ಗೌಂಡವಾಡ (ಬೆಳಗಾವಿ) ಎಂಬಲ್ಲಿ ಯುವಕನ ಹತ್ಯೆಯ ನಂತರ ಹಿಂಸಾಚಾರ !

ಬೆಳಗಾವಿ – ಬೆಳಗಾವಿ ಜಿಲ್ಲೆಯ ಕಾಕತಿ ಹತ್ತಿರದ ಗೌಂಡವಾಡ ಊರಿನಲ್ಲಿ ಎರಡು ದಿನಗಳ ಹಿಂದೆ ಹಿಂದೂ ಕಾರ್ಯಕರ್ತ ಸತೀಶ್ ಪಾಟೀಲ್ ಇವರ ದೇವಸ್ಥಾನದ ಭೂಮಿಯ ವಾದದಲ್ಲಿ ಹತ್ಯೆ ನಡೆಸಲಾಗಿದೆ. ಸತೀಶ್ ಪಾಟೀಲ್ ಇವರ ಹತ್ಯೆಯ ನಂತರ ಸಂತಪ್ತ ಜನಸಮೂಹದಿಂದ ಕೆಲವು ವಾಹನಗಳು ಹಾಗೂ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಈ ಪ್ರಕರಣದಲ್ಲಿ ಹತ್ಯೆಯ ಆರೋಪದ ಮೇಲೆ ಪೊಲೀಸರು ೪ ಜನರನ್ನು ಹಾಗೂ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರು ೧೫ ಜನರನ್ನು ಬಂಧಿಸಿದ್ದಾರೆ. ಪರಿಸರದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ತರುಣ ಭಾರತ ದೈನಿಕದಲ್ಲಿ ಬಂದಿರುವ ವಾರ್ತೆಯಲ್ಲಿ ಪೊಲೀಸರ ದೂರ್ಲಕ್ಷದಿಂದ ಯುವಕನ ಹತ್ಯೆ ನಡೆದಿದೆ, ಹಾಗೂ ಯುವಕನ ಕೊಲೆಯ ನಂತರ ಪೊಲೀಸರು ಅವನ ತಾಯಿ ತಂದೆಯನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.