ಜಮ್ಮು ಕಾಶ್ಮೀರದಲ್ಲಿ ರೊಹಿಂಗ್ಯಾ ಮುಸಲ್ಮಾನರಿಗೆ ನಿವಾಸಿ ಪ್ರಮಾಣಪತ್ರ ತಯಾರಿಸುವ ಗ್ಯಾಂಗ್ ಬಂಧನ

ವಿವಾಹಕ್ಕಾಗಿ ಒಂದು ಲಕ್ಷ ರೂಪಾಯಿಗೆ ರೋಹಿಂಗ್ಯಾ ಮಹಿಳೆಯರ ಖರೀದಿ !

ಶ್ರೀನಗರ (ಜಮ್ಮು- ಕಾಶ್ಮೀರ) – ಜಮ್ಮು ಕಾಶ್ಮೀರದಲ್ಲಿ ರೋಹಿಂಗ್ಯ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ. ೨೦೧೨ ರಿಂದ ಅವರು ಇಲ್ಲಿ ನುಗ್ಗಿ ಬರುತ್ತಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ೮ ಸಾವಿರು ರೋಹಿಂಗ್ಯಾಗಳು ನುಸುಳಿ ಬಂದುದ್ದಾರೆ . ಮ್ಯಾನ್ಮಾರಿನ ಓರ್ವ ಮಹಿಳೆಯ (ಡೋಮಿಸಾಯಿಲ್) ನಿವಾಸಿ ಪ್ರಮಾಣಪತ್ರ ನೀಡಿರುವ ಪ್ರಕರಣ ಬೆಳಕಿಗೆ ಬಂದ ನಂತರ ರೋಹಿಂಗ್ಯಗಳ ಸಂದರ್ಭದಲ್ಲಿನ ಅನೇಕ ಅಂಶಗಳು ಬೆಳಕಿಗೆ ಬಂದವು. ಮ್ಯಾನ್ಮಾರಿನ ನಿವಾಸಿ ಆಗಿರುವ ಅನ್ವರಾಳು ಕಾಶ್ಮೀರದಲ್ಲಿ ವಾಸಿಸುವ ಯುವಕನ ಜೊತೆಗೆ ವಿವಾಹ ಮಾಡಿಕೊಂಡು ಅನೇಕ ವರ್ಷಗಳು ರಾಜ್ಯದಲ್ಲಿ ವಾಸಿಸುತ್ತಿದ್ದಾಳೆ. ೨೦೨೦ ರಲ್ಲಿ ಅವರು ನಿವಾಸಿ ಪ್ರಮಾಣಪತ್ರ ಪಡೆದರು. ಪೊಲೀಸರು ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಾರ್ಥಮಿಕ ತನಿಖೆಯ ನಂತರ ಪ್ರಮಾಣಪತ್ರ ನೀಡುವ ಓರ್ವ ಮಹಿಳಾ ಸಿಬ್ಬಂದಿ, ಒಬ್ಬ ಸೂತ್ರದಾರ ಮತ್ತು ಪ್ರಮಾಣ ಪತ್ರ ಪ್ರಸಾರ ಮಾಡುವ ಅಧಿಕಾರಿ ಇವರ ವಿರುದ್ಧ ಕೂಡ ದೂರು ದಾಖಲಿಸಲಾಗಿದೆ.

ನಿವಾಸಿ ಪ್ರಮಾಣಪತ್ರ ತಯಾರಿಸುವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅವರ ಜಾಲ ಕಾಶ್ಮೀರದಲ್ಲಿನ ವೃದ್ಧರು, ಅಂಗವಿಕಲರು ಮತ್ತು ಬಡಜನರ ಸಾಗಾಣಿಕೆ ಮಾಡುವ ರೋಹಿಂಗ್ಯಾ ಮಹಿಳೆಯರ ಜೊತೆಗೆ ವಿವಾಹ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ. ಈ ಮಹಿಳೆಯರನ್ನು ೨೦ ಸಾವಿರರಿಂದ ೧ ಲಕ್ಷ ರೂಪಾಯ ವರೆಗೆ ಖರೀದಿಸುತ್ತಾರೆ.

ರೋಹಿಂಗ್ಯಗಳ ವಿರುದ್ಧ ನಡೆಯುತ್ತಿರುವ ಅಭಿಯಾನ !

ಕೇಂದ್ರ ಸರಕಾರವು ೨೦೨೧ ರಲ್ಲಿ ರೋಹಿಂಗ್ಯಗಳ ಗುರುತು ಪತ್ತೆ ಹಚ್ಚುವುದಕ್ಕಾಗಿ ಅಭಿಯಾನ ಆರಂಭಿಸಿದ್ದಾರೆ. ಇದರ ಅಡಿಯಲ್ಲಿ ಬಯೋಮೆಟ್ರಿಕ್ ಮತ್ತು ಇತರ ಪರೀಕ್ಷೆಯ ನಂತರ ೩೦೦ ನುಸುಳುಕೋರರು ಜಮ್ಮುವಿನ ಹಿರಾನಗರ ಜೈಲಿನಲ್ಲಿನ ತಾತ್ಕಾಲಿಕ ಕೇಂದ್ರಗಳಲ್ಲಿ ಇರಿಸಲಾಗಿದೆ. ಈ ಕೇಂದ್ರದಲ್ಲಿ ಪೊಲೀಸರ ಮತ್ತು ಕೈದಿಗಳ ನಡುವೆ ಅನೇಕ ಬಾರಿ ಚಕಮಕಿ ನಡೆದಿವೆ. ರೋಹಿಂಗ್ಯಾಗಳು ಈ ಕೇಂದ್ರದಿಂದ ಬಿಡುಗಡೆಗೊಳಿಸಿ ಅಥವಾ ಮ್ಯಾನ್ಮಾರಿಗೆ ಹಿಂತಿರುಗಿ ಹೋಗಲು ಆಗ್ರಹಿಸುತ್ತಿದ್ದಾರೆ.

ದೇಶದಲ್ಲಿನ ರೋಹಿಂಗ್ಯಗಳ ಜನಸಂಖ್ಯೆ ೧೮ ಸಾವಿರ

ಗೃಹ ಸಚಿವಾಲಯವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ, ಡಿಸೆಂಬರ್ ೨೦೨೧ ರ ವರೆಗೆ ಭಾರತದಲ್ಲಿ ೧೮ ಸಾವಿರ ರೋಹಿಂಗ್ಯ ಮುಸಲ್ಮಾನರು ಇದ್ದಾರೆ. ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಎನ್. ಸಿ.ಆರ್, ರಾಜಸ್ಥಾನ, ಮಣಿಪುರ ಮತ್ತು ಭಾಗ್ಯನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಹಿಂಗ್ಯ ಮುಸಲ್ಮಾನರು ವಾಸಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ನುಸುಳುಕೋರ ರೋಹಿಂಗ್ಯಾ ಮುಸಲ್ಮಾನರನ್ನು ಎಂದು ಹೊರಗೆ ಅಟ್ಟುವಿರಿ ? ಪಾಕಿಸ್ತಾನ ೧೧ ಲಕ್ಷ ಅಪಘಾನಿಗಳನ್ನು ಹೊರ ಅಟ್ಟುತ್ತಿರಬೇಕಾದರೆ ಭಾರತ ಯಾವಾಗ ಕಠಿಣ ಕ್ರಮ ತೆಗೆದುಕೊಳ್ಳುವುದು ?