Terrorist Attack : ರಾಜೌರಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೫ ಸೈನಿಕರು ವೀರಗತಿ !

  • ೨ ಸೈನಿಕರ ಶವ ಭಯಾವಹ ಅವಸ್ಥೆಯಲ್ಲಿ ಪತ್ತೆ !

  • ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳ ಲೂಟಿ !

ಶ್ರೀನಗರ (ಜಮ್ಮು ಕಾಶ್ಮೀರ) – ಕಾಶ್ಮೀರದ ರಾಜೌರಿಯಲ್ಲಿ ಜಿಹಾದಿ ಭಯೋತ್ಪಾದಕರು ಡಿಸೆಂಬರ್ ೨೧ ರ ಮಧ್ಯಾಹ್ನ 3:45 ರ ಸಮಯದಲ್ಲಿ ಸೈನ್ಯದ ೨ ವಾಹನಗಳ ಮೇಲೆ ದಾಳಿ ಮಾಡಿದ್ದರಿಂದ ೫ ಸೈನಿಕರು ವೀರಗತಿ ಪ್ರಾಪ್ತವಾಗಿದೆ ಹಾಗೂ ೨ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತೀಯ ಸೈನ್ಯದ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ ಸೈನಿಕರು ಮತ್ತು ಭಯೋತ್ಪಾದಕರು ಇವರಲ್ಲಿ ಎದುರುಎದುರು ಚಕಮಕಿ ನಡೆದಿದೆ. ೨ ಸೈನಿಕರ ಶವ ಭಯವಹ ಅವಸ್ಥೆಯಲ್ಲಿ ದೊರೆತಿವೆ. ಭಯೋತ್ಪಾದಕರು ಸೈನಿಕರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಕದ್ದೋಯ್ತಿದ್ದಾರೆ. ಈ ದಾಳಿ ರಾಜೌರಿಯ ಥಾನಾಮಂಡಿ – ಸುರನಕೊಟ ಮಾರ್ಗದ ಡಿಕೆಜಿ ಹೆಸರಿನ ಪರಿಸರದಲ್ಲಿ ನಡೆದಿದೆ. ಸೈನಿಕರನ್ನು ಹೊತ್ತುವೊಯ್ಯುವ ವಾಹನ ಸುರನಕೊಟ ಮತ್ತು ಬಾಫಲಿಯಾಜ ಕಡೆಗೆ ಹೊರಟಿತ್ತು. ಈ ಸ್ಥಳದಲ್ಲಿ ರಕ್ಷಣಾ ತಂಡದಿಂದ ಡಿಸೆಂಬರ್ ೨೦ ರ ರಾತ್ರಿ ಭಯೋತ್ಪಾದಕರ ವಿರುದ್ಧ ಶೋಧ ಅಭಿಯಾನ ಆರಂಭಿಸಲಾಗಿತ್ತು. ಡಿಸೆಂಬರ್ ೨೧ ಕ್ಕೆ ಅಲ್ಲಿ ಹೆಚ್ಚುವರಿ ಸೈನಿಕರನ್ನು ಕಳುಹಿಸಲಾಗಿತ್ತು. ಈ ಸೈನಿಕರ ವಾಹನದ ಮೇಲೆ ದಾಳಿ ನಡೆದಿದೆ. ಈ ದಾಳಿಯ ಮೊದಲು ಎಂದರೆ ಡಿಸೆಂಬರ್ ೧೯ ರ ರಾತ್ರಿ ಪೂಂಛದಲ್ಲಿನ ಸುರನಕೊಟ ಪ್ರದೇಶದಲ್ಲಿನ ಪೊಲೀಸ್ ಠಾಣೆಯಲ್ಲಿ ಸ್ಪೋಟವಾಗಿತ್ತು. ಈ ಸ್ಫೋಟ ಎಷ್ಟು ಶಕ್ತಿಶಾಲಿಯಾಗಿತ್ತು ಎಂದರೆ, ಪೋಲಿಸ್ ಠಾಣೆಯಲ್ಲಿ ನಿಲ್ಲಿಸಿರುವ ಅನೇಕ ವಾಹನಗಳ ಕಿಟಕಿಯ ಗಾಜುಗಳು ಓಡೆದಿದ್ದವು.

