ಜಮ್ಮು-ಕಾಶ್ಮೀರ ಪೊಲೀಸರು ಜಾಮೀನು ಪಡೆದ ಭಯೋತ್ಪಾದಕನ ಕಾಲಿನಲ್ಲಿ ಜಿ.ಪಿ.ಎಸ್. ಅಳವಡಿಸಿ ನಿಗಾ ಇಡಲಿದೆ !

(ಜಿ.ಪಿ.ಎಸ್. ಮೂಲಕ ಒಂದು ವಸ್ತು ಅಥವಾ ವ್ಯಕ್ತಿಯ ಸ್ಥಳವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.)

ಶ್ರೀನಗರ (ಜಮ್ಮು-ಕಾಶ್ಮೀರ) – ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ; ಹಾಗೂ ಜಾಮೀನಿನ ಮೇಲೆ ಬಿಡುಗಡೆಯಾದವರ ಮೇಲೆ ನಿಗಾ ಇಡಲು ಜಮ್ಮು-ಕಾಶ್ಮೀರ ಪೊಲೀಸರು ಜಿ.ಪಿ.ಎಸ್. ಉಪಕರಣವನ್ನು ಬಳಸಲು ಪ್ರಾರಂಭಿಸಿದ್ದಾರೆ. ಈ ಪದ್ಧತಿಯನ್ನು ಬಳಸಿದವರಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ದೇಶದಲ್ಲಿ ಮೊದಲಿಗರಾಗಿದ್ದಾರೆ. ಈ ರೀತಿಯ ವ್ಯವಸ್ಥೆಯನ್ನು ಅಮೇರಿಕಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳು ಆರೋಪಿಗಳಿಗಾಗಿ ಬಳಸಲಾಗುತ್ತದೆ.

ಜಮ್ಮು-ಕಾಶ್ಮೀರ ಪೊಲೀಸರ ಪ್ರಪ್ರಥಮ ಬಾರಿಗೆ ಜಿಪಿಎಸ್ ಉಪಕರಣವನ್ನು ಹಿಜಬುಲ ಮುಜಾಹಿದೀನ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಭಯೋತ್ಪಾದಕ ಗುಲಾಮ ಮಹಮ್ಮದನಿಗೆ ಅಳವಡಿಸಿದೆ. ಈ ಉಪಕರಣವನ್ನು ಅವನ ಕಾಲಿನ ಹಿಮ್ಮಡಿಯ ಮೇಲೆ ಅಳವಡಿಸಲಾಗಿದೆ. ಗುಲಾಮನನ್ನು ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು ಮತ್ತು ಅವನು 12 ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಶಿಕ್ಷೆ ಅನುಭವಿಸಿದ ನಂತರವೂ ಆತ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು. ತದನಂತರ ಆತನನ್ನು ಬಂಧಿಸಲಾಗಿತ್ತು. (ಜಿಹಾದ್ ಭಯೋತ್ಪಾದಕರಿಗೆ ಶಿಕ್ಷೆಯಾಗಿ, ಅವರು ಅದನ್ನು ಅನುಭವಿಸಿದರೂ, ಅವರಲ್ಲಿರುವ ಜಿಹಾದಿ ಮನೋಭಾವ ಬದಲಾಗುವುದಿಲ್ಲ. ಆದ್ದರಿಂದ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಭಯೋತ್ಪಾದಕರ ಮೇಲೆ ಅಂಕುಶ ಇಡಲು ಎಷ್ಟೇ ಉನ್ನತ ತಂತ್ರಜ್ಞಾನ ಬಳಸಿದರೂ ಭಯೋತ್ಪಾದಕರು ಅದನ್ನು ಮೆಟ್ಟಿ ನಿಂತು ಭಯೋತ್ಪಾದನಾ ಚಟುವಟಿಕೆ ನಡೆಸುತ್ತಾರೆ ಎಂಬುದು ಹಲವು ಘಟನೆಗಳಿಂದ ಸಾಬೀತಾಗಿದೆ. ಹಾಗಾಗಿ ತಂತ್ರಜ್ಞಾನದೊಂದಿಗೆ ಭಯೋತ್ಪಾದಕರ ವಿರುದ್ಧ ಕಠಿಣ ನೀತಿಯನ್ನು ಯಾವಾಗಲೂ ಅಳವಡಿಸಿಕೊಳ್ಳುವುದು ಆವಶ್ಯಕವಾಗಿದೆ !