ನವ ದೆಹಲಿ – ಭಾರತ ಸಹಿತ ಜಗತ್ತಿನಾದ್ಯಂತ ಜೂನ್ ೨೧ ರಂದು ಎಂಟನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನ ಆಚರಿಸುವುದಕ್ಕಾಗಿ ಪ್ರಧಾನಿ ಮೋದಿಯವರು ಮೈಸೂರು ಪ್ಯಾಲೇಸ್ ಮೈದಾನಕ್ಕೆ ಹೋಗಿದ್ದರು. ಅವರು ಸುಮಾರು ೧೫ ಸಾವಿರ ಜನರ ಜೊತೆ ಯೋಗ ಮಾಡಿದರು. ಈ ಸಮಯದಲ್ಲಿ ಪ್ರಧಾನಿ ಮೋದಿಯವರು ಮಾತನಾಡುತ್ತಾ, ಯೋಗ ದಿನ ಈಗ ಜಾಗತಿಕ ಹಬ್ಬವಾಗಿದೆ. ಯೋಗವಿದೆ ಜೀವನದ ಭಾಗವಲ್ಲದೆ ಜೀವನದ ಒಂದು ಮಾರ್ಗವಾಗಿದೆ’, ಎಂದರು.
#InternationalDayofYoga | PM Modi leads mass Yoga event at the Mysore Palace Ground in Karnataka pic.twitter.com/gyGTu8BPuB
— ANI (@ANI) June 21, 2022
ಪ್ರತಿವರ್ಷ ಜೂನ್ ೨೧ ರಂದು ಯೋಗ ದಿನದಂದು ‘ಥೀಮ’ (ವಿಷಯ) ನಿಶ್ಚಯಿಸಲಾಗುತ್ತದೆ. ಈ ವರ್ಷ ‘ಯೋಗಾ ಫಾರ್ ಹ್ಯುಮ್ಯಾನಿಟಿ’ ಅಂದರೆ ‘ಮಾನವತೆಗಾಗಿ ಯೋಗ’ ಎಂಬ ವಿಷಯ ಆರಿಸಲಾಗಿತ್ತು. ಆಯುಷ್ ಸಚಿವಾಲಯದ ಹೇಳಿಕೆಯ ಪ್ರಕಾರ, ಈ ವಿಷಯ ಆರಿಸುವ ಹಿಂದಿನ ಉದ್ದೇಶವೆಂದರೆ ‘ಕೊರೋನಾ ಕಾಲದಲ್ಲಿ ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ಎದುರಿಸಿರುವ ಜನರಿಗೆ ಸಾಂತ್ವನ ನೀಡುವುದು’ ಆಗಿತ್ತು. ಕಳೆದ ವರ್ಷ ಅಂತರಾಷ್ಟ್ರೀಯ ಯೋಗ ದಿನದ ವಿಷಯವು ‘ಯೋಗಾ ಫಾರ್ ವೆಲನೆಸ’ ಎಂದಿತ್ತು.
Greetings on #YogaDay! https://t.co/dNTZyKdcXv
— Narendra Modi (@narendramodi) June 21, 2022
ಪ್ರಧಾನಿ ಮೋದಿ ಇವರು ಮಂಡಿಸಿದ ಅಂಶಗಳು !
೧. ಇಂದು ಯೋಗವು ಮನುಕುಲವು ಆರೋಗ್ಯವಂತ ಜೀವನದ ಆತ್ಮವಿಶ್ವಾಸ ನೀಡುತ್ತಿದೆ.
೨. ಕೆಲವು ವರ್ಷಗಳ ಮೊದಲು ಆಧ್ಯಾತ್ಮಿಕ ಕೇಂದ್ರದಲ್ಲಿ ಕಾಣುವ ಯೋಗಗಳ ಚಿತ್ರ ಇಂದು ಜಗತ್ತಿನ ಮೂಲೆಮೂಲೆಗೂ ಕಾಣುತ್ತಿವೆ.
೩. ಯೋಗದಿಂದ ನಮಗೆ ಶಾಂತಿ ದೊರೆಯುತ್ತದೆ, ಅದನ್ನು ಅಳವಡಿಸಿಕೊಂಡಿರುವ ದೇಶಗಳು ಮತ್ತು ಜಗತ್ತು ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ, ಇದರಿಂದ ನಮ್ಮೆಲ್ಲರ ಸಮಸ್ಯೆಗಳು ಪರಿಹಾರವಾಗಬಹುದು.
೪. ನಾವು ಎಷ್ಟೇ ಒತ್ತಡದಲ್ಲಿದ್ದರೂ ಕೆಲವು ನಿಮಿಷ ಯೋಗದಿಂದ ನಮ್ಮಲ್ಲಿ ಸಕಾರಾತ್ಮಕತೆ ಮತ್ತು ಉತ್ಪಾದಕತೆ ಹೆಚ್ಚುತ್ತದೆ. ನಮ್ಮೆಲ್ಲರಿಗೂ ಯೋಗ ಸಾಧಿಸುವುದುದಿದೆ.
ಸೈನಿಕರು ಮಂಜುಗಡ್ಡೆಯ ಮೇಲೆ ಸೂರ್ಯ ನಮಸ್ಕಾರ ಮಾಡಿದರು !
ಲಡಾಖ್ ದಿಂದ ಛತ್ತೀಸಗಡದ ವರೆಗೆ ಮತ್ತು ಅಸ್ಸಾಮ್.ನಿಂದ ಗೌಹಾಟಿ ವರೆಗೆ ಹಾಗೂ ಸಿಕ್ಕಿಮ ವರೆಗೆ ಐಟಿಬಿಪಿ (ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್) ಸೈನಿಕರು ಸಹ ಯೋಗಾಸನ ಮಾಡಿದರು, ಅವರು ಹಿಮಾಚಲ ಪ್ರದೇಶದ ೧೬ ಸಾವಿರ ಹಾಗೂ ಲಡಾಕ್.ನಲ್ಲಿ ೧೭ ಸಾವಿರ ಅಡಿ ಎತ್ತರದಲ್ಲಿ ಸೂರ್ಯ ನಮಸ್ಕಾರ ಮಾಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಈ ರೀತಿ ಆಚರಿಸಲಾಯಿತು ಯೋಗ ದಿನ !ಯೋಗದಿನದ ಮುನ್ನಾದಿನ ಸಂಜೆ ಅಮೇರಿಕಾದ ನಾಯಗಾರ ಜಲಪಾತದ ಹತ್ತಿರ ಯೋಗದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮತ್ತು ಅಮೇರಿಕಾದ ನಾಗರಿಕರು ಸಹ ಭಾಗಿಯಾಗಿದ್ದರು. ಪಾಕಿಸ್ತಾನದ ಲಾಹೋರಿನಲ್ಲಿ ಮುಸಲ್ಮಾನ ಮಹಿಳೆಯರು ಬುರ್ಖಾ ಧರಿಸಿ ಯೋಗಾಸನ ಮಾಡಿದರು. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಯೋಗದಿನದ ಮುನ್ನಾದಿನ ಸಂಜೆ ಧರಹರ ಟವರ್ ದೀಪದ ಅಲಂಕಾರದಿಂದ ಬೆಳಗಿತು. |
ಜೂನ್ ೨೧ ಇದು ಅಂತರಾಷ್ಟ್ರೀಯ ಯೋಗ ದಿನ ಏಕೆ?
ಜೂನ್ ೨೧ ಈ ದಿನ ಯೋಗ ದಿನ ಆಚರಿಸುವ ಮುಖ್ಯ ಕಾರಣ ಎಂದರೆ ಈ ದಿನ ಉತ್ತರ ಗೋಲಾರ್ಧದಲ್ಲಿ ಎಲ್ಲಕ್ಕಿಂತ ದೊಡ್ಡ ಹಗಲು ಇರುತ್ತದೆ. ಅದನ್ನು ಬೇಸಿಗೆ ಸಂಕ್ರಾಂತಿಯಂದು ಕರೆಯುತ್ತಾರೆ. ಭಾರತೀಯ ಪರಂಪರೆಯ ಪ್ರಕಾರ ಬೇಸಿಗೆಯ ಸಂಕ್ರಾಂತಿಯ ನಂತರ ಸೂರ್ಯ ದಕ್ಷಿಣಕ್ಕೆ ತಿರುಗುತ್ತಾನೆ ಹಾಗೂ ಈ ದಿನದಂದು ಯೋಗ ಮಾಡುವುದರಿಂದ ಜನರ ಆಯುಷ ಹೆಚ್ಚಾಗುತ್ತದೆ. ಇದನ್ನು ಗಮನಿಸಿ ಪ್ರತಿವರ್ಷ ಜೂನ್ ೨೧ ರಂದು ಯೋಗ ದಿನ ಆಚರಿಸಲಾಗುತ್ತದೆ. |