಗ್ ಪಾಸ್ವಾನ್ ಮತ್ತು ಟೋಕಿಯೋ ಒಲಿಂಪಿಕ್ ನಲ್ಲಿ ಕುಸ್ತಿಯಲ್ಲಿ ಬೆಳ್ಳಿಯ ಪದಕವನ್ನು ಗೆದ್ದಿರುವ ಕ್ರೀಡಾಪಟು ರವಿಕುಮಾರ ದಹಿಯಾ ಇವರು ಪ್ಲಾಸ್ಟಿಕ್ ನ ರಾಷ್ಟ್ರಧ್ವಜವನ್ನು ಬಳಸದಿರುವಂತೆ ಕರೆನೀಡಿದರು.

ಕೇಂದ್ರೀಯ ಗೃಹ ಮಂತ್ರಾಲಯದಿಂದ ಸೂಚನೆ

ಕೇಂದ್ರೀಯ ಗೃಹ ಮಂತ್ರಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಕಳಿಸಿ ಪ್ಲಾಸ್ಟಿಕ್ ಧ್ವಜವನ್ನು ಬಳಸದಿರುವ ಬಗ್ಗೆ ಸೂಚನೆ ನೀಡಿದೆ. ಹಾಗೆಯೇ ಕಾಗದ ಮತ್ತು ಬಟ್ಟೆಗಳ ರಾಷ್ಟ್ರಧ್ವಜಗಳನ್ನು ಬಳಸಬೇಕು ಎಂದು ಹೇಳಿದೆ.