ಹಳೆಯ ವಾಹನವನ್ನು ಗುಜರಿಗೆ ಹಾಕಿದ ನಂತರ ಸಿಗುವ ಪ್ರಮಾಣಪತ್ರದ ಮೂಲಕ ಹೊಸ ವಾಹನವನ್ನು ಖರೀದಿಸಿದರೆ, ಅದರ ನೋಂದಣಿ ಮತ್ತು ರಸ್ತೆ ತೆರಿಗೆಯಲ್ಲಿ ರಿಯಾಯಿತಿ ಪಡೆಯುವಿರಿ ! – ಪ್ರಧಾನಿ ಮೋದಿಯವರಿಂದ ಘೋಷಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ – ಗುಜರಿಗೆ ಹಾಕಿದ ನಂತರ ವಾಹನದ ಒಂದು ಪ್ರಮಾಣಪತ್ರ ವಾಹನದ ಮಾಲೀಕರಿಗೆ ಸಿಗಲಿದೆ. ಇದರಿಂದ ಅವರಿಗೆ ಹೊಸ ವಾಹನವನ್ನು ಖರೀದಿಸುವಾಗ ನೋಂದಣಿ ಮತ್ತು ರಸ್ತೆ ತೆರಿಗೆಯಲ್ಲಿ ರಿಯಾಯಿತಿಯನ್ನು ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಘೋಷಿಸಿದರು.

ಪ್ರಧಾನಿ ಮೋದಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಳೆಯ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರೀಕ್ಷಿಸಲಾಗುವುದು; ಅನಂತರ ಗುಜರಿಗೆ ಹಾಕುವ ಪ್ರಕ್ರಿಯೆಯು ಆರಂಭವಾಗುವುದು. ಇದರಿಂದ ವಾಹನ ತಯಾರಿಕೆ ಮತ್ತು ಲೋಹಗಳಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಗುಜರಿಯ ವ್ಯವಹಾರದಲ್ಲಿ ಕೆಲಸ ಮಾಡುವ ಜನರಿಗೂ ಲಾಭವಾಗಲಿದೆ ಎಂದು ಹೇಳಿದರು.