ಮಹಾವಿದ್ಯಾಲಯದ ಪ್ರಾಚಾರ್ಯರ ಮೇಲೆ ಕೈಯೆತ್ತಿದ ಜನತಾದಳದ ಶಾಸಕ !

ಸಾಮಾಜಿಕ ಜಾಲತಾಣದಲ್ಲಿ ಶಾಸಕರಿಗೆ ವಿರೋಧ

ಜನತಾದಳ (ಜಾತ್ಯತೀತ) ದ ಶಾಸಕ ಎಂ ಶ್ರೀನಿವಾಸ್ ಇವರು ಒಂದು ಮಹಾವಿದ್ಯಾಲಯ ಪ್ರಾಚಾರ್ಯರ ಮೇಲೆ ಕೈಯೆತ್ತಿದರು.

ಮಂಡ್ಯ – ಜಾತ್ಯತೀತ ಜನತಾದಳದ ಶಾಸಕ ಶ್ರೀನಿವಾಸ್ ಅವರು ಇಲ್ಲಿಯ ಒಂದು ಮಹಾವಿದ್ಯಾಲಯದ ಪ್ರಾಚಾರ್ಯರ ಮೇಲೆ ಕೈತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ದರಿಂದ ಜನರು ಶ್ರೀನಿವಾಸರವರನ್ನು ನಿಷೇಧಿಸುತ್ತಿದ್ದಾರೆ. ಶ್ರೀನಿವಾಸ್ ಇವರು ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಆಗ ಗಣಕಯಂತ್ರ ವಿಭಾಗದಲ್ಲಿ ಕಾರ್ಯನಿರತವಾಗಿರುವ ಪ್ರಾಚಾರ್ಯರು ಕೇಳಿರುವ ಪ್ರಶ್ನೆಗೆ ಸಮಾಧಾನಕಾರಕ ಉತ್ತರ ನೀಡಲು ಸಾಧ್ಯವಾಗಲಿಲ್ಲವೆಂದು ಶ್ರೀನಿವಾಸ್ ಇವರು ಅವರ ಮೇಲೆ ಕೈ ಎತ್ತಿದರು.

ವೀಡಿಯೋದಲ್ಲಿ ಶ್ರೀನಿವಾಸ್ ಇವರು ಪ್ರಾಚಾರ್ಯರ ಮೇಲೆ ೨-೩ ಸಾರಿ ಕೈಯತ್ತಿರುವುದು ಕಾಣುತ್ತಿದೆ. ಆದರೆ ಪ್ರಾಚಾರ್ಯರಿಗೆ ಕೈ ತಗಲಿದೆ ಅಥವಾ ಇಲ್ಲ ಇದು ಸ್ಪಷ್ಟವಾಗಿ ಕಾಣುತ್ತಿಲ್ಲ. ಆ ಸಮಯದಲ್ಲಿ ಪ್ರಾಚಾರ್ಯರು ಶಾಂತವಾಗಿ ನಿಂತಿದ್ದರು. ಈ ಪ್ರಕರಣದಲ್ಲಿ ಪ್ರಾಚಾರ್ಯರು ಪೊಲೀಸರಿಗೆ ದೂರನ್ನು ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ. ಇನ್ನೊಂದು ಕಡೆ ಈ ವೀಡಿಯೋ ವಿಷಯದಲ್ಲಿ ಶಾಸಕ ಶ್ರೀನಿವಾಸ್ ಅವರ ಕಡೆಯಿಂದ ಯಾವುದೇ ಸ್ಪಷ್ಟೀಕರಣ ಬಂದಿಲ್ಲ.

(ಸೌಜನ್ಯ : Tv9 Kannada)

ಸಂಪಾದಕರ ಭೂಮಿಕೆ
ಒಬ್ಬ ಪ್ರಾಚಾರ್ಯರೊಂದಿಗೆ ಈ ರೀತಿ ನಡೆಸಿಕೊಳ್ಳಲಾಗುತ್ತಿದೆ, ಅಂದರೆ ಸರ್ವಸಾಮಾನ್ಯ ಜನರ ಜೊತೆಗೆ ಯಾವ ರೀತಿ ವರ್ತಿಸಬಹುದೆಂಬುವುದರ ಯೋಚನೆ ಮಾಡದೇ ಇರುವುದು ಒಳ್ಳೆಯದು.

ಜನಪ್ರತಿನಿಧಿಗಳು ಇವರು ಜನರ ರಕ್ಷಕರ ಅಲ್ಲದೆ ಭಕ್ಷಕ ರಾಗಿರುವುದು ಇದು ಉದಾಹರಣೆ ! ಈ ರೀತಿ ಯ ಶಾಸಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !