ಜಮ್ಮು-ಕಾಶ್ಮೀರದಲ್ಲಿನ 5 ಜಿಲ್ಲೆಗಳ 7 ಸ್ಥಳಗಳಲ್ಲಿ ಕಾಶ್ಮೀರಿ ಹಿಂದೂಗಳಿಗೋಸ್ಕರ 2 ಸಾವಿರ 744 ಮನೆಗಳನ್ನು ನಿರ್ಮಿಸುವೆವು !

ಕಾಶ್ಮೀರಿ ಹಿಂದೂಗಳಿಗೋಸ್ಕರ ಮನೆ ಕಟ್ಟಿದರೂ, ‘ಅದನ್ನು ರಕ್ಷಿಸುವವರು ಯಾರು?’ ಎಂಬುದು ಮೂಲ ಪ್ರಶ್ನೆ. ಇಂದು ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ, ಇದು ವಸ್ತುಸ್ಥಿತಿಯಾಗಿದೆ !

ಭಾರತದಲ್ಲಿನ ಏಕೈಕ ಮುಸಲ್ಮಾನ ಪ್ರಾಬಲ್ಯವಿರುವ ರಾಜ್ಯವನ್ನು ಭಾಜಪವು ವಿಭಜಿಸಿತು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಆರೋಪ

ಮುಸಲ್ಮಾನ ಪ್ರಾಬಲ್ಯ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹೇಗಿದೆ ಎಂಬುದನ್ನು ಇಡೀ ಪ್ರಪಂಚವೇ ನೋಡಿದೆ ಮತ್ತು ಬಹುಸಂಖ್ಯಾತ ಹಿಂದೂ ದೇಶದ ಮುಸಲ್ಮಾನರು ಹೇಗಿದ್ದಾರೆ ಇದನ್ನು ಸಹ ಪ್ರಪಂಚ ನೋಡಿದೆ ಇದನ್ನು ಮೆಹಬೂಬಾ ಮಫ್ತಿಯವರು ಯಾವಾಗಲೂ ನೆನಪಿನಲ್ಲಿ ಇಡಬೇಕು.

ಕಾಶ್ಮೀರದಲ್ಲಿ ನಡೆದ ಘರ್ಷಣೆಯಲ್ಲಿ ಲಷ್ಕರ್-ಎ-ತೋಯಿಬಾದ ಇಬ್ಬರು ಉಗ್ರರ ಸಾವು

ಜುಲೈ ೨೨ ರಂದು ಸೊಪೋರಾ ಪ್ರದೇಶದ ವಾರಪೋರಾ ಗ್ರಾಮದಲ್ಲಿ ಸೇನೆ ಮತ್ತು ಉಗ್ರರ ನಡುವೆ ರಾತ್ರಿವಿಡಿ ನಡೆದ ಘರ್ಷಣೆಯಲ್ಲಿ ಜಿಹಾದಿ ಭಯೋತ್ಪಾದಕ ಸಂಘಟನೆಯ ‘ಲಷ್ಕರ್-ಎ-ತೋಯಿಬಾ’ಕ್ಕೆ ಸೇರಿದ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಡ್ರೋನ್‍ಗಳನ್ನು ಉರುಳಿಸಿದ ಭಾರತೀಯ ಸೇನೆ : ೫ ಕೆಜಿ ಸ್ಫೋಟಕ ಸ್ವಾಧೀನ !

ಜಿಹಾದಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅವರು ಅಖನೂರ ಬಳಿ ಡ್ರೋನ್‍ನಿಂದ ದಾಳಿ ನಡೆಸಲು ಸಂಚು ಮಾಡಿದೆ ಎಂಬ ಮಾಹಿತಿ ಸಿಕ್ಕಿದ ನಂತರ ಸೈನ್ಯವು ವ್ಯೂಹವನ್ನು ರಚಿಸಿತು. ಅದರಂತೆ ಮಧ್ಯರಾತ್ರಿ ೧ ಗಂಟೆಗೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.

ಪುಲ್ವಾಮಾದಲ್ಲಿ ಲಷ್ಕರ್-ಎ-ತೋಯಬಾದ ಕಮಾಂಡರ್ ಸಹಿತ ೩ ಭಯೋತ್ಪಾದಕರ ಹತ್ಯೆ

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ಭಯೋತ್ಪಾದಕರನ್ನು ಹತ್ಯೆ ಮಾಡುತ್ತಿದ್ದರೂ, ಅಲ್ಲಿಯ ಭಯೋತ್ಪಾದನೆ ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಎಲ್ಲಿಯವರೆಗೆ ಭಯೋತ್ಪಾದಕರನ್ನು ತಯಾರಿಸುವ ಪಾಕಿಸ್ತಾನವನ್ನು ನಾಶ ಮಾಡುವುದಿಲ್ಲವೋ ಅಲ್ಲಿಯವರೆಗೆ ಹೊಸ ಭಯೋತ್ಪಾದಕರು ಹೊರಹೊಮ್ಮುತ್ತಲೇ ಇರುತ್ತಾರೆ ! ಆದ್ದರಿಂದ, ಪಾಕ್ ಎಂಬ ಭಸ್ಮಾಸುರನನ್ನು ನಾಶಮಾಡಿ !

ಭಯೋತ್ಪಾದಕರಿಗೆ ಹಣಕಾಸು ಒದಗಿಸಿದ್ದಕ್ಕಾಗಿ ಕಾಶ್ಮೀರದಲ್ಲಿ ಈವರೆಗೆ ೫ ಮಂದಿಯ ಬಂಧನ !

ಭಯೋತ್ಪಾದಕರಿಗೆ ಹಣಕಾಸು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಈವರೆಗೆ ಕಾಶ್ಮೀರದಲ್ಲಿ ಐದು ಜನರನ್ನು ಬಂಧಿಸಿದೆ. ಇದರಲ್ಲಿ ೩೬ ವರ್ಷದ ಮಹಿಳೆ ಕೂಡ ಭಾಗಿಯಾಗಿದ್ದು, ಆಕೆಯಿಂದ ಚೀನಾದ ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರಗೀತೆಗಾಗಿ ಎದ್ದು ನಿಲ್ಲದಿರುವುದು, ರಾಷ್ಟ್ರಗೀತೆಗೆ ಮಾಡಿದ ಅವಮಾನ; ಆದರೆ ಅಪರಾಧವಲ್ಲ ! – ಜಮ್ಮು- ಕಾಶ್ಮೀರ ಉಚ್ಚನ್ಯಾಯಾಲಯದ ವ್ಯಾಖ್ಯಾನ

ರಾಷ್ಟ್ರಗೀತೆಗಾಗಿ ನಿಲ್ಲದಿರುವುದು, ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನವಾಗಬಹುದು; ಆದರೆ ಅದು ರಾಷ್ಟ್ರೀಯ ಚಿಹ್ನೆಗಳ ಅವಮಾನವನ್ನು ತಡೆಯುವ ಅಧಿನಿಯಮದ ಅಡಿಯಲ್ಲಿ ಅದು ಅಪರಾಧವೆಂದು ಪರಿಗಣಿಸಲ್ಪಡುವುದಿಲ್ಲ,

ಕಾಶ್ಮೀರದಲ್ಲಿ ಕಳೆದ ೨೪ ಗಂಟೆಯಲ್ಲಿ ೫ ಭಯೋತ್ಪಾದಕರ ಸಾವು

ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕರ ಸಂಹಾರ ಮಾಡಲಾಗುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ನಾಶವಾಗುತ್ತಿಲ್ಲ; ಇದಕ್ಕೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಯವು ಪಾಕ್‍ನಿಂದ ನಿರಂತರವಾಗಿ ನಡೆಯುತ್ತದೆ. ಅದನ್ನು ನಿಲ್ಲಿಸಲು ಪಾಕ್‍ಅನ್ನು ನಾಶ ಮಾಡುವುದು ಅಗತ್ಯವಿದೆ !

ಜಮ್ಮುವಿನಲ್ಲಿ ಮೂರನೇಯ ಬಾರಿ ಕಂಡುಬಂದ ಡ್ರೋನ್ !

ಈ ಹಿಂದೆ ಭಾರತೀಯ ವಾಯುದಳದ ನೆಲೆಯ ಮೇಲೆ ಜಿಹಾದಿ ಭಯೋತ್ಪಾದಕರು ಡ್ರೋನ್ ಮೂಲಕ ಬಾಂಬ್ ಸ್ಪೋಟ ಮಾಡಿದ್ದರು ಮತ್ತು ಮಾರನೇಯ ದಿನ ಅಲ್ಲಿಯ ಸೈನ್ಯ ದಳದ ನೆಲೆಯ ಮೇಲೆ ಕಂಡು ಬಂದಿದ್ದ ಡ್ರೋನ್ ಮೇಲೆ ಸೈನಿಕರು ಗುಂಡು ಹಾರಾಟ ಮಾಡಿ ಓಡಿಸಿದ್ದರು.

ಪುಲವಾಮಾ(ಜಮ್ಮು-ಕಾಶ್ಮೀರ)ದಲ್ಲಿ ಭಯೋತ್ಪಾದಕರಿಂದ ಮಾಜಿ ಪೊಲೀಸ್ ಅಧಿಕಾರಿ ಸಹಿತ ಅವರ ಹೆಂಡತಿ ಮತ್ತು ಮಗಳ ಹತ್ಯೆ

ಜಮ್ಮುವಿನಲ್ಲಿ ಭಾರತೀಯ ವಾಯುದಳದ ನೆಲೆಯ ಮೇಲೆ ಡ್ರೋನ್ ಮೂಲಕ ದಾಳಿ ಮಾಡಿದ ೨೪ ಗಂಟೆಗಳಲ್ಲಿ ಜಿಹಾದಿ ಭಯೋತ್ಪಾದಕರು ಇಲ್ಲಿಯ ಅವಂತಿಪೊರಾ ಪ್ರದೇಶದ ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಫಯ್ಯಾಜ ಅಹಮದ ಇವರನ್ನು ಹತ್ಯೆ ಮಾಡಿದ್ದಾರೆ. ಭಯೋತ್ಪಾದಕರು ಅಹಮದರ ಮನೆಗೆ ನುಗ್ಗಿ ಅವರ ಮತ್ತು ಅವರ ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.