ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕಿನ ಮೇಲೆ ಜುಲೈ ೧, ೨೦೨೨ರಿಂದ ನಿರ್ಬಂಧ !

ನವದೆಹಲಿ – ಪರಿಸರಕ್ಕೆ ಹಾನಿಕಾರಕವಾದ ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕಿನ ಮೇಲೆ ಜುಲೈ ೧, ೨೦೨೨ರಿಂದ ನಿರ್ಬಂಧ ಹೇರಲಾಗುವುದು. ಈ ಸಂದರ್ಭದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳಿಗೆ ನೋಟಿಸ್ ಕಳಿಸಿದೆ. ಇದರಲ್ಲಿ ಜೂನ ೩೦ರ ಮೊದಲು ಒಂದೇ ಬಾರಿ ಬಳಸಬಹುದಾದ ಪ್ಲಾಸ್ಟಿಕಿನ ಮೇಲಿನ ನಿರ್ಬಂಧದ ಪೂರ್ವ ಸಿದ್ಧತೆಯನ್ನು ಮಾಡಲು ಸೂಚಿಸಲಾಗಿದೆ. ಈ ನೋಟೀಸಿನಲ್ಲಿ ‘ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಲಾಗುವುದು’ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇದರಲ್ಲಿ ಉತ್ಪಾದನೆಗಳ ಜಪ್ತು, ಪರಿಸರ ಮಾಲಿನ್ಯ ಮಾಡಿದ್ದಾರೆ ಎಂದು ದಂಡ ವಸೂಲಿ, ಹಾಗೆಯೇ ಆ ಉತ್ಪಾದನೆಗೆ ಸಂಬಂಧಿಸಿದ ಉದ್ಯೋಗವನ್ನು ಮುಚ್ಚಿಸುವುದು, ಇಂತಹ ಕಾರ್ಯಾಚರಣೆಗಳು ಸೇರಿವೆ.

ಯಾವುದರ ಮೇಲೆ ನಿರ್ಬಂಧ ?

ಪ್ಲಾಸ್ಟೀಕಿನ ಧ್ವಜಗಳು, ಕೆಂಡಿ ಸ್ಟಿಕ್(ಕಡ್ಡಿ), ಆಯಿಸ್ಕ್ರೀಮ್ ಸ್ಟಿಕ್ (ಕಡ್ಡಿ), ಅಲಂಕಾರಕ್ಕಾಗಿ ಬಳಸಲಾಗುವ ಥರ್ಮಾಕೊಲ, ಚಮಚಗಳು, ‘ಇಯರಬಡ್ಸ್’ ಇತ್ಯಾದಿಗಳು ಸೇರಿವೆ. ಇವುಗಳೊಂದಿಗೆ ಪ್ಲಾಸ್ಟಿಕ್ ಕಪ್, ತಟ್ಟೆಗಳು, ಲೋಟಗಳು, ಚಮಚಗಳು, ಚಾಕು, ಸ್ಟ್ರಾ ಗಳಂತಹ ಕಟಲೆರಿ ವಸ್ತುಗಳು, ಮಿಠಾಯಿ ಡಬ್ಬಿಗಳ ಮೇಲೆ ಹಚ್ಚಲಾಗುವ ಪ್ಲಾಸ್ಟಿಕ್, ಪ್ಲಾಸ್ಟೀಕಿನ ಆಮಂತ್ರಣ ಪತ್ರಿಕೆ, ೧೦೦ ಮೈಕ್ರಾನಿಗಿಂತಲೂ ಕಡಿಮೆ ದಪ್ಪವಿರುವ ಪಿವಿಸಿ ಫಲಕ ಇತ್ಯಾಗಳೂ ಇದರಲ್ಲಿ ಸೇರಿವೆ.