ಭಟ್ಕಳದಲ್ಲಿ ಪೊಲೀಸರ ಮೋಗಲಾಯಿ ಆಡಳಿತ!
ಹಿಂದುತ್ವನಿಷ್ಠರು ಪ್ರತಿಭಟಿಸಿದ ನಂತರ ಮುಸಲ್ಮಾನನ ಬಂಧನ

ಭಟ್ಕಳ – ಒಂದು ವಾಣಿಜ್ಯ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯನ್ನು ಅದೇ ಸಂಕೀರ್ಣದಲ್ಲಿ ಕೆಲಸ ಮಾಡುತ್ತಿದ್ದ ಮುಸಲ್ಮಾನ ಮಾರಾಟಗಾರನೊಬ್ಬ (‘ಸೇಲ್ಸ್‌ಮ್ಯಾನ್’) ಅಪಹರಿಸಲು ಪ್ರಯತ್ನಿಸಿದನು. ಆ ಸಮಯದಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರ ಜಾಗರೂಕತೆಯಿಂದ ಈ ಸಂಚು ವಿಫಲವಾಯಿತು. ಈ ಪ್ರಕರಣದಲ್ಲಿ ಪೊಲೀಸರು ಮುಸಲ್ಮಾನನ ಮೇಲೆ ಕ್ರಮ ಕೈಗೊಳ್ಳುವ ಬದಲು ಹಿಂದುತ್ವನಿಷ್ಠ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದರು. ನಂತರ ಹಿಂದುತ್ವನಿಷ್ಠರು ಒತ್ತಡ ಹೇರಿದ ನಂತರ ಪೊಲೀಸರು ಮುಸಲ್ಮಾನನನ್ನು ಬಂಧಿಸಿದರು.
1. ನಗರದ ಒಂದು ವಾಣಿಜ್ಯ ಸಂಕೀರ್ಣದಲ್ಲಿ ಮಾರುಕೇರಿ ಭಾಗದ ಹಿಂದೂ ಯುವತಿಯೊಬ್ಬಳು ಕೆಲಸ ಮಾಡುತ್ತಿದ್ದಳು. ಅದೇ ಸಂಕೀರ್ಣದಲ್ಲಿ ಕಾರ್ಗದ್ದೆಯ ಶಾಹಿದ್ ಖಾನ್ ಎಂಬಾತ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದನು.
2. ಜೂನ್ 17 ರಂದು ‘ನನಗೆ ನಿನ್ನೊಂದಿಗೆ ತುರ್ತಾಗಿ ಮಾತನಾಡಬೇಕು, ನಡಿ ಹೋಗೋಣ’ ಎಂದು ಹೇಳಿ, ಖಾನ್ ಯುವತಿಯನ್ನು ಬಲವಂತವಾಗಿ ಕಾರ್‍ನಲ್ಲಿ ಕೂರಿಸಿಕೊಂಡು ಸಾಗರ ನಗರದ ದಿಕ್ಕಿಗೆ ವೇಗವಾಗಿ ಚಲಿಸಿದನು.
3. ಸಾಗರ ರಸ್ತೆಯ ನಿರ್ಜನ ಪ್ರದೇಶದ ಕಡೆಗೆ ಕಾರ್ ಅನುಮಾನಾಸ್ಪದವಾಗಿ ಹೋಗುತ್ತಿರುವುದನ್ನು ಕಂಡು ಹಿಂದೂ ಸಂಘಟನೆಯ ಕಾರ್ಯಕರ್ತರು ತಕ್ಷಣವೇ ವಾಹನವನ್ನು ತಡೆದರು. ನಂತರ ಅವರು ಯುವತಿಯನ್ನು ರಕ್ಷಿಸಿ ಶಾಹಿದ್ ಖಾನ್‌ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.
4. ಪೊಲೀಸರು ಆರೋಪಿ ಶಾಹಿದ್ ಖಾನ್ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಬದಲು ಯುವತಿಯನ್ನು ರಕ್ಷಿಸಿದ 2 ಹಿಂದೂ ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದರು. ಪೊಲೀಸರ ಈ ಕೃತ್ಯದಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು.
5. ಪೊಲೀಸರ ಪಕ್ಷಪಾತಿ ಧೋರಣೆಯನ್ನು ಖಂಡಿಸುತ್ತಾ, ಭಾಜಪ ಮತ್ತು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೂನ್ 17 ರ ರಾತ್ರಿ ಭಟ್ಕಳ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು.
6. ಆಂದೋಲನದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಸಂತ್ರಸ್ತ ಹಿಂದೂ ಯುವತಿಯೇ ಸ್ವತಃ ಪೊಲೀಸ್ ಠಾಣೆಗೆ ಬಂದು ಶಾಹಿದ್ ಖಾನ್ ವಿರುದ್ಧ ಲಿಖಿತ ದೂರು ನೀಡಿದಳು. ‘ನನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ನನ್ನನ್ನು ಕಾರ್‍ನಲ್ಲಿ ಕೂರಿಸಲಾಗಿತ್ತು’, ಎಂದು ಅವಳು ದೂರಿನಲ್ಲಿ ನಮೂದಿಸಿದಳು.
7. ಯುವತಿಯ ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಶಾಹಿದ್ ಖಾನ್‌ನನ್ನು ಬಂಧಿಸಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!