ಪುತ್ತೂರು – ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ಸಿನ ಮಾಹಿತಿ ತಂತ್ರಜ್ಞಾನ ವಿಭಾಗದ ಸಚಿವೆ ವಿ. ಶೈಲಜಾ ಇವರ ಮನೆಯ ಮೇಲೆ ಅಪರಿಚಿತರಿಂದ ಕಲ್ಲುತೂರಾಟ ನಡೆಸಲಾಗಿದೆ. ಇದರಲ್ಲಿ ಮನೆ ಕಿಟಕಿಯ ಗಾಜುಗಳು ಹೊಡೆದು ಹೋಗಿದ್ದು, ಗೋಡೆಗಳ ಮೇಲೆ ಮಸಿ ಎರಚಲಾಗಿದೆ.
#Congress leader’s house attacked after she allegedly insulted Hindu gods on social media! #socialmedia https://t.co/gTcHxzx87x
— Zee News English (@ZeeNewsEnglish) June 19, 2022
ಈ ಮೊದಲು ಶೈಲಜಾ ಇವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಪೊಲೀಸರಲ್ಲಿ ದೂರ ದಾಖಲಿಸಲಾಗಿತ್ತು. ಶೈಲಜಾ ಇವರ ಜೊತೆ ಇನ್ನೂ ಮೂವರು ಜೂನ್ ೧೬ ರಂದು ನಡೆದ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀರಾಮ, ಹನುಮಂತ ಮತ್ತು ಸೀತಾಮಾತೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅದರಲ್ಲಿ ಆಕ್ಷೇಪಾರ್ಹ ಹೇಳಿಕೆ ಏನಿತ್ತು ಎಂದು ನಿಖರವಾಗಿ ತಿಳಿದುಬಂದಿಲ್ಲ.
ಸಂಪಾದಕರ ಭೂಮಿಕೆಹಿಂದೂ ದೇವತೆಗಳ ಅವಮಾನ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಯಾರಾದರೂ ರೊಚ್ಚಿಗೆದ್ದು ಈ ರೀತಿ ಮಾಡುತ್ತಿದ್ದರೆ, ಇದರ ವಿಚಾರ ರಾಜ್ಯ ಮತ್ತು ಕೇಂದ್ರ ಸರಕಾರ ಮಾಡುವುದು ಆವಶ್ಯಕವಾಗಿದೆ. ಪಾಕಿಸ್ತಾನದಲ್ಲಿ ಈಶ ನಿಂದನೆ (ಶ್ರದ್ಧಾ ಸ್ಥಾನದ ನಿಂದನೆ) ಪ್ರಕರಣಕ್ಕೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಇದೆ, ಆದರೆ ಭಾರತದಲ್ಲಿ ಯಾವುದೇ ಕಠಿಣ ಕಾನೂನು ಇಲ್ಲ, ಇದನ್ನು ಸರಕಾರ ಗಮನಿಸಬೇಕು. |