ಕೊರೊನಾ ಲಸಿಕೆ ಪಡೆಯಲು ನಿರಾಕರಿಸಿದ ಭಾರತೀಯ ವಾಯುದಳದ ಸಿಬ್ಬಂದಿ ನೌಕರಿಯಿಂದ ವಜಾ

ನವ ದೆಹಲಿ – ಕೊರೊನಾ ನಿರೋಧಕ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಭಾರತೀಯ ವಾಯುದಳದ ಸಿಬ್ಬಂದಿಯನ್ನು ನೌಕರಿಯಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸರಕಾರವು ಗುಜರಾತ ಉಚ್ಚ ನ್ಯಾಯಾಲಯಕ್ಕೆ ನೀಡಿದೆ. ಸೇವೆಯ ನಿಯಮಾನುಸಾರ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿರುವುದಾಗಿ ಸ್ಪಷ್ಟ ಪಡಿಸಲಾಗಿದೆ.

ದೇಶಾದ್ಯಂತ ಅಂತಹ 9 ಸಿಬ್ಬಂದಿಗಳಿಗೆ `ಕಾರಣ ನೀಡಿ’ ಎಂಬ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಎಲ್ಲಾ ಸಿಬ್ಬಂದಿವರ್ಗವು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಲು ನಿರಾಕರಿಸಿತ್ತು. ಅವರ ಪೈಕಿ ಒಬ್ಬ ಸಿಬ್ಬಂದಿಯು ಆ ನೋಟಿಸಿಗೆ ಉತ್ತರ ನೀಡಿರಲಿಲ್ಲ. ಆದ್ದರಿಂದ ಅವರ ಮೇಲೆ ಕ್ರಮಕೈಗೊಳ್ಳಲಾಗಿದೆ. ಆ ಸಿಬ್ಬಂದಿಯ ಹೆಸರು ಅಥವಾ ಇತರ ಮಾಹಿತಿಯನ್ನು ಸರಕಾರವು ನೀಡಿಲ್ಲ.