ಅಸ್ಸಾಂನ ಬಾಂಗ್ಲಾದೇಶದ ಗಡಿಯಲ್ಲಿ ಗೋವಂಶದ ಕಳ್ಳಸಾಗಾಣಿಕೆ ಮಾಡುವವರಿಂದ ಗಡಿ ಭದ್ರತಾ ದಳದ ಸೈನಿಕರ ಮೇಲೆ ದಾಳಿ

  • ಸೈನಿಕರ ಗುಂಡಿನ ದಾಳಿಯಲ್ಲಿ ಒಬ್ಬ ಕಳ್ಳಸಾಗಾಣಿಕೆದಾರರ ಹತ

  • ೩ ಗೋವುಗಳು ಮತ್ತು ಕೆಲವು ಶಸ್ತ್ರಾಸ್ತ್ರಗಳು ವಶ

ಗೋವಂಶದ ಕಳ್ಳಸಾಗಾಣಿಕೆ ಮಾಡುವವರು ನಿನ್ನೆಯವರೆಗೆ ಗೋರಕ್ಷಕ ಮತ್ತು ಪೊಲೀಸರ ಮೇಲೆ ದಾಳಿ ಮಾಡುತ್ತಿದ್ದರು, ಈಗ ಅವರು ಸೈನಿಕರ ಮೇಲೆ ದಾಳಿ ಮಾಡುವ ಧೈರ್ಯ ತೋರುತ್ತಿದ್ದಾರೆ. ಇದನ್ನು ನೋಡಿದರೆ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿವುದು ಆವಶ್ಯಕವಾಗಿದೆ !
ಪ್ರಾಸಂಗಿಕ ಚಿತ್ರ

ಗುಹಾಟಿ (ಅಸ್ಸಾಂ) – ಅಸ್ಸಾಂನ ಮಾನಕಾಚರದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ ಭದ್ರತಾ ಪಡೆಯು ನಡೆಸಿರುವ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶಿ ಕಳ್ಳಸಾಗಾಣಿಕೆಯೊಬ್ಬ ಹತನಾಗಿದ್ದಾನೆ. ಅಲ್ಲಿ ಕೆಲವು ಕಳ್ಳಸಾಗಾಣಿಕೆದಾರರು ಗಡಿಯಲ್ಲಿರುವ ಬೇಲಿಯಿಂದ ಹಸುಗಳನ್ನು ಕ್ರೆನಗಳ ಸಹಾಯದಿಂದ ಎತ್ತಿ ಬಾಂಗ್ಲಾದೇಶದ ಗಡಿಯಲ್ಲಿ ಸಾಗಿಸುತ್ತಿದ್ದರು. ಆ ಸಮಯದಲ್ಲಿ ಸೈನಿಕರು ಕಳ್ಳಸಾಗಾಣಿಕೆದಾರರ ತಡೆಯಲು ಪ್ರಯತ್ನ ಮಾಡುವಾಗ ಅವರು ಸೈನಿಕರ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ಅಲ್ಲಿಂದ ೩ ಹಸುಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಡಿ ಭದ್ರತಾ ಪಡೆಯ ಅಧಿಕಾರಿಯು, ಭಾರತದಿಂದ ೨೦ ರಿಂದ ೨೫ ಕಳ್ಳಸಾಗಾಣಿಕೆದಾರರು ಹಸುಗಳನ್ನು ಗಡಿಯಲ್ಲಿನ ಬೇಲಿಯಿಂದ ಬಾಂಗ್ಲಾದೇಶದ ಗಡಿಯಿಂದ ಸಾಗಿಸುತ್ತಿದ್ದರು. ಆ ಸಮಯದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿಯೂ ಕೆಲವು ಕಳ್ಳಸಾಗಾಣಿಕೆದಾರರ ಉಪಸ್ಥಿತರಿದ್ದರು ಎಂದು ಹೇಳಿದರು.

೨೦೨೧ ರಲ್ಲಿ ೮ ಸಾವಿರ ಗೋವಂಶ ವಶಕ್ಕೆ

ಗಡಿ ಭದ್ರತಾ ದಳದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ೨೦೨೧ ರಲ್ಲಿ ೧೧ ಕೋಟಿ ರೂಪಾಯಿಯ ಮಾದಕ ಪದಾರ್ಥಗಳ ಸಹಿತ ೮ ಸಾವಿರ ಗೋವಂಶಗಳನ್ನು ವಶಪಡಿಸಿಕೊಳ್ಳಲಾಗಿತ್ತು ಹಾಗೂ ೧೧೭ ಬಾಂಗ್ಲಾದೇಶದ ನಾಗರಿಕರನ್ನು ಬಂಧಿಸಲಾಗಿತ್ತು.