ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಈ ರಾಜ್ಯಗಳ ವಿಭಜನೆ ಆಗುವುದು !

ಕರ್ನಾಟಕದ ಭಾಜಪ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಇವರ ದಾವೆ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ

ಬೆಳಗಾಂವ – ಪ್ರಧಾನಿ ಮೋದಿ ೨೦೨೪ ರ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶ ರಾಜ್ಯದ ೫, ಮಹಾರಾಷ್ಟ್ರದ ೨ ಮತ್ತು ಕರ್ನಾಟಕ ರಾಜ್ಯದ ೨ ಭಾಗ ಮಾಡಿ ಹೊಸ ರಾಜ್ಯ ರಚನೆ ಮಾಡುವ ಯೋಜನೆ ಇದೆ, ಎಂದು ಕರ್ನಾಟಕದ ಭಾಜಪಾ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ‘ದೇಶದ ಆಡಳಿತ ಒಳ್ಳೆಯ ರೀತಿ ನಡೆಸಲು ೫೦ ಹೊಸ ರಾಜ್ಯ ನಿರ್ಮಾಣ ಮಾಡುವ ಯೋಜನೆ ಪ್ರಧಾನಿ ಮೋದಿ ಅವರದಾಗಿದೆ’, ಎಂದು ಕಟ್ಟಿಯವರು ಹೇಳಿದರು. ‘ಬೆಳಗಾಂವ ಬಾರ್ ಅಸೋಸಿಯೇಶನ್’ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

(ಸೌಜನ್ಯ : Asianet Suvarna News)

ಉಮೇಶ ಕತ್ತಿ ಮಾತು ಮುಂದುವರೆಸುತ್ತಾ, ಉತ್ತರದ ರಾಜ್ಯಗಳ ರೀತಿ ದಕ್ಷಿಣದ ರಾಜ್ಯಗಳಲ್ಲಿ ತಮ್ಮ ಪ್ರಭಾವ ಬೀರುಲು ಅಲ್ಲಿಯ ರಾಜ್ಯಗಳು ವಿಭಜನೆ ಮಾಡಬೇಕೆಂಬ ಭಾಜಪ ನಾಯಕರು ಮೊದಲಿನಿಂದಲೇ ಬೇಡಿಕೆ ಇತ್ತು. ಕರ್ನಾಟಕದ ಭೂಪ್ರದೇಶ ವಿಶಾಲವಾಗಿದ್ದು ಕರ್ನಾಟಕದ ದಕ್ಷಿಣ ಜಿಲ್ಲೆಗಳ ಪ್ರಭಾವ ಕರ್ನಾಟಕದ ರಾಜಕಿಯ ಮೇಲೆ ಹೆಚ್ಚು ಇದೆ. ಇದರ ಅಭ್ಯಾಸ ಮಾಡಿ ಭಾಜಪ ಕರ್ನಾಟಕ ರಾಜ್ಯದ ವಿಭಜನೆಯ ಯೋಜನೆ ಮಾಡಿದೆ. ಕರ್ನಾಟಕದ ‘ಉತ್ತರ ಕನ್ನಡ’ ಇದು ಸ್ವತಂತ್ರ ರಾಜ್ಯ ಮಾಡಲಾಗುವುದು ಎಂದು ಹೇಳಿದರು.