ಸಂಪಾದಕೀಯ ನಿಲುವು

‘ಕಾಶ್ಮೀರದಲ್ಲಿ ಭಯೋತ್ಪಾದನೆ ಈಗ ಕಡಿಮೆಯಾಗಿದೆ’, ಎಂದು ಯಾರದರೂ ಹೇಳಿದರೂ, ಅದು ಸುಳ್ಳಾಗಿದೆ, ಇದೇ ಈ ಘಟನೆಯಿಂದ ಜಿಹಾದಿ ಭಯೋತ್ಪಾದಕರು ಹೇಳುತ್ತಿದ್ದಾರೆ. ಕಾಶ್ಮೀರದಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶ ಮಾಡುವುದಕ್ಕಾಗಿ ಅಲ್ಲಿಯ ಜನರ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ !

 

೨೫೦ ರಿಂದ ೩೦೦ ಭಯೋತ್ಪಾದಕರು ಭಾರತದಲ್ಲಿ ನುಸುಳುವ ತಯಾರಿಯಲ್ಲಿ !

ಕಳೆದ ಅನೇಕ ವರ್ಷಗಳಿಂದ ಕೆಲವು ತಿಂಗಳ ಅಂತರದಲ್ಲಿ ಈ ರೀತಿಯ ಮಾಹಿತಿ ಬೆಳಕಿಗೆ ಬರುತ್ತದೆ. ಇದರ ಅರ್ಥ ಎಂದರೆ ಕಾಶ್ಮೀರದಲ್ಲಿ ಭಾರತೀಯ ಸೈನ್ಯದಿಂದ ಎಷ್ಟೇ ಭಯೋತ್ಪಾದಕರನ್ನು ಮುಗಿಸಿದರೂ, ಪಾಕಿಸ್ತಾನದಲ್ಲಿ ಹೊಸ ಭಯೋತ್ಪಾದಕರು ಹುಟ್ಟಿರುತ್ತಾರೆ ಮತ್ತು ಅವರು ಚಟುವಟಿಕೆ ಮುಂದುವರಿಸುತ್ತಾರೆ. ಇದಕ್ಕಾಗಿ ಭಯೋತ್ಪಾದನೆಯ ಕಾರ್ಖಾನೆ ಆಗಿರುವ ಪಾಕಿಸ್ತಾನವನ್ನು ನಾಶ ಮಾಡಬೇಕು, ಇದೇ ಇದರ ಮೇಲೆ ಏಕೈಕ ಉಪಾಯವಾಗಿದೆ.

ಗಡಿ ಭದ್ರತಾ ಪಡೆಯ ಓರ್ವ ಹಿರಿಯ ಅಧಿಕಾರಿಗಳು ಗುಪ್ತಚರರ ವರದಿ ನೀಡುವಾಗ ಕೆಲವು ದಿನಗಳ ಹಿಂದೆ, ೨೫೦ ರಿಂದ ೩೦೦ ಭಯೋತ್ಪಾದಕರು ಪಾಕಿಸ್ತಾನದ ಗಡಿಯಲ್ಲಿ ಲಾಂಚ್ ಪ್ಯಾಡ್ ನಲ್ಲಿ (ಪ್ರಶಿಕ್ಷಿತ ಭಯೋತ್ಪಾದಕರು ಭಾರತದಲ್ಲಿ ನುಸಳುವುದಕ್ಕಾಗಿ ಸೇರಿಸುವ ಸ್ಥಳ) ಇದ್ದಾರೆ. ಅವರು ಕಾಶ್ಮೀರದಲ್ಲಿ ನುಸುಳುವುದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಸುರಕ್ಷಾ ದಳ ಜಾಗರೂಕವಾಗಿ ಇದೆ. ಗಡಿಯಾಚೆಗಿನ ನುಸುಳಕೋರರ ಯಾವುದೇ ಪ್ರಯತ್ನ ಸಫಲವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು.