ಮಹಾರಾಷ್ಟ್ರದ ಅನೇಕ ಸ್ಥಳಗಳಲ್ಲಿ ಮಸೀದಿ ಎದುರು ಮಹಾರಾಷ್ಟ್ರ ನವನಿರ್ಮಾಣ ಸೇನೆ ವತಿಯಿಂದ ಹನುಮಾನ ಚಾಲಿಸ ಪಠಣ !

  • ಕೆಲವು ಜಿಲ್ಲೆಗಳಲ್ಲಿ ಭೋಂಗಾ ಇಲ್ಲದೆ ಮಸೀದಿಯಲ್ಲಿ ಅಜಾನ

  • ರಾಜ್ಯಾದ್ಯಂತ ಮನಸೇ ಕಾರ್ಯಕರ್ತರ ಬಂಧನ

ಸಂಭಾಜಿನಗರ, ಮೆ ೪ (ವಾರ್ತೆ) : ಮೆ ೩ ರ ನಂತರ ಮಹಾರಾಷ್ಟ್ರದ ಮಸೀದಿಗಳ ಮೇಲಿನ ಭೋಂಗಾ ತೆರವುಗೊಳಿಸದೇ ಇದ್ದರೆ ಮೆ ೪ ರಿಂದ ಮಸೀದಿ ಎದುರು ಧ್ವನಿವರ್ಧಕಗಳಲ್ಲಿ ದುಪ್ಪಟ್ಟು ಧ್ವನಿಯಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು ಎಂಬ ಎಚ್ಚರಿಕೆ ಮನಸೆ ಅಧ್ಯಕ್ಷ ರಾಜ ಠಾಕರೆ ಇವರು ಇಂದು ಇಲ್ಲಿಯ ಸಭೆಯಲ್ಲಿ ನೀಡಿದ್ದರು. ಅದೇ ರೀತಿ ಮಸೀದಿ ಮೇಲಿನ ಭೋಂಗಾ ಬಗ್ಗೆ ರಾಜ್ಯದ್ಯಂತ ಮನಸೇ ದ ಕಾರ್ಯಕರ್ತರು ಆಕ್ರಮಕರಾಗಿದ್ದರು. ಇದರಿಂದ ಪೊಲೀಸರು ಅಲ್ಲಲ್ಲಿ ಮನಸೇ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಬಿಟ್ಟರೆ ಬಹುತಾಂಶ ಮಸೀದಿಗಳಲ್ಲಿ ಧ್ವನಿಯ ಮಟ್ಟದ ಪಾಲನೆ ಮಾಡುವುದು ಕಂಡುಬಂದಿದೆ. ಮನಸೇ ವತಿಯಿಂದ ರಾಜ್ಯದಲ್ಲಿ ಅನೇಕ ಸ್ಥಳಗಳಲ್ಲಿ ಮಸೀದಿಗಳ ಎದುರು ಹನುಮಾನ ಚಾಲಿಸಾ ಪಠಿಸಲಾಯಿತು, ಹಾಗೂ ಅನೇಕ ಸ್ಥಳಗಳಲ್ಲಿ ಮಸೀದಿಗಳಲ್ಲಿ ಭೋಂಗಾ ಇಲ್ಲದೆ ಅಜಾನ್ ನೀಡಲಾಯಿತು.

ಕಲ್ಯಾಣ, ಪನವೆಲ, ಮತ್ತು ಮುಂಬ್ರಾ ಈ ಭಾಗದಲ್ಲಿ ಬೆಳ್ಳಗ್ಗಿನ ಜಾವ ಆಜಾನ್ ಭೋಂಗಾ ಇಲ್ಲದೆ ನೀಡಲಾಯಿತು. ಉದ್ವಿಗ್ನತೆ ನಿರ್ಮಾಣವಾಗುವ ಸಾಧ್ಯತೆಯಿಂದ ಈ ಭಾಗದ ಮಸೀದಿಗಳಲಿ ಧ್ವನಿವರ್ಧಕಗಳಲ್ಲಿ ಅಜಾನ್ ಕರೆ ನೀಡಲಾಗಿಲ್ಲ. ಸಂಭಾಜಿನಗರ, ನಾಗಪುರ ಮತ್ತು ಕೊಲ್ಹಾಪುರ ಇಲ್ಲಿಯ ಬಹಳಷ್ಟು ಮಸೀದಿಗಳ ಧ್ವನಿಯ ಮಟ್ಟ ಕಡಿಮೆಗೊಳಿಸಲಾಗಿತ್ತು . ರಾಜ್ಯಾದ್ಯಂತ ಅನೇಕ ಮಸೀದಿಗಳಿಗೆ ರಕ್ಷಣೆ ನೀಡಿದ್ದರು.

೧. ಮುಂಬಯಿ – ಮುಂಬಾದೇವಿಯಲ್ಲಿ ಮೆ ೩ ರಂದು ಅಕ್ಷಯ ತೃತಿಯಾದ ಪ್ರಯುಕ್ತ ಹನುಮಾನ್ ಚಾಲೀಸಾ ದ ಪಠಣ ಮಾಡಿರುವುದರಿಂದ ಪೊಲೀಸರು ಕೆಲವು ಮನಸೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಕಾಂದಿವಲಿ, ನವಿ ಮುಂಬೈ, ಮತ್ತು ನೆರುಳ ಇಲ್ಲ ಅಜಾನ್ ನಡೆಯುವಾಗ ಹನುಮಾನ ಚಾಲೀಸ ಪಠಣ ಮಾಡಲಾಯಿತು.

೨. ಪುಣೆ – ಪುಣೆಯಲ್ಲಿ ಖಾಲಕರ ಮಂದಿರದಲ್ಲಿ ಮನಸೇ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡಿದರು . ಹನುಮಾನ್ ಚಾಲೀಸಾ ಪಠಣ ನಡೆದ ನಂತರ ಮನಸೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

೩. ಧುಳೆ – ಇಲ್ಲಿಯ ಮಸೀದಿಯ ಎದುರಿಗೆ ಧ್ವನಿವರ್ಧಕದ ಮೇಲೆ ಹನುಮಾನ್ ಚಾಲೀಸಾ ಹಾಕುವುದರ ಬಗ್ಗೆ ಮನಸೇ ಕಾರ್ಯಕರ್ತರು ಆಕ್ರಮಕರಾಗಿದ್ದರು. ಆದ್ದರಿಂದ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಹೋಗಿ ಮನಸೇಯ ೧೦ ರಿಂದ ೧೨ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

೪. ಠಾಣೆ – ಇಲ್ಲಿಯ ಚಾರಕೋಪ ಪರಿಸರದಲ್ಲಿ ಬೆಳ್ಳಗೆ ೫ ಗಂಟೆಗೆ ಮನಸೇ ಕಾರ್ಯಕರ್ತರು ಅಜಾನ್ ಸಮಯದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ ಚಾಲಿಸಾ ಹಾಕಿದರು. ಮುಂಬ್ರಾ ಪರಿಸರದಲ್ಲಿ ದಾರುಫಾಲಾ, ಅದರ ಜೊತೆಗೆ ಭಿವಂಡಿ, ಇಲ್ಲಿಯ ಪಡಪಾ, ವಾಂದ್ರೆಯಲ್ಲಿ ಜಾಮಾ ಮಸಿದಿಯಲ್ಲಿ ಭೋಂಗಾ ಇಲ್ಲದೆ ಆಜಾನ್ ನೀಡಲಾಯಿತು.

೫. ನಾಶಿಕ – ಅಜಾನ್ ಸಮಯದಲ್ಲಿ ಇಲ್ಲಿಯ ಮಾರುತಿ ರಸ್ತೆಯಲ್ಲಿರುವ ಹನುಮಾನ ಮಂದಿರದ ಧ್ವನಿವರ್ಧಕದಲ್ಲಿ ಹನುಮಾನ ಚಾಲಿಸಾ ಹಾಕಿರುವ ಪ್ರಕರಣದಲ್ಲಿ ಪೊಲೀಸರು ಮನಸೇಯ ೭ ಮಹಿಳಾ ಕಾರ್ಯಕರ್ತರ ಜೊತೆಗೆ ೧೪ ಜನರಿಗೆ ನೋಟಿಸ್ ಜಾರಿ ಮಾಡಿದ್ದು, ೨೯ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಸಂಭಾಜಿನಗರದಲ್ಲಿ ಜಮಾ ಮಸೀದಿ ಸಹಿತ ಬೇರೆ ಮಸೀದಿಗಳು ಧ್ವನಿಯ ಮಟ್ಟವನ್ನು ಇಳಿಸಿದ್ದರು.

ನಗರದಲ್ಲಿ ಮನಸೇ ಕಾರ್ಯಕರ್ತರು ಶಾಂತವಾಗಿರುವುದರಿಂದ ಯಾವುದೇ ಉದ್ವಿಗ್ನತೆ ನಿರ್ಮಾಣವಾಗಲಿಲ್ಲ. ವಿಶೇಷವಾಗಿ ಜಾಮಾ ಮಸೀದಿಯ ಮೌಲ್ವಿ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಹೇಳಿದರು ನಮ್ಮಿಂದ ಯಾವಾಗಲೂ ನಮಾಜ್ ಸಮಯದಲ್ಲಿ ಧ್ವನಿಯ ಮಟ್ಟ ಹದ್ದಿನಲ್ಲಿರುತ್ತದೆ. (ಜನರಿಗೆ ಅಜಾನ್ ನಿಂದ ತೊಂದರೆ ಆಗದೇ ಇದ್ದಿದ್ದರೆ ಅವರು ದೂರು ನೀಡುತ್ತಿದ್ದರೆ ? – ಸಂಪಾದಕರು) ಇನ್ನು ಮುಂದೆಯೂ ನಿಯಮಗಳ ಪಾಲನೆ ಮಾಡಲಾಗುವುದು. ಪೊಲೀಸರು ಸಂಭಾಜಿನಗರದಲ್ಲಿ ಮನಸೇ ಕಾರ್ಯಕರ್ತರ ಮನೆಗೆ ಹೋಗಿ ಅವರಿಗೆ ನೋಟಿಸ್ ಜಾರಿ ಮಾಡಿದರು. ಅದರ ನಂತರ ಕಾರ್ಯಕರ್ತರು ಭೂಗತ ಆಗಿರುವುದರ ಬಗ್ಗೆ ಹೇಳಲಾಗುತ್ತಿದೆ.

ರಾಜ್ ಠಾಕ್ರೆ ಇವರ ಅಭಿಪ್ರಾಯಕ್ಕೆ ಧಾರ್ಮಿಕ ಬಣ್ಣ ನೀಡುವ ಸರಕಾರದ ಪ್ರಯತ್ನ ! – ಸಂದೀಪ ದೇಶಪಾಂಡೆ. ಮನಸೇ ನಾಯಕ

ಭೋಂಗಾ ವಿಷಯದ ಬಗ್ಗೆ ರಾಜ ಠಾಕರೆಯವರ ಅಭಿಪ್ರಾಯಕ್ಕೆ ಮಹಾ ವಿಕಾಸ ಸರಕಾರದಿಂದ ಧಾರ್ಮಿಕ ಬಣ್ಣ ನೀಡಲಾಗುತ್ತಿದೆ. ಆದರೆ ಈ ವಿಷಯ ಸಾಮಾಜಿಕವಾಗಿದ್ದು ಎಲ್ಲಾ ಸ್ತರದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಮುಸ್ಲಿಂ ಬಾಂಧವರು ಇದನ್ನು ಗಮನಿಸಿರುವುದರಿಂದ ಅವರಿಗೆ ಆಭಾರಿ ಆಗಿದ್ದೇವೆ. ಮುಸ್ಲಿಂ ಬಾಂಧವರ ವರ್ತನೆ ರಾಜ್ಯ ಸರಕಾರದ ಅಪಪ್ರಚಾರ ಬಯಲಿಗೆಳೆದಿದೆ, ಎಂಬ ಪ್ರತಿಕ್ರಿಯೆ ಮನಸೇ ನಾಯಕ ಸಂದೀಪ ದೇಶಪಾಂಡೆ ಇವರು ನೀಡಿದರು.

ನಾಗಪುರ, ಕೊಲ್ಲಾಪುರ, ಮತ್ತು ಬುಲಢಾನಾ ಇಲ್ಲಯೂ ಭೋಂಗಾ ಇಲ್ಲದೆ ನಮಾಜ್

ನಾಗಪುರ, ಕೊಲ್ಲಾಪುರ ಮತ್ತು ಬುಲಢಾನಾ ಇಲ್ಲಿ ಅನೇಕ ಮಸೀದಿಗಳಲ್ಲಿ ಭೋಂಗಾ ಇಲ್ಲದೆ ನಮಾಜ್ ಪಠಣ ಮಾಡಲಾಯಿತು.

ಕಲ್ಯಾಣದಲ್ಲಿ ಆಜಾನಗಾಗಿ ಧ್ವನಿವರ್ಧಕ ಹಾಕಲಾಗಲಿಲ್ಲ.

ಕಲ್ಯಾಣ ಪರಿಸರದಲ್ಲಿ ಮಸೀದಿಯಲ್ಲಿ ಬೆಳಗಿನ ಅಜಾನ್ ಭೋಂಗಾ ಇಲ್ಲದೆ ನಡೆಯಿತು. ಕಲ್ಯಾಣದ ಮಸೀದಿಯ ಎದರು ಪೊಲೀಸರ ತುಕಡಿಗಳನ್ನು ನೇಮಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಯಾಣ ಮತ್ತು ಡೊಂಬಿವಲಿಯಲ್ಲಿ ಮನಸೇಯ ೫೦ ಕ್ಕು ಹೆಚ್ಚಿನ ಕಾರ್ಯಕರ್ತರಿಗೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಮೆ ೩ರ ರಾತ್ರಿ ಮನಸೇಯ ೨೦ – ೨೫ ಕಾರ್ಯಕರ್ತರು ಮತ್ತು ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. (ಸರ್ವೋಚ್ಚ ನ್ಯಾಯಾಲಯದ ಆದೇಶದ ಪಾಲನೆಗಾಗಿ ಒತ್ತಾಯಿಸುವವರ ಮೇಲೆ ಕ್ರಮಕೈಗೊಳ್ಳುವ ಪೊಲೀಸರ ಆಧಾರ ಸಮಾಜಕ್ಕೆ ಅನಿಸುವುದೇ ? – ಸಂಪಾದಕರು)

ಸಂಪಾದಕೀಯ ನಿಲುವು

ಮನಸೇ ಕಾರ್ಯಕರ್ತರ ಮೇಲೆ ಕ್ರಮಕೈಗೊಳ್ಳುವ ಪೊಲೀಸರ ತತ್ಪರತೆ ಮಸೀದಿಯ ಮೇಲಿನ ಅನಧಿಕೃತ ಭೋಂಗಾ ತೆರವುಗೊಳಿಸುವಾಗ ಎಲ್ಲಿ ಹೋಗಿರುತ್ತದೆ.