ಉತ್ತರಪ್ರದೇಶದಲ್ಲಿನ ಧಾರ್ಮಿಕ ಸ್ಥಳಗಳಲ್ಲಿರುವ ೧ ಲಕ್ಷ ಭೋಂಗಾಗಳನ್ನು ಇಳಿಸಲಾಯಿತು ! – ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ರಾಜ್ಯದಲ್ಲಿನ ಧಾರ್ಮಿಕ ಸ್ಥಳಗಳಲ್ಲಿದ್ದ ೧ ಲಕ್ಷ ಭೋಂಗಾಗಳನ್ನು ತೆರವುಗೊಳಿಸಲಾಗಿದೆ, ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ನೀಡಿದ್ದಾರೆ. ‘ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೋಂಗಾಗಳನ್ನು ತೆರವುಗೊಳಿಸಿದ್ದರಿಂದ ರಾಜ್ಯದಲ್ಲಿನ ಗದ್ದಲವು ಕಡಿಮೆಯಾಗಿದೆ. ಭೋಂಗಾಗಳನ್ನು ಇಳಿಸುವ ಸಮಯದಿಂದ ಇಲ್ಲಿಯ ವರೆಗೆ ಯಾವುದೇ ವಾದಗಳಾಗಲಿಲ್ಲ’, ಎಂದೂ ಅವರು ಹೇಳಿದ್ದಾರೆ.

ಯೋಗಿ ಆದಿತ್ಯನಾಥರು ಮಾತನಾಡುತ್ತ, ‘ನಾವು ಕೇವಲ ಭೋಂಗಾಗಳನ್ನೇ ತೆರವುಗೊಳಿಸಿದೇ ರಸ್ತೆಯ ಮೇಲೆ ನಡೆಯುವ ನಮಾಜುಪಠಣದ ಬಗ್ಗೆಯೂ ಯೋಗ್ಯ ಮಾರ್ಗವನ್ನು ಹುಡುಕಿದ್ದೇವೆ’ ಎಂದು ಹೇಳಿದರು. ನಾವು ‘ರಸ್ತೆಯ ಮೇಲೆ ನಮಾಜು ಪಠಣ ಮಾಡಲು ಸಾಧ್ಯವಿಲ್ಲ’, ಎಂಬ ಸೂಚನೆಯನ್ನು ನೀಡಿದ್ದೆವು. ಅದರಂತೆಯೇ ಈಗ ರಸ್ತೆಯ ಮೇಲೆ ಯಾರೂ ನಮಾಜು ಪಠಣ ಮಾಡುವುದಿಲ್ಲ. ಉತ್ತರಪ್ರದೇಶದಲ್ಲಿ ಕೋಟ್ಯಾಂತರ ಮುಸಲ್ಮಾನರು ವಾಸಿಸುತ್ತಾರೆ. ಆದರೆ ಈದ್‌ನಂದು ಎಲ್ಲಿಯೂ ರಸ್ತೆಯ ಮೇಲೆ ನಮಾಜುಪಠಣವಾಗಿರುವುದು ಕಂಡುಬಂದಿಲ್ಲ. ಈಗ ಜನರೂ ಮುಂದೆಬಂದು ಸರಕಾರದ ಆದೇಶಗಳನ್ನು ಪಾಲಿಸುತ್ತಿದ್ದು ರಸ್ತೆಗಳ ಬದಲು ಮನೆಯಲ್ಲಿ ಅಥವಾ ಮಸೀದಿಗಳಲ್ಲಿ ನಮಾಜು ಪಠಣ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! ಯೋಗಿ ಆದಿತ್ಯನಾಥರಿಗೆ ಮಾಡಲು ಸಾಧ್ಯವಾಗಿದ್ದನ್ನು ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಮಾಡಿ ತೋರಿಸಬೇಕಿದೆ ಮತ್ತು ಸಮಾಜದಲ್ಲಿನ ಅಶಾಂತಿ ಮತ್ತು ಶಬ್ದಮಾಲಿನ್ಯವನ್ನು ದೂರಗೊಳಿಸಬೇಕಿದೆ !