ಸುಪೌಲ (ಬಿಹಾರ)ದಲ್ಲಿ ಶಿವಲಿಂಗದ ಮೇಲೆ ಕಾಲಿಟ್ಟು ಛಾಯಾಚಿತ್ರವನ್ನು ತೆಗೆದು ನಂತರ ಅದನ್ನು ಪ್ರಸಾರ ಮಾಡಿದ ಭೀಮ ಆರ್ಮಿಯ ಕಾರ್ಯಕರ್ತರು !

ಒಬ್ಬ ಕಾರ್ಯಕರ್ತನ ಬಂಧನ

ಈಗ ಹಿಂದುದ್ವೇಷದ ಕಾಮಾಲೆಯಾಗಿರುವ ಭೀಮ ಆರ್ಮಿಯ ಮೇಲೆ ಕೇಂದ್ರ ಸರಕಾರವು ನಿರ್ಬಂಧ ಹೇರಬೇಕೆಂದು ಹಿಂದೂಗಳು ಮತ್ತು ಅವರ ಸಂಘಟನೆಗಳು ಬೇಡಿಕೆಯನ್ನು ಮಾಡಬೇಕು !

ಸುಪೌಲ (ಬಿಹಾರ) – ಇಲ್ಲಿನ ಮಹಾದೇವಪಟ್ಟಿ ಊರಿನಲ್ಲಿ ಭೀಮ ಆರ್ಮಿಯ ಇಬ್ಬರು ಕಾರ್ಯಕರ್ತರು ಶಿವನ ದೇವಾಲಯದಲ್ಲಿ ಶಿವಲಿಂಗದ ಮೇಲೆ ಕಾಲಿಟ್ಟುಕೊಂಡು ಛಾಯಾಚಿತ್ರ ತೆಗೆದುಕೊಂಡು ಅದನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದರು. ಈ ಪ್ರಕರಣದಲ್ಲಿ ಅವರ ವಿರುದ್ಧ ಅಪರಾಧವನ್ನು ನೋಂದಾಯಿಸಲಾಗಿದ್ದು ಶೈಲೇಂದ್ರಕುಮಾರ ರಾಮ ಎಂಬ ಕಾರ್ಯಕರ್ತನನ್ನು ಬಂಧಿಸಲಾಯಿತು. ಹಾಗೂ ಚಂದನಕುಮಾರ ರಾಮ ಎಂಬ ಹೆಸರಿನ ಕಾರ್ಯಕರ್ತನನ್ನು ಪೊಲೀಸರು ಹುಡುಕುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ತು ಪೊಲೀಸರಿಗೆ ಮನವಿ ನೀಡಿದ್ದು ಅದರಲ್ಲಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಹೇಳಿದೆ. ಈ ಇಬ್ಬರು ಆರೋಪಿಗಳು ಹಿಂದೂ ಧರ್ಮದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಪ್ರಸಾರ ಮಾಡಿದ್ದರು.

ಛಾಯಾಚಿತ್ರ ಪ್ರಸಾರವಾದ ತಕ್ಷಣ ಊರಿನವರು ಪಂಚಾಯತನ್ನು ಕರೆದರು. ಅದರಲ್ಲಿ ಅವರಿಬ್ಬರಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಹೇಳಲಾಯಿತು; ಆದರೆ ಅವರು ತಮ್ಮ ತಪ್ಪನ್ನು ಸ್ವೀಕರಿಸಲು ನಿರಾಕರಿಸಿ ಗ್ರಾಮಸ್ಥರನ್ನು ಹೊಡೆದು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಯತ್ನಿಸಿದರು.