ಸನಾತನ ಪ್ರಭಾತ ನಿಯತಕಾಲಿಕೆಗಳ ಇ-ಪೇಪರ್ ಆಳಂದಿ (ಮಹಾರಾಷ್ಟ್ರ) ಯಲ್ಲಿ ಲೋಕಾರ್ಪಣೆ !

ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಖಜಾಂಚಿ ಪರಮಪೂಜ್ಯ ಸ್ವಾಮಿ ಗೋವಿಂದದೇವಗಿರಿ ಮಹಾರಾಜ ಇವರ ಕರಕಮಲದಿಂದ ಲೋಕಾರ್ಪಣೆ !

ಎಡದಿಂದ ಆಚಾರ್ಯ ಸತ್ಯನಾರಾಯಣ ದಾಸ್, ಸನಾತನ ಪ್ರಭಾತ ನಿಯತಕಾಲಿಕೆಗಳ ಇ-ಪೇಪರ್ ಲೋಕಾರ್ಪಣೆ ಮಾಡುವಾಗ ಪರಮಪೂಜ್ಯ ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ ಮತ್ತು ಶ್ರೀ. ಮುಕುಲ ಕಾನಿಟಕರ

ಆಳಂದಿ (ಜಿಲ್ಲೆ ಪುಣೆ) ೩ ಮೆ (ವಾರ್ತೆ) – ಕಳೆದು ೨೪ ವರ್ಷಗಳಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಿರಂತರ ಪ್ರಯತ್ನ ಮಾಡುತ್ತಿರುವ ಸನಾತನ ಪ್ರಭಾತ ನಿಯತಕಾಲಿಕೆಗಳ ಇ-ಪೇಪರ್ ಉದ್ಘಾಟನೆ ಮತ್ತು ಲೋಕಾರ್ಪಣೆ ಮೆ ೩ ರಂದು ಅಂದರೆ ಅಕ್ಷಯ ತೃತಿಯಾದ ಶುಭದಿನದಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಖಜಾಂಚಿ ಪರಮಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಇವರ ಆಳಂದಿಯಲ್ಲಿರುವ ವೇದಪಾಠಶಾಲೆಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಡಿಜಿಟಲ್ ನ್ಯೂಸ್ ಪೇಪರ್ ನಿಂದ ನಿರಂತರ ದೃಷ್ಟಿಕೋನ ಮತ್ತು ರಾಷ್ಟ್ರ ಧರ್ಮ ಉತ್ಥಾನದ ಕಾರ್ಯದಲ್ಲಿ ಕಾರ್ಯನಿರತವಾಗಿರುವ ಸನಾತನ ಪ್ರಭಾತ ಈಗ ಹೆಚ್ಚು ವ್ಯಾಪಕ ಸ್ವರೂಪದಲ್ಲಿ ಜಗತ್ತಿನಾದ್ಯಂತ ಓದುಗರಿಗೆ ಲಭ್ಯ ಆಗುವುದು.

ಈ ಸಮಯದಲ್ಲಿ ಸನಾತನ ಪ್ರಭಾತ ದೈನಿಕದ ಉಪಸಂಪಾದಕರು, ಮಹಾರಾಷ್ಟ್ರ ದ ಶಾಸಕಾಂಗ ದ ಪ್ರತಿನಿಧಿ ಶ್ರೀ ಅರವಿಂದ ಪಾನ್ಸರೆ ಇವರು ಈ ಡಿಜಿಟಲ್ ನ್ಯೂಸ್ ಪೇಪರ್ ಹೊರತಂದಿರುವುದು ಉದ್ದೇಶ ತಿಳಿಸಿದರು. ಉಪಸ್ಥಿತರಿದ್ದ ಗೌರವಾನ್ವಿತರ ಪರಿಚಯ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪರಾಗ ಗೋಖಲೆ ಇವರು ಮಾಡಿದರು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಶ್ರೀ ಚೈತನ್ಯ ತಾಗಡೆ ಇವರು ಉಪಸ್ಥಿತರಿದ್ದರು.


ದೇಶದಲ್ಲಿ ನಡೆಯುತ್ತಿರುವ ಪರಿವರ್ತನೆಯಲ್ಲಿ ಸನಾತನ ಪ್ರಭಾತ ದೊಡ್ಡ ಪ್ರಮಾಣದ ಯೋಗದಾನವಿದೆ – ಪರಮಪೂಜ್ಯ ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ

ನನಗೆ ಸನಾತನ ಪ್ರಭಾತದ ಕಾರ್ಯದ ಬಗ್ಗೆ ಅನೇಕ ವರ್ಷಗಳಿಂದ ಪರಿಚಯವಿದೆ. ಈ ಸಂಸ್ಥೆ ಅತ್ಯುತ್ತಮ ಕಾರ್ಯ ನಡೆಸುತ್ತಿದೆ. ಈ ಕಾರ್ಯದಿಂದ ರಾಷ್ಟ್ರದಲ್ಲಿ ಎಲ್ಲೆಡೆ ಜಾಗೃತಿಯ ಅನುಭೂತಿ ಯಾರಿಗಾದರೂ ಬರುವಂತಹ ವಾತಾವರಣ ನಿರ್ಮಾಣವಾಗಿದೆ. ಪ್ರತಿದಿನ ನಮ್ಮ ಮನೆಗೆ ಬರುವ ಸನಾತನ ಪ್ರಭಾತದ ಇ-ಪೇಪರ್ ಆವೃತ್ತಿ ಮೊದಲನೇ ಬಾರಿಗೆ ಪ್ರಕಷನಗೊಂಡಿದೆ. ಅದರ ಬಿಡುಗಡೆ ಆಳಂದಿ ಕ್ಷೇತ್ರದ ವೇದಶ್ರೀ ತಪೋವನದಲ್ಲಿ ಭಗವಾನ್ ಜ್ಞಾನೇಶ್ವರ ಮಾವುಲಿಯ ಕೃಪೆಯಿಂದ ಆಗಿದೆ ಎಂದು ನಾನು ಘೋಷಿಸುತ್ತೇನೆ.

ನನ್ನ ದೃಷ್ಟಿಯಿಂದ ಹಿಂದೂರಾಷ್ಟ್ರ ಇದು ಇದ್ದೇ ಇದೆ. ಹಿಂದೂ ಸಾಮ್ರಾಜ್ಯದ ನಿರ್ಮಾಣ ಆಗುವುದು ಆವಶ್ಯಕವಾಗಿದೆ. ಆ ದಿಕ್ಕಿನಲ್ಲಿ ನಮ್ಮ ನಡೆ ಹೆಚ್ಚು ವೇಗವಾಗಿ ನಡೆಯುತ್ತಿದೆ. ಇದು ಸಂಪೂರ್ಣ ದೇಶದ ವಾತಾವರಣ ನೋಡುವಾಗ ಗಮನಕ್ಕೆ ಬರುತ್ತದೆ. ದೇಶದಲ್ಲಿ ಏನೆಲ್ಲ ಪರಿವರ್ತನೆ ಆಗುತ್ತಿದೆ, ಯಾವುದೆಲ್ಲ ಪ್ರಗತಿ ಯೋಗ್ಯ ದಿಕ್ಕಿನಲ್ಲಿ ಆಗುತ್ತಿದೆಯೋ ಅದರಲ್ಲಿ ಸನಾತನ ಪ್ರಭಾತದ ಮಹತ್ವಪೂರ್ಣ ಯೋಗದಾನವಿದೆ. ಇದನ್ನು ಒಪ್ಪಿಕೊಳ್ಳುವಲ್ಲಿ ನನಗೆ ಯಾವುದೇ ಸಂಕೋಚವಿಲ್ಲ. ಸನಾತನ ಪ್ರಭಾತಕ್ಕ ಎಲ್ಲಾ ರೀತಿಯ ಶುಭೇಚ್ಚೆ ನೀಡುತ್ತಾ ನಿಮ್ಮಿಂದ ಇದೇ ರೀತಿಯ ಕಾರ್ಯ ನಡೆಯಲಿ, ಈ ಭಾರತಮಾತೆಯ ಸೇವೆ ಮತ್ತು ಭಾರತೀಯ ಸಂಸ್ಕೃತಿಯ ಸೇವೆ ನಡೆಯುತ್ತಿರಲಿ ಮತ್ತು ನಮ್ಮ ಪೂರ್ವಜರು ನೋಡಿರುವ ಮತ್ತು ನಾವು ಕಂಡಿರುವ ಕನಸು ನಮ್ಮ ಕಣ್ಣ ಮುಂದೆ ಸಾಕಾರಗೊಳಿಸುವ ಸದ್ಭಾಗ್ಯ ನಮ್ಮೆಲ್ಲರಿಗೂ ಸಿಗಲಿ, ಎಂಬ ಪ್ರಾರ್ಥನೆ ನಾನು ಭಗವಾನ್ ಜ್ಞಾನೇಶ್ವರ ಮಾವುಲಿಯಲ್ಲಿ ಮಾಡುತ್ತೇನೆ.


ಸಂಸ್ಕೃತಿಯನ್ನು ಒಪ್ಪಿಕೊಂಡು ನಡೆಯುತ್ತಿರುವ ಕಾರ್ಯ ಕಾಲಕ್ಕನುಸಾರ ಸಮಾಜದವರಿಗೆ ತಲುಪಿಸುವ ಪ್ರಯತ್ನ ಸ್ತುತ್ಯ ! – ’ಆಚಾರ್ಯ ಸತ್ಯನಾರಾಯಣ ದಾಸ, ಶ್ರೀರಾಮ ಕುಂಜ ಕಥಾ ಮಂಡಪ, ಆಯೋಧ್ಯೆ

ಆಚಾರ್ಯ ಚಾಣಕ್ಯ ಇವರ ದೃಷ್ಟಿಕೋನದಿಂದ ನೋಡಿದರೆ ಯಾವುದೇ ರಾಷ್ಟ್ರದ ರಕ್ಷಣೆ ಮಾಡುವುದಾದರೆ ಆ ರಾಷ್ಟ್ರದ ಸಂಸ್ಕೃತಿಯ ರಕ್ಷಣೆ ಮಾಡಿದರೆ ರಾಷ್ಟ್ರ ಸುರಕ್ಷಿತವಾಗಿರುತ್ತದೆ, ಆದರೆ ಆ ರಾಷ್ಟ್ರದ ಸಂಸ್ಕೃತಿಯ ನಾಶವಾದರೆ ಆ ರಾಷ್ಟ್ರ ಮೃತವಾದಂತೆ. ಭಾರತೀಯ ಸಂಸ್ಕೃತಿಯ ರಕ್ಷಣೆ ಮಾಡುವ ಈ ಸಂಸ್ಥೆಯ ಈ ಕಾರ್ಯ ಹೆಚ್ಚು ಹೆಚ್ಚು ಪ್ರಗತಿ ಮಾಡಲಿ ಎಂಬ ಪ್ರಾರ್ಥನೆ. ಸಂಸ್ಕೃತಿಯನ್ನು ಜೋಪಾನ ಮಾಡಿಕೊಂಡು ಕಾರ್ಯ ನಡೆಸುತ್ತಿರುವ ಪ್ರಸ್ತುತ ಕಾಲಕ್ಕೆ ಸಮಾಜದವರಿಗೆ ತಲುಪಿಸುವ ಪ್ರಯತ್ನ ಸ್ತುತ್ಯ’ ಎಂದು ಹೊಗಳಿದರು.


ಸಂಸ್ಕೃತಿಯ ಪ್ರಸಾರ ಮಾಡುವ ವ್ರತ ಸನಾತನ ಪ್ರಭಾತ ಕಾಪಾಡಿದೆ – ಶ್ರೀ ಮುಕುಲ ಕಾನಿಟಕರ, ಅಖಿಲ ಭಾರತೀಯ ಸಂಘಟನಾ ಸಚಿವ, ಭಾರತೀಯ ಶಿಕ್ಷಣ ಮಂಡಳಿ

ಟಿವಿ ಯಿಂದಾಗಿ ಸಂಸ್ಕೃತಿಯ ನಾಶವಾಗಬಹುದು ಎಂದು ಜನರಿಗೆ ಅನಿಸಿತು, ಆದರೆ ಅದರಿಂದ ರಾಮಾಯಣ ಮಹಾಭಾರತ ಮನೆ ಮನೆಗೆ ತಲುಪಿತು. ಇದೇ ಭಾರತೀಯ ಮತ್ತು ಸನಾತನ ಧರ್ಮದ ವೈಶಿಷ್ಟ್ಯವಾಗಿದೆ. ಮಾಧ್ಯಮ ಯಾವುದೇ ಇರಲಿ ಅದನ್ನು ಸೋಲಿಸಲು ಮಾಧ್ಯಮದ ಶಕ್ತಿಯಿಂದಲೇ ನಮ್ಮ ಸಂಸ್ಕೃತಿಯ ಪ್ರಸಾರ ಮಾಡುವುದು, ಈ ವ್ರತ ಸನಾತನ ಪ್ರಭಾತ ಕಾಪಾಡಿದೆ, ಮತ್ತು ಇ ಪೇಪರ್ ತಂದಿದೆ. ಅದಕ್ಕಾಗಿ ಮತ್ತೊಮ್ಮೆ ಶುಭಾಶಯಗಳು !


ಆಘಾತ, ಹಿಂದೂಗಳ ಸಮಸ್ಯೆ ಅನಾವರಣಗೊಳಿಸುವ ಸನಾತನ ಪ್ರಭಾತ ಇದು ಅನೇಕ ಹಿಂದುತ್ವನಿಷ್ಠರಿಗೆ ಆಧಾರಸ್ತಂಭ ಎನಿಸುತ್ತದೆ! – ಶ್ರೀ. ಅರವಿಂದ ಪಾನಸರೆ, ಉಪಸಂಪಾದಕರು ಸನಾತನ ಪ್ರಭಾತ

ಶ್ರೀ. ಅರವಿಂದ ಪಾನಸರೆ ಹೇಳಿದರು, ಧರ್ಮದ ಮೇಲೆ ನಡೆಯುವ ಆಘಾತ, ಹಿಂದೂಗಳ ಸಮಸ್ಯೆಗಳ ಅನಾವರಣಗೊಳಿಸುವ ಸನಾತನ ಪ್ರಭಾತ ಇದು ಅನೇಕ ಹಿಂದುತ್ವನಿಷ್ಠರಿಗೆ ಆಧಾರಸ್ತಂಭ ಅನಿಸುತ್ತದೆ. ಕೊರೋನಾದ ಕಾಲದಲ್ಲಿ ಅನೇಕ ಸಮಾಚಾರ ಪತ್ರಗಳು ನಿಂತು ಹೋಗಿದ್ದವು. ಆ ಸಮಯದಲ್ಲಿ ಸನಾತನ ಪ್ರಭಾತ ಪಿಡಿಎಫ್ ಮೂಲಕ ನಮ್ಮ ಹಿಂದೂ ಬಾಂಧವರವರೆಗೂ ತಲುಪಿತ್ತು. ಈಗ ಡಿಜಿಟಲ್ ಯುಗವಾಗಿದೆ. ಇದನ್ನು ಗಮನಿಸಿ ಸನಾತನ ಪ್ರಭಾತದ ಆನ್ಲೈನ್ ಆವೃತ್ತಿ ಉಪಲಬ್ಧವಿದೆ. ಡೇಲಿ ಹಂಟ್ ಈ ನ್ಯೂಸ್ ಅಪ್ ನಲ್ಲಿ ನಾವು ಸನಾತನ ಪ್ರಭಾತ ನೋಡಬಹುದು. ಅಕ್ಷಯ ತೃತೀಯದ ಶುಭಮುಹೂರ್ತದಲ್ಲಿ ಸನಾತನ ಪ್ರಭಾತ ಇ ಪೇಪರ್ ಸ್ವರೂಪದಲ್ಲಿ ಲಭ್ಯವಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡುತ್ತಾ ಹಿಂದೂಗಳಿಗೆ ನಿರಂತರ ಮಾರ್ಗದರ್ಶನದ ಆವಶ್ಯಕತೆ ಇದೆ, ಈ ಪರಿಸ್ಥಿತಿಯಲ್ಲಿ ಹೆಚ್ಚೆಚ್ಚು ಹಿಂದೂಗಳ ವರೆಗೆ ತಲುಪಲು ಈ ಮಾಧ್ಯಮ ಒಳ್ಳೆಯ ರೀತಿಯಲ್ಲಿ ಉಪಯೋಗ ಆಗಬಹುದು.

ಸನಾತನ ಪ್ರಭಾತ ದ ಇ ಪೇಪರ್ ಓದಲು ಕ್ಲಿಕ್ ಮಾಡಿ : epaper.sanatanprabhat.org