ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕರಿಂದ ದೇವತೆಗಳ ಅಪಮಾನ !

ದಿನದರ್ಶಿಕೆಯಲ್ಲಿರುವ ಭಗವಾನ ಶ್ರೀರಾಮ ಮತ್ತು ಸೀತಾಮಾತೆಯ ಚಿತ್ರಗಳ ಮೇಲೆ ಸ್ವಂತ ಹಾಗೂ ಪತ್ನಿಯ ಮುಖವನ್ನು ಹಾಕಿದರು !

ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದೇ ಇರುವುದರ ಪರಿಣಾಮವಾಗಿದೆ ! ಇಂತಹ ಉಪನ್ಯಾಸಕರು ವಿದ್ಯಾರ್ಥಿಗಳೆದುರು ಯಾವ ಆದರ್ಶವನ್ನಿಡುತ್ತಿದ್ದಾರೆ ?

(ಈ ಮೇಲಿನ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೆ ನಿಜ ಸ್ಥಿತಿಯನ್ನು ತೋರಿಸುವುದಾಗಿದೆ. ಸಂಪಾದಕರು)

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿಯ ಬನಾರಸ ಹಿಂದೂ ವಿದ್ಯಾಪೀಠದ ಉಪನ್ಯಾಸಕ ಡಾ. ಅಮರೇಶ ಕುಮಾರ ಇವರು ಪ್ರಕಾಶಿಸಿರುವ ದಿನದರ್ಶಿಕೆಯಲ್ಲಿ ಭಗವಾನ ಶ್ರೀರಾಮ ಮತ್ತು ಸೀತಾಮಾತೆ ಇವರ ಚಿತ್ರದ ಮೇಲೆ ತನ್ನ ಹಾಗೂ ತನ್ನ ಪತ್ನಿಯ ಮುಖದ ಚಿತ್ರವನ್ನು ಹಚ್ಚಿದ್ದಾರೆ. ಇದರಿಂದಾಗಿ ಅವರನ್ನು ವಿರೋಧಿಸಲಾಗುತ್ತಿದೆ. ಈ ವಿಭಾಗದಲ್ಲಿ ಫೆಬ್ರುವರಿ ೫ ರಿಂದ ನಡೆಯುತ್ತಿರುವ ಒಂದು ಪ್ರದರ್ಶನದಲ್ಲಿ ಕುಮಾರ ಇವರು ಈ ದಿನದರ್ಶಿಕೆಯನ್ನು ಇಟ್ಟಿದ್ದಾರೆ. ಕುಮಾರ್ ಇವರ ಹೇಳಿಕೆಯ ಪ್ರಕಾರ, ೧೦ ವರ್ಷಗಳ ಹಿಂದೆ ದೆಹಲಿಯಲ್ಲಿಯೂ ಅವರು ಇದೇ ರೀತಿಯ ದಿನದರ್ಶಿಕೆಯಲ್ಲಿ ತನ್ನ ಹಾಗೂ ತನ್ನ ಪತ್ನಿಯ ಛಾಯಾಚಿತ್ರಗಳನ್ನು ಅಂಟಿಸಿದ್ದರು. ‘ಇದು ಶ್ರದ್ಧೆಗೆ ಸಂಬಂಧಿತ ವಿಷಯವಾಗಿದ್ದು ನಾನು ಮತ್ತು ನನ್ನ ಕುಟುಂಬ ರಾಮಭಕ್ತರಾಗಿದ್ದೇವೆ’, ಎಂದು ಡಾ. ಕುಮಾರ ಇವರು ಹೇಳಿದ್ದಾರೆ. (ಶ್ರದ್ಧೆ ಯಾವುದಕ್ಕೆ ಹೇಳುತ್ತಾರೆ ?, ಇದರ ಬಗ್ಗೆ ಹಿಂದೂಗಳಿಗೆ ಜ್ಞಾನ ಇಲ್ಲದಿರುವುದರಿಂದ ಅವರು ಈ ರೀತಿಯ ಏನಾದರೂ ಮಾಡಿ ದೇವತೆಗಳ ಅಪಮಾನ ಮಾಡುತ್ತಿರುತ್ತಾರೆ ! – ಸಂಪಾದಕರು)

(ಸೌಜನ್ಯ : News18 Virals)