ಅಗ್ನಿಪಥ ಯೋಜನೆಯ ವಿರುದ್ಧ ನಡೆಯುತ್ತಿರುವ ಗಲಭೆಗಳ ಪ್ರಕರಣ

ಸುಧಾರಣೆಗಳು ಅಹಿತಕರವಾಗಿ ಕಾಣಿಸಬಹುದು ಆದರೆ ದೀರ್ಘಾವಧಿಯ ಪರಿಣಾಮಗಳು ಒಳ್ಳೆಯದು ! – ಪ್ರಧಾನ ಮಂತ್ರಿ

ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು – ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಕ್ರಮದಲ್ಲಿ ‘ಅಗ್ನಿಪಥ’ ಈ ಸೈನ್ಯ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಉಲ್ಲೇಖಿಸದೆ ಹೇಳಿಕೆ ನೀಡಿದ್ದಾರೆ. ಅವರು, ‘ಯಾವುದೇ ನಿರ್ಧಾರ ಅಥವಾ ತಿದ್ದುಪಡಿಯು ಈ ಕ್ಷಣದಲ್ಲಿ ಅಹಿತಕರವೆಂದು ತೋರುತ್ತಿದ್ದರೂ ಕಾಲಾಂತರದಲ್ಲಿ ಉತ್ತಮ ಮತ್ತು ದೂರದ ಪರಿಣಾಮಗಳನ್ನು ದೇಶ ಅನುಭವಿಸುತ್ತದೆ.’ ಎಂದು ಹೇಳಿದರು.
ಪ್ರಧಾನಿ ತಮ್ಮ ಮಾತನ್ನು ಮುಂದುವರೆಸುತ್ತಾ, ಹೊಸ ಉದ್ಯೋಗಗಳಲ್ಲಿ ಮತ್ತು ನೂತನೀಕರಣಗಳಿಗಾಗಿ ಕಳೆದ ೮ ವರ್ಷಗಳಿಂದ ಮಾಡಿದ ಪ್ರಯತ್ನಗಳು ಸುಲಭವಿರಲಿಲ್ಲ. ಸುಧಾರಣೆಗಳಿಂದ ನಮಗೆ ಹೊಸ ಗುರಿಗಳು ಮತ್ತು ಪರಿಕಲ್ಪನೆಗಳತ್ತ ಸಾಗಲು ಅನುವು ಮಾಡಿಕೊಡುತ್ತದೆ. ಈ ವೇಳೆ ಅವರು ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳನ್ನು ಪ್ರಸ್ಥಾಪಿಸಿದರು. ‘ಅನೇಕ ಸದುದ್ದೇಶದ ಯೋಜನೆಗಳು ರಾಜಕೀಯ ಬಣ್ಣಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ನಮ್ಮ ದೇಶದ ದೌರ್ಭಾಗ್ಯವಾಗಿದೆ ಎಂದು ಹೇಳಿದರು. ಇದರಲ್ಲಿ ಪ್ರಸಾರ ಮಾಧ್ಯಮಗಳೂ ಭಾಗಿಯಾಗಿವೆ’, ಎಂಬ ಖೇದವನ್ನು ಮೋದಿಯವರು ವ್ಯಕ್ತಪಡಿಸಿದರು.