ಕರ್ನಾಟಕದ ಕೆಲವು ಶಾಲೆಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಂದ ಹಿಜಾಬ್ ಹಾಕಿಕೊಂಡು ಶಾಲೆಯೊಳಗೆ ಪ್ರವೇಶ ಮಾಡುವ ಪ್ರಯತ್ನ

ಶಾಲೆಯಿಂದ ಪ್ರವೇಶಕ್ಕೆ ನಿರಾಕರಣೆ

ಕರ್ನಾಟಕ ಉಚ್ಚ ನ್ಯಾಯಾಲಯದ ಅಂತಿಮ ಆದೇಶವಿರುವಾಗಲೂ ಅದನ್ನು ಉಲ್ಲಂಘಿಸುವ ಧರ್ಮಾಂಧರು !

ಮಂಡ್ಯ – ಫೆಬ್ರವರಿ ೧೪ ರಿಂದ ಪುನಃ ಶಾಲೆ ಹಾಗೂ ಮಹಾವಿದ್ಯಾಲಯವು ಆರಂಭವಾಗಿದೆ. ಹಿಜಾಬ್ ಪ್ರಕರಣದಿಂದ ರಾಜ್ಯದಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕರ್ನಾಟಕ ಸರಕಾರವು ೩ ದಿನ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಿತ್ತು. ಈ ಸಮಯದಲ್ಲಿ ಉಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ಬರುವವರೆಗೆ ಶಾಲೆ ಹಾಗೂ ಮಹಾವಿದ್ಯಾಲಯಗಳಲ್ಲಿ ಯಾವುದೇ ಧಾರ್ಮಿಕ ಉಡುಗೆಯನ್ನು ಹಾಕದೆ ಹೋಗಬೇಕು, ಎಂಬ ಮಧ್ಯಂತರ ಆದೇಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಮಂಡ್ಯದ ಒಂದು ಶಾಲೆಗೆ ಕೆಲವು ಮುಸಲ್ಮಾನ ಪೋಷಕರು ಅವರ ಹುಡುಗಿಯರಿಗೆ ಹಿಜಾಬ್ ಹಾಕಿಕೊಂಡು ಶಾಲೆಗೆ ಬಿಡಲು ಬಂದಿದ್ದರು. ಆಗ ಶಾಲೆಯ ಆಡಳಿತ ಮಂಡಳಿಯು ಅವರಿಗೆ ಹಿಜಾಬ್ ತೆಗೆಯಲು ಹೇಳಿತು.

ಈ ಸಮಯದಲ್ಲಿ ರೋಟರಿ ಶಾಲೆಯ ಹೊರಗೆ ಮುಸಲ್ಮಾನ ಪಾಲಕರು ಮಹಿಳಾ ಶಿಕ್ಷಕಿಯರೊಂದಿಗೆ ವಾದ ಮಾಡಿದರು; ಆದರೆ ಶಿಕ್ಷಕರು ವಿದ್ಯಾರ್ಥಿನಿಗಳಿಗೆ ಹಿಜಾಬ್ ಹಾಕಿಕೊಂಡು ಶಾಲೆಯೊಳಗೆ ಹೋಗುವುದನ್ನು ತಡೆದರು.