ರಾಜ ಠಾಕರೆಯವರ ವಿರುದ್ಧ ಪ್ರಥಮವರ್ಗ ನ್ಯಾಯಾಲಯದಿಂದ ಬಂಧನದ ವ್ಯಾರಂಟ !

ಮುಂಬಯಿ – ಮನಸೆಯ ಅಧ್ಯಕ್ಷರಾದ ರಾಜ ಠಾಕರೆಯವರ ವಿರುದ್ಧ ಸಾಂಗಲೀಯ ಶಿರಾಳಾ ಪ್ರಥಮವರ್ಗ ನ್ಯಾಯಾಲಯವು ಅಜಾಮೀನುಪಾತ್ರ ಬಂಧನ ವ್ಯಾರಂಟ ನೀಡಿದೆ. ಏಪ್ರಿಲ ೬ರಂದು ಈ ವ್ಯಾರಂಟ ಅನ್ನು ಜಾರಿಗೊಳಿಸಲಾಗಿದ್ದು ; ಆದರೆ ಅದರ ಮೇಲೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸರ್ವೋಚ್ಚ ನ್ಯಾಯಾಲಯವು ೫ ರಿಂದ ೧೦ ವರ್ಷಗಳಿಂದ ಬಾಕಿಯಿರುವ ಪ್ರಕರಣೆಯಲ್ಲಿ ತೀರ್ಮಾನ ನೀಡುವಂತೆ ಆದೇಶ ನೀಡಿದೆ. ಅದಕ್ಕೆ ಅನುಸಾರವಾಗಿ ಆ ತೀರ್ಮಾನವನ್ನು ನೀಡಲು ಈ ‘ವ್ಯಾರಂಟ’ ತೆಗೆಯಲಾಗಿದೆ ಎಂದು ನ್ಯಾಯಾಲಯವು ಹೇಳಿದೆ. ೨೦೦೮ರಲ್ಲಿ ರೈಲ್ವೇ ಭರ್ತಿಯಲ್ಲಿ ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಲು ಬೇಡಿಕೆ ನೀಡುತ್ತಾ ಪ್ರತಿಭಟನೆ ನಡೆಸಲಾಯಿತು. ಆಗ ಕಲ್ಯಾಣ ಜಿಲ್ಲೆಯ ಸತ್ರ ನ್ಯಾಯಾಲಯದ ಆದೇಶದ ಮೇರಿಗೆ ರಾಜ ಠಾಕರೆಯವರನ್ನು ಬಂಧಿಸಲಾಯಿತು. ರಾಜ ಠಾಕರೆಯವರ ಬಂಧನವನ್ನು ನಿಶೇಧಿಸಿ ಶಿರಾಳಾ ತಾಲೂಕಿನಲ್ಲಿನ ಶೆಡಗೆವಾಡೀಯಲ್ಲಿ ಮನಸೆಯು ಬಂದ್ ಕರೆದಿತ್ತು. ಪೊಲೀಸರು ರಾಜ ಠಾಕರೆ ಸೇರಿದಂತೆ ಮನಸೆಯ ೧೦ ಕಾರ್ಯಕರ್ತರ ವಿರುದ್ಧ ಆರೋಪಪತ್ರವನ್ನು ನೋಂದಿಸಿದ್ದರು.