ಶ್ರೀನಗರ – ಜಮ್ಮು ಕಾಶ್ಮೀರದ ಪೂಂಛನ ಶಿವನ ದೇವಸ್ಥಾನದಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದರು. ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಯ ಸೈನಿಕರು ಘಟನೆ ನಡೆದಿರುವ ಪರಿಸರವನ್ನು ಸುತ್ತುವರೆದರು. ಬಾಂಬ್ ಸ್ಪೋಟದ ಪ್ರಕರಣದಲ್ಲಿ ಅಹಮದ್ ಶೇಖ ಈ ಸರಕಾರಿ ಶಿಕ್ಷಕನ ಜೊತೆಗೆ ಅಬ್ದುಲ್ ರಶೀದ್ ಸಾಲಿಯನ್ ಮತ್ತು ಮೇಹರಾಜ ಅಹಮದ ಈ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರಿಂದ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಈ ಭಯೋತ್ಪಾದಕರು ‘ಲಷ್ಕರ್ ಎ ತೋಯ್ಬಾ’ ಈ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದರು. ಈ ಘಟನೆಯ ಬಗ್ಗೆ ಮಾಹಿತಿ ನೀಡುವಾಗ ದೇವಸ್ಥಾನದ ಅರ್ಚಕರು ಅತುಲ ಶರ್ಮ ಇವರು, ನವಂಬರ್ ೧೫ ರ ರಾತ್ರಿ ೮ ಗಂಟೆ ೫೦ ನಿಮಿಷಕ್ಕೆ ಬಾಂಬ್ ಸ್ಫೋಟವಾಯಿತು. ಅರ್ಚಕರು ಪೊಲೀಸ ಅಧಿಕಾರಿಗಳನ್ನು ಸಂಪರ್ಕಿಸಿದರು. ನಂತರ ಸೂರನಕೋಟದ ಪೊಲೀಸ್ ಅಧಿಕಾರಿ ಮತ್ತು ಪೊಲೀಸ ನಿರೀಕ್ಷಕರು ಘಟನಾ ಸ್ಥಳಕ್ಕೆ ತಲುಪಿದರು ಎಂದು ಹೇಳಿದರು. ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
J and K: Bomb explodes near Shiv Mandir in Poonch a month after posters threatening Hindus and Sikhs to leave their homes appeared in the areahttps://t.co/EonULNhjSw
— OpIndia.com (@OpIndia_com) November 16, 2023