ಶ್ರೀನಗರ – ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮೊಕ್ರೆಟಿಕ ಪಾರ್ಟಿಯ (ಪಿ.ಡಿ.ಪಿ) ಮುಖಂಡರಾದ ಮೆಹಬೂಬಾ ಮುಫ್ತಿಯವರು, `ಭಾಜಪ ದೇಶದ ಜಾತ್ಯಾತೀತತೆಯ ಮೇಲೆ `ಬುಲ್ಡೋಜರ’ ನಡೆಸಿ ದೇಶದಲ್ಲಿ ಅನೇಕ `ಸಣ್ಣ ಪಾಕಿಸ್ತಾನ’ ನಿರ್ಮಿಸುತ್ತಿದೆ, ಎಂದು ಕ್ಯಾತೆ ತೆಗೆದಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಧ್ಯಪ್ರದೇಶದ ಖರಗಾಂವ ಮತ್ತು ದೆಹಲಿಯ ಜಹಾಂಗೀರಪುರಿಯ ಅನಧಿಕೃತ ಕಟ್ಟಡ ಮತ್ತು ಅತಿಕ್ರಮಣದ ಮೇಲೆ ಜರುಗಿಸಿರುವ ಕ್ರಮಗಳನ್ನು ಉಲ್ಲೇಖಿಸಿದ್ದಾರೆ. `ಅಲ್ಪಸಂಖ್ಯಾತರಿಗೆ ಪಾಕಿಸ್ತಾನಕ್ಕೆ ಹೋಗುವ ಸಲಹೆಯನ್ನು ನೀಡಲಾಗುತ್ತಿದೆ. ಸರಕಾರವು ದೇಶದಲ್ಲಿ ಹೊಸತು ಏನನ್ನೂ ಮಾಡಿಲ್ಲ, ಬದಲಾಗಿ ಸಮಾಜದಲ್ಲಿ ಮತಭೇದವನ್ನು ನಿರ್ಮಾಣ ಮಾಡಿದೆ ಮತ್ತು ಜಾತ್ಯಾತೀತ ಸಂಸ್ಕೃತಿಯನ್ನು ನಾಶ ಮಾಡುತ್ತಿದೆಯೆಂದು’ ಹೇಳಿದ್ದಾರೆ.
1.ಮುಫ್ತಿಯವರು ತಮ್ಮ ಮಾತನ್ನು ಮುಂದುವರಿಸುತ್ತಾ, ಕೇಂದ್ರ ಸರಕಾರವು ಪ್ರತಿಯೊಂದು ಹಂತದಲ್ಲಿಯೂ ಸೋತಿದ್ದು, ನಿರುದ್ಯೋಗ, ಮುಳುಗುತ್ತಿರುವ ಅರ್ಥವ್ಯವಸ್ಥೆ ಮುಂತಾದ ಸಮಸ್ಯೆಗಳ ಮೇಲಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಅವರು ಹಿಂದೂ-ಮುಸಲ್ಮಾನ ವಿಷಯವನ್ನು ಉಪಯೋಗಿಸುತ್ತಿದ್ದಾರೆ.
2.ಮೆಹಬೂಬಾ ಮುಫ್ತಿಯವರು ಈ ಸಂದರ್ಭದಲ್ಲಿ ಮುಸಲ್ಮಾನ ಸಮಾಜವನ್ನು ಹೊಗಳಿದರು. `ಸರಕಾರ ಮತ್ತು ಆಡಳಿತ ಪಕ್ಷದಿಂದ ನಿರಂತರ ಒತ್ತಡವಿದ್ದರೂ ಸಮಾಜ ಅದೆಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದೆ’. ಎಂದು ಮೆಹಬೂಬಾ ಹೇಳಿದರು. (ಭಾರತದಲ್ಲಿ ಮತಾಂಧರ ಉದ್ಧಟತನ ಎಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆಯೆಂದರೆ, ಈಗ ಸರಕಾರ ಮತ್ತು ಪೊಲಿಸರಿಗೂ ಬಗ್ಗುತ್ತಿಲ್ಲ. ಇಂತಹ ಹೇಳಿಕೆಗಳನ್ನು ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆ?- ಸಂಪಾದಕರು)
ಸಂಪಾದಕೀಯ ನಿಲುವುಭಾರತದಲ್ಲಿ ಯಾರು ಸಣ್ಣ ಪಾಕಿಸ್ತಾನಗಳನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಅದರಿಂದ ಮುಫ್ತಿಯವರ ಹೇಳಿಕೆಯಿಂದ ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಎಂಬ ಗಾದೆ ನೆನಪಾಗುತ್ತದೆ! |