ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ೪ ಸಿಬ್ಬಂದಿ ಅಮಾನತು !

ಪೊಲೀಸ ಪೇದೆ ಮತ್ತು ಡಾಕ್ಟರರ ಬಾಗಿ !

ಶ್ರೀನಗರ (ಜಮ್ಮು- ಕಾಶ್ಮೀರ) – ಜಮ್ಮು ಕಾಶ್ಮೀರ ಸರಕಾರದಿಂದ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇರೆಗೆ ‘ಡಾಕ್ಟರ್ಸ ಅಸೋಸಿಯೇಷನ್ ಆಫ್ ಕಾಶ್ಮೀರ್’ (ಡಿಎಕೆ) ಈ ಸಂಘಟನೆಯ ಅಧ್ಯಕ್ಷ ಮತ್ತು ೩ ಇತರ ಸರಕಾರಿ ಸಿಬ್ಬಂದಿಗಳನ್ನು ಅಮಾನತುಗೊಳಿಸಿದೆ. ಇದರಲ್ಲಿ ಡಾ. ನಿಸಾರ್ ವುಲ್ ಹಸನ್, ಪೊಲೀಸ ಪೇದೆ ಅಬ್ದುಲ್ ಮಜಿದ್ ಭಟ್, ಶಿಕ್ಷಕ ಫಾರೂಕ್ ಅಹಮದ್ ಮಿರ್ ಮತ್ತು ಉನ್ನತ ಶಿಕ್ಷಣ ಇಲಾಖೆಯಲ್ಲಿನ ಪ್ರಯೋಗ ಶಾಲೆಯ ಚಾಲಕ ಸಲಾಂ ರಾಥರ ಇವರ ಸಮಾವೇಶವಿದೆ. ಕಳೆದ ೩ ವರ್ಷಗಳಲ್ಲಿ ಸರಕಾರವು ರಾಷ್ಟ್ರ ವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿ ಆಗಿರುವುದರಿಂದ ೫೯ ಸರಕಾರಿ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಸಂಪಾದಕೀಯ ನಿಲುವು

ಇಂಥವರಿಗೆ ಕೇವಲ ಅಮಾನತುಗೊಳಿಸದೆ ಕಠಿಣ ಶಿಕ್ಷೆ ಆಗುವವರೆಗೆ ಪ್ರಯತ್ನ ಮಾಡಬೇಕು !