ಇರಾನ್‌ನ ಸರ್ವೋಚ್ಚ ನಾಯಕ ಟೀಕಿಸಿದ ನಂತರ ಟ್ರಂಪ್ ಪ್ರತಿಕ್ರಿಯೆ

ನ್ಯೂಯಾರ್ಕ್ – ಅಮೆರಿಕದೊಂದಿಗೆ ಒಪ್ಪಂದದ ನಂತರ ಇರಾನ್‌ನ ಸರ್ವೋಚ್ಚ ನಾಯಕ ಮೊಜತಬಾ ಖಮೇನಿ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಟೀಕೆ ಮಾಡಿದ್ದರು. ಈ ಟೀಕೆಗೆ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಒಪ್ಪಂದ ಮಾಡಿಕೊಳ್ಳಲು ನಾನು ಆತುರ ಪಟ್ಟಿರಲಿಲ್ಲ, ಇರಾನ್ ಹೆಚ್ಚು ಆತುರಪಟ್ಟಿತ್ತು, ಎಂದು ಅವರು ಪ್ರತಿಪಾದಿಸಿದ್ದಾರೆ.
ಖಮೇನಿ ಏನು ಹೇಳಿದ್ದರು?
ಇರಾನ್‌ನ ಸರ್ವೋಚ್ಚ ನಾಯಕ ಮೊಜತಬಾ ಖಮೇನಿ ಅವರು, ಅಮೆರಿಕದ ನಾಯಕರು ಒಪ್ಪಂದಕ್ಕಾಗಿ ಆತುರ ಪಟ್ಟಿದ್ದರು ಮತ್ತು ಅದನ್ನು ಪಡೆಯಲು ಅವರು ಎಲ್ಲಾ ರೀತಿಯ ತಂತ್ರಗಳನ್ನು ರೂಪಿಸಿದ್ದರು, ಎಂದು ನೇರ ಆರೋಪ ಮಾಡಿದ್ದರು. ಅಮೆರಿಕ-ಇರಾನ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಖಮೇನಿ ಇರಾನ್ ಜನರಿಗೆ, ಈ ಒಪ್ಪಂದಕ್ಕೆ ನನ್ನ ತತ್ವಶಃ ವಿರೋಧವಿತ್ತು; ಆದರೆ ನಂತರ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯರು ದೇಶದ ಹಿತವನ್ನು ರಕ್ಷಿಸಲಾಗುವುದು ಎಂಬ ಭರವಸೆ ನೀಡಿದ ನಂತರ ನಾನು ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿದೆ, ಎಂದು ಹೇಳಿದರು.
ಇರಾನ್ ಮುಗಿದುಹೋಗಿದೆ! – ಟ್ರಂಪ್
ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಸಿಟ್ಟಿನಿಂದ ಇರಾನ್ ಈಗ ಮುಗಿದುಹೋಗಿದೆ ಎಂದು ಘೋಷಿಸಿದರು. ಸಂಘರ್ಷದ ನಂತರ ಅಮೆರಿಕವಲ್ಲ, ಇರಾನ್ ಮಾತುಕತೆ ನಡೆಸುವಂತೆ ಬೇಡಿಕೆ ಇಟ್ಟಿತ್ತು. ನಾವು ಆತುರ ಪಟ್ಟಿರಲಿಲ್ಲ. ಇರಾನ್‌ಗೆ ಆತುರವಾಗಿತ್ತು. ಅಮೆರಿಕ ಇರಾನ್‌ಗೆ ಯಾವುದೇ ಆರ್ಥಿಕ ನೆರವು ನೀಡುವುದಿಲ್ಲ. ಅವರಿಗೆ ಒಂದು ಪೈಸೆಯೂ ಸಿಗುವುದಿಲ್ಲ, ಎಂದು ಹೇಳಿದರು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman