ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕರಿಂದ ದೇವತೆಗಳ ಅಪಮಾನ !
ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ.
ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ.
ಅಹಮದ ಇವರು ಟ್ವೀಟ್ ಮಾಡಿ, ದೇಶದಲ್ಲಿನ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಬಲಾತ್ಕಾರ ನೋಡುತ್ತಿದ್ದರೆ ನಾನು ಚಿಂತೆ ಮಾಡುತ್ತಿದ್ದೆ. ಬುರ್ಖಾ ಮತ್ತು ಹಿಜಾಬ್ ಮೂಲಕ ಘಟನೆಗಳನ್ನು ತಡೆಯಬಹುದು. ಯಾರನ್ನು ಅವಮಾನಿಸುವ ಉದ್ದೇಶ ನನ್ನದಾಗಲಿಲ್ಲ.
ರೋಟರಿ ಶಾಲೆಯ ಹೊರಗೆ ಮುಸಲ್ಮಾನ ಪಾಲಕರು ಮಹಿಳಾ ಶಿಕ್ಷಕಿಯರೊಂದಿಗೆ ವಾದ ಮಾಡಿದರು; ಆದರೆ ಶಿಕ್ಷಕರು ವಿದ್ಯಾರ್ಥಿನಿಗಳಿಗೆ ಹಿಜಾಬ್ ಹಾಕಿಕೊಂಡು ಶಾಲೆಯೊಳಗೆ ಹೋಗುವುದನ್ನು ತಡೆದರು.
ಅಸ್ಸಾಂನ ಮಾನಕಾಚರದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ ಭದ್ರತಾ ಪಡೆಯು ನಡೆಸಿರುವ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶಿ ಕಳ್ಳಸಾಗಾಣಿಕೆಯೊಬ್ಬ ಹತನಾಗಿದ್ದಾನೆ. ಅಲ್ಲಿ ಕೆಲವು ಕಳ್ಳಸಾಗಾಣಿಕೆದಾರರು ಗಡಿಯಲ್ಲಿರುವ ಬೇಲಿಯಿಂದ ಹಸುಗಳನ್ನು ಕ್ರೆನಗಳ ಸಹಾಯದಿಂದ ಎತ್ತಿ ಬಾಂಗ್ಲಾದೇಶದ ಗಡಿಯಲ್ಲಿ ಸಾಗಿಸುತ್ತಿದ್ದರು.
ಕೀನ್ಯಾದ ಮಾಜಿ ಪ್ರಧಾನಿ ರೈಲಾ ಓಡಿಂಗಾ ಇವರ ಮಗಳಿಗೆ ದೃಷ್ಟಿದೋಷ ಇರುವುದರಿಂದ ಆಕೆಗೆ ನೋಡಲು ತೊಂದರೆ ನಿರ್ಮಾಣವಾಗಿತ್ತು. ವಿವಿಧ ಉಪಚಾರ ಪದ್ಧತಿಯಿಂದ ಚಿಕಿತ್ಸೆ ಕೊಡಿಸಿದ ನಂತರ ಓಡಿಂಗಾ ಇವರು ಆಕೆಯನ್ನು ಕೊಚ್ಚಿ (ಕೇರಳ) ಇಲ್ಲಿಯ ಆಯುರ್ವೇದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಭಾರತೀಯರ ಗೌಪ್ಯತೆ ಮತ್ತು ಭದ್ರತೆಗೆ ಅಪಾಯ ಇರುವುದರಿಂದ ಚೀನಾದ ೫೪ ಕ್ಕಿಂತಲೂ ಹೆಚ್ಚು ‘ಆಪ್’ಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಈ ‘ಆಪ್’ಗಳು ೨೦೨೦ ರಿಂದ ಭಾರತದಲ್ಲಿ ನಿಷೇಧಿಸಲಾದ ಚಿನಾದ ‘ಆಪ್’ಗಳನ್ನು ಹೆಸರು ಬದಲಿಸಿ ಅಥವಾ ಬೇರೆ ‘ಬ್ರಾಂಡ್’ನ ಹೆಸರಿನಲ್ಲಿ ಹೊಸದಾಗಿ ಪರಿಚಯಿಸಿದ್ದರು.
ಪರಿಸರಕ್ಕೆ ಹಾನಿಕಾರಕವಾದ ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕಿನ ಮೇಲೆ ಜುಲೈ ೧, ೨೦೨೨ರಿಂದ ನಿರ್ಬಂಧ ಹೇರಲಾಗುವುದು. ಈ ಸಂದರ್ಭದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳಿಗೆ ನೋಟಿಸ್ ಕಳಿಸಿದೆ.
‘ಇಸ್ಲಾಮಿನಲ್ಲಿ ಹಿಜಾಬ ಅಂದರೆ ಪರದೆ. ವಯಸ್ಸಿಗೆ ಬಂದನಂತರ ಹುಡುಗಿಯರು ಹಿಜಾಬ ಧರಿಸಿ ತಮ್ಮ ಸೌಂದರ್ಯವನ್ನು ಅಡಗಿಸಿಡಬೇಕು. ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಬಲಾತ್ಕಾರಗಳು ಭಾರತದಲ್ಲಿ ನಡೆಯುತ್ತವೆ. ಇದರ ಕಾರಣವೇನು ? ಆ ಮಹಿಳೆಯು ತನ್ನ ಮುಖವನ್ನು ಅಡಗಿಸುವುದಿಲ್ಲ’, ಎಂಬ ಹೇಳಿಕೆಯನ್ನು ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಜಮೀರ ಅಹಮದರವರು ನೀಡಿದ್ದಾರೆ.
ಭಾಜಪದ ಶಾಸಕ ಪ್ರತಾಪ ಸಿಂಹ ಇವರು ಮೈಸೂರು -ಬೆಂಗಳೂರು ಟಿಪ್ಪು ಎಕ್ಸಪ್ರೆಸ್ನ ಹೆಸರನ್ನು ಬದಲಿಸಿ ಒಡೆಯರ ಎಕ್ಸಪ್ರೆಸ್ ಮಾಡುವಂತೆ ರೈಲ್ವೆ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಇವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಓರಿಸ್ಸಾ ರಾಜ್ಯದ ಪಂಚಾಯಿತಿ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದೆ. ಇದರ ಸಂದರ್ಭದಲ್ಲಿ ಸುಂದರಗಡ ಜಿಲ್ಲೆಯ ಮಾಲುಪಾಡಾ ಗ್ರಾಮಸ್ಥರು ಸರಪಂಚ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಒಂದು ಲಿಖಿತ ಹಾಗೂ ಮೌಖಿಕ ಪರೀಕ್ಷೆ ತೆಗೆದುಕೊಳ್ಳಲಾಯಿತು.