ಸಿಯಾಚಿನ್ ನಲ್ಲಿ ವೀರ ಮರಣ ಹೊಂದಿದ ಅಕ್ಷಯ ಲಕ್ಷ್ಮಣ ಗಾವತೆ ಇವರು ಮೊದಲ ಅಗ್ನಿವೀರ !

ಶ್ರೀನಗರ (ಜಮ್ಮು- ಕಾಶ್ಮೀರ) – ಜಗತ್ತಿನ ಎಲ್ಲಕ್ಕಿಂತ ಎತ್ತರದ ಸೇನಾ ನೆಲೆಯಾಗಿರುವ ಸಿಯಾಚಿನ್ ನಲ್ಲಿ ನೇಮಕವಾಗಿದ್ದ ಭಾರತೀಯ ಸೈನಿಕ ಅಕ್ಷಯ ಲಕ್ಷ್ಮಣ ಗಾವತೆ ಇವರು ವೀರಗತಿ ಪಡೆದರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಇವರು ಮೊದಲ ಅಗ್ನಿ ವೀರರಾಗಿದ್ದಾರೆ. ಅಕ್ಷಯ್ ಇವರು ಭಾರತೀಯ ಸೈನ್ಯದಲ್ಲಿ ‘ಫಾಯರ್ ಅಂಡ್ ಪ್ಯೂರಿ’ ಈ ವಿಭಾಗದಲ್ಲಿ ಕಾರ್ಯನಿರತವಾಗಿದ್ದರು. ಅವರ ಮೃತ್ಯುವಿನ ಖಚಿತ ಕಾರಣ ತಿಳಿದು ಬಂದಿಲ್ಲ.

ಕಾರಕೋರಂ ಪರ್ವತ ಪ್ರದೇಶದ ಸುಮಾರು ೨೦ ಸಾವಿರ ಅಡಿ ಎತ್ತರದಲ್ಲಿ ಇರುವ ಸಿಯಾಚಿನ ಹಿಮನದಿಯ ಪರಿಸರದಲ್ಲಿ ಜಗತ್ತಿನಲ್ಲಿನ ಎಲ್ಲಕ್ಕಿಂತ ಎತ್ತರವಾದ ಸೇನಾ ನೆಲೆಯಾಗಿದೆ. ಇಲ್ಲಿ ಭಾರತೀಯ ಸೈನಿಕರಿಗೆ ಪ್ರಚಂಡ ಚಳಿಯ ವಾತಾವರಣ ಎದುರಿಸಬೇಕಾಗುತ್ತದೆ. ಜೂನ್ ತಿಂಗಳಲ್ಲಿ ಅಗ್ನಿ ಅವಘಡದಿಂದ ಇಲ್ಲಿಯ ನೆಲೆಯಲ್ಲಿ ಓರ್ವ ಸೈನಿಕನ ಸಾವು ಸಂಭವಿಸಿದ್ದೂ ಮೂರು ಸೈನಿಕರು ಗಾಯಗೊಂಡಿದ್ದರು.

ಏನು ಈ ‘ಅಗ್ನಿವೀರ’ ಯೋಜನೆ ?

‘ಅಗ್ನಿವೀರ’ ಇದು ಭಾರತೀಯ ಸೈನ್ಯದಲ್ಲಿ ಸೈನಿಕರಿಗೆ ೪ ವರ್ಷಗಳಿಗಾಗಿ ಸೇರಿಸಿಕೊಳ್ಳುವ ಸರಕಾರಿ ಯೋಜನೆ ಆಗಿದ್ದು ಇದರ ಅಡಿಯಲ್ಲಿ ಕೇವಲ ಸೈನಿಕರ ನೇಮಕ ಮಾಡಲಾಗುತ್ತದೆ. ಇದರಲ್ಲಿ ಸೈನ್ಯಾಧಿಕಾರಿಗಳ ಸಮಾವೇಶ ಇರುವುದಿಲ್ಲ. ಈ ಯೋಜನೆಯ ಅಡಿಯಲ್ಲಿ ನೇಮಕಗೊಂಡಿರುವ ಸೈನಿಕರಿಗೆ ‘ಅಗ್ನಿ ವೀರ’ ಎಂದು ಕರೆಯುತ್ತಾರೆ.