ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹಾಸ್ಯಾಸ್ಪದ ಹೇಳಿಕೆ !
ಬೆಂಗಳೂರು – ಸೇನೆಯ ‘ಅಗ್ನಿಪಥ’ ಯೋಜನೆಯಿಂದ ಎರಡುವರೆ ಲಕ್ಷ ಯುವಕರನ್ನು ಸೇವೆಗೆ ತೆಗೆದುಕೊಳ್ಳಬಹುದು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿರುವರು. ಇದು ಸಂಘದ ಗುಪ್ತತಂತ್ರವಾಗಿದೆ. ೪ ವರ್ಷ ಸೇವೆಯ ನಂತರ ಶೇ. ೭೫ ರಷ್ಟು ಯುವಕರನ್ನು ಸೈನ್ಯದಿಂದ ನಿವೃತ್ತಿ ಮಾಡಲಾಗುವುದು, ಅವರು ದೇಶಾದ್ಯಂತ ಹರಡಲಿದ್ದಾರೆ. ಅವರೂ ಸಂಘದ ಸ್ವಯಂ ಸೇವಕರಾಗಿದ್ದರೆ ಸೇನೆಯ ಮೇಲೆ ಹಿಡಿತ ಸಾಧಿಸುವ ಯತ್ನವಾಗಿದೆ ಎಂಬ ಹಾಸ್ಯಾಸ್ಪದ ಹೇಳಿಕೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದರು. ‘ಬಹುಶಃ ಅವರಿಗೆ(ಸಂಘಕ್ಕೆ) ದೇಶದಲ್ಲಿ ನಾಝಿ ಆಡಳಿತವನ್ನು ತರಬೇಕಾಗಿದೆ. ಅದಕ್ಕಾಗಿ ಅವರು ಅಗ್ನಿಪಥ ಯೋಜನೆ ತಂದಿದ್ದಾರೆ’, ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವುಈ ರೀತಿ ಆರೋಪ ಮಾಡುವವರ ಮೇಲೆ ಅಪರಾಧ ದಾಖಲಿಸಿ ಅವರನ್ನು ಜೈಲಿಗೆ ಏಕೆ ಹಾಕಲಾಗುತ್ತಿಲ್ಲ ? |