ಬೆಳಗಾವಿಯಲ್ಲಿ ಜಾಹೀರಾತಿನ ಮೂಲಕ ಹಿಂದೂ ಸಾಧುಗಳ ಅಶ್ಲೀಲ ವಿಡಂಬನೆಯನ್ನು ಮಾಡಿದ ಮತಾಂಧರ ಒಡೆತನದ `ನಿಯಾಜ್ ಹೋಟೆಲ್’!

‘ಅಹಂ ಬ್ರಹ್ಮಾಸ್ಮಿ.’ ಈ ಶ್ಲೋಕದ ಅಯೋಗ್ಯ ಬಳಕೆ !

ಹಿಂದೂಗಳಿಂದ ತೀವ್ರ ಆಕ್ಷೇಪವಾದ ನಂತರ ಕ್ರಮ ಕೈಗೊಂಡ ಪೊಲೀಸರಿಂದ ಹೋಟೆಲ್ ಶಾಖೆಗಳಿಗೆ ಬೀಗ !

* ಮತಾಂಧರಿಗೆ ತಮ್ಮ ಬಿರಿಯಾನಿಯ ಪ್ರಸಾರಕ್ಕೆ ಹಿಂದೂ ಸಂತರ ಅವಶ್ಯಕತೆ ಏಕೆ ಉಂಟಾಯಿತು? ಇದಕ್ಕಾಗಿ ಅವರು ತಮ್ಮ ಧರ್ಮಗುರುಗಳನ್ನು ಏಕೆ ಬಳಸಲಿಲ್ಲ ? ಇದರಿಂದ ಹೋಟೆಲ್ ಮಾಲೀಕರ ಮತಾಂಧತೆ ಕಂಡುಬರುತ್ತದೆ. ಹಿಂದೂಗಳನ್ನು `ಅಸಹಿಷ್ಣು’ ಎಂದು ನಿಂದಿಸುವವರು ಇದಕ್ಕೆ ಉತ್ತರಿಸಬೇಕು ! – ಸಂಪಾದಕರು 

* ಯಾವಾಗಲೂ ಅಲ್ಪಸಂಖ್ಯಾತರ ವಿರುದ್ಧ ಏನಾದರೂ ಸಂಭವಿಸಿದಲ್ಲಿ, ತಾವಾಗಿಯೇ ಕ್ರಮ ಕೈಗೊಳ್ಳುವ ಪೊಲೀಸರು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಕೈಕಟ್ಟಿ ಕುಳಿತುಕೊಳ್ಳುತ್ತಾರೆ. ಹಿಂದೂಗಳು ಸಂಘಟಿತರಾಗಿ ಆಕ್ಷೇಪಗಳನ್ನು ದಾಖಲಿಸಿದಾಗ ಮಾತ್ರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಭಾರತದಾದ್ಯಂತ ಹೆಚ್ಚು ಕಡಿಮೆ ಇದೇ ಪರಿಸ್ಥಿತಿಯು ಕಂಡುಬರುತ್ತದೆ. ಇದನ್ನು ಪೊಲೀಸರ `ಜಾತ್ಯತೀತತೆ’ ಎಂದು ಕರೆಯ ಬೇಕೆ ? – ಸಂಪಾದಕರು 

ಬೆಳಗಾವಿ – ಇಲ್ಲಿಯ ಮತಾಂಧರ ಒಡೆತನದ ‘ನಿಯಾಜ್ ಹೋಟೆಲ್’ ತಮ್ಮ ಬಿರಿಯಾನಿಯ ಜಾಹೀರಾತನ್ನು ಮಾಡುವಾಗ ಹಿಂದೂ ಸಾಧುಗಳನ್ನು ವ್ಯಂಗ್ಯವಾಗಿ ವಿಡಂಬನೆ ಮಾಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರವಾಗಿ ಆಕ್ಷೇಪಿಸಿ ಹೊಟೆಲ್‍ನ ವಿರುದ್ಧ ಕಠಣ ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಪೊಲೀಸ್ ಅಧೀಕ್ಷಕರಿಗೆ ಮನವಿ ನೀಡುವ ಮೂಲಕ ಒತ್ತಾಯಿಸಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ವಿವಿಧ ಕಡೆಗಳಲ್ಲಿರುವ ಈ ಹೋಟೆಲ್‍ಗಳ ಶಾಖೆಗಳಿಗೆ ಬೀಗ ಜಡಿದು ಹೋಟೆಲ್‍ಗಳ ಹೊರಗೆ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. (ಅಯೋಗ್ಯ ಕೃತ್ಯವನ್ನು ಮಾಡಿದವರಿಗೆ ರಕ್ಷಣೆ ನೀಡುವ ಬದಲು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)

1. ಬೆಳಗಾವಿಯ ನಿಯಾಜ್ ಹೋಟೆಲ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಮಾಂಸಹಾರಿ ಬಿರಿಯಾನಿಯ `ಪೋಸ್ಟರ್'(ಪ್ರಸಿದ್ಧಿ ಪತ್ರಕ) ಅನ್ನು ಪ್ರಸಾರ ಮಾಡಿದೆ. ಅದರಲ್ಲಿ ಓರ್ವ ಹಿಂದೂ ಸಂತರು ಭಕ್ತರನ್ನು ಉದ್ದೇಶಿಸಿ ಮಾತನಾಡುವುದನ್ನು ತೋರಿಸಲಾಗಿದೆ. ಈ ಚಿತ್ರದ ಮೇಲೆ, `ನಿಯಾಜ್ ಬಿರಿಯಾನಿ ತಿಂದ ನಂತರ ಗುರೂಜಿಯವರ ಪ್ರತಿಕ್ರಿಯೆ !’ ಎಂದು ಬರೆಯಲಾಗಿದ್ದು ಕೆಳಗೆ ‘ಬಲಿದಾನ ಬೇಡ, ಬಿರಿಯಾನಿ ನೀಡಿ !’ ಎಂದು ಬರೆಯಲಾಗಿದೆ.

2. ಅದೇ ಸಮಯದಲ್ಲಿ, ‘ನಮ್ಮ ಬಿರಿಯಾನಿ ಇತರ ಬಿರಿಯಾನಿಗಳಿಗೆ ಹೇಳುತ್ತದೆ, ‘ಅಹಂ ಬ್ರಹ್ಮಾಸ್ಮಿ |.’ (ನಾನು ಬ್ರಹ್ಮ ಆಗಿದ್ದೇನೆ)’ ಎಂದು ಬರೆದು ಹಿಂದೂಗಳ ಶ್ರೇಷ್ಠ ಶ್ಲೋಕವನ್ನೂ ಸಹ ವಿಡಂಬನೆ ಮಾಡಲಾಗಿದೆ.

3. ನಿಯಾಜ್ ಹೋಟೆಲ್‍ನ ಆಡಳಿತವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟರ್‍ಗಳನ್ನು ತೆಗೆದು ಹಿಂದುಗಳಲ್ಲಿ ಕ್ಷಮೆ ಕೋರಿದೆ, ಎಂಬ ಸುದ್ದಿಯನ್ನು `ದೈನಿಕ ಲೋಕಮತ’ ಈ ಆಂಗ್ಲಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. (ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ನಂತರ ಕ್ಷಮೆಗೆ ಅರ್ಥವಿಲ್ಲ. ಹೋಟೆಲ್‍ನ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇದೇ ಹಿಂದೂಗಳ ಬೇಡಿಕೆಯಾಗಿದೆ ! – ಸಂಪಾದಕರು